ಮನಸ್ಸು ಮಿತ್ರನೂ ಹೌದು; ಶತ್ರುವು ಆಗಿರಬಹುದು


Team Udayavani, Apr 30, 2018, 3:12 PM IST

30-April-13.jpg

ನಮ್ಮ ಉತ್ತಮ ಮಿತ್ರ ಮತ್ತು ಪರಮ ಶತ್ರು ಯಾರೆಂದು ಕೇಳಿದರೆ ನಾವು ನಮಗೆ ಅತ್ಯಂತ ಹತ್ತಿರವಿರುವ ವ್ಯಕ್ತಿ ಮಿತ್ರ ಎನ್ನಬಹುದು. ಕಂಡರೆ ನೆತ್ತಿಗೇರುವಷ್ಟು ಕೋಪ ಬರುವ ವ್ಯಕ್ತಿಯನ್ನು ಪರಮಶತ್ರು ಎನ್ನಬಹುದು. ಆದರೆ ನಮ್ಮ ನಿಜವಾದ ಶತ್ರು ಹಗೂ ಮಿತ್ರ ಇವೆರಡೂ ನಮ್ಮ ಮನಸ್ಸು.

ನಿಮ್ಮ ಮನಸ್ಸಿನ ಭಾವನೆಗಳಿಗೆ ತಕ್ಕಹಾಗೆ ನಿಮ್ಮ ಸುತ್ತಲಿನ ಪ್ರಪಂಚ ನಿಮಗೆ ಹಲವಾರು ರೀತಿಯಲ್ಲಿ ಕಾಣುತ್ತದೆ. ಒಬ್ಬರಿಗೆ ಅಂದವಾಗಿ ಕಾಣುವ ವಸ್ತು ಮತ್ತೂಬ್ಬರಿಗೆ ಅಂದವಾಗಿ ಕಾಣ ಬೇಕಂತೇನೂ ಇಲ್ಲ. ಎಲ್ಲವೂ ಅವರವರ ಭಾವನೆಗಳಿಗೆ ಬಿಟ್ಟಿದ್ದು. ಈ ಭಾವನೆಗಳಿಗೆ ಮೂಲವೇ ಮನಸ್ಸು.

ಒಮ್ಮೆ ಸನ್ಯಾಸಿಯೊಬ್ಬರು ತಪಸ್ಸನ್ನು ಆಚರಿಸಲು ಸೂಕ್ತ ಜಾಗದ ಹುಡುಕಾಟ ನಡೆಸುತ್ತಿದ್ದರು. ಅಲೆದಾಡಿ ಅಲೆದಾಡಿ ಕೊನೆಗೆ ಒಂದು ಶ್ಮಶಾನವನ್ನು ತಪಸ್ಸಿಗೆ ಸೂಕ್ತ ಜಾಗವೆಂದು ಆಯ್ದುಕೊಂಡರು. ತೀವ್ರ ಚಳಿಯಿದ್ದ ಕಾರಣ ಸ್ಮಶಾನವೇ ಉತ್ತಮ ಜಾಗವೆಂಬುದು ಅವರ ನಿಲುವು. ಕುತ್ತಿಗೆಯ ತನಕ ಕಂಬಳಿ ಹೊದ್ದು ತಮ್ಮ ಪಾಡಿಗೆ ಅವರು ತಪಸ್ಸನ್ನು ಆಚರಿಸುತ್ತಿದ್ದರು.

ರಾತ್ರಿ ಪಾಳಿಯಲ್ಲಿದ್ದ ಇಬ್ಬರು ಪೊಲೀಸ್‌ ಪೇದೆಗಳು ಇವರನ್ನು ನೋಡಿ ಇದು ಯವುದೋ ಪ್ರೇತವಾಗಿರಬೇಕು ಎಂದು ಹೆದರಿ ಓಡಿಹೋದರು. ಅದೇ ದಾರಿಯಲ್ಲಿ ಬರುತ್ತಿದ್ದ ದೈವ ಭಕ್ತನೊಬ್ಬ ಇವರನ್ನು ದೂರದಿಂದಲೇ ನೋಡಿ ಇತ ನಿಜವಾಗಿಯೂ ಮಹಾ ಪುರುಷ. ಶ್ಮಶಾನದಲ್ಲಿ ಕೂತು ತಪಸ್ಸನ್ನು ಆಚರಿಸುತ್ತಿದ್ದಾನೆ ಎಂದು ಕೈ ಮುಗಿದು ಹೋದ.

ಈ ಕತೆಯನ್ನೇ ನೋಡಿ. ಇಲ್ಲಿ ಪೊಲೀಸ್‌ ಪೇದೆಗಳು, ದೈವಭಕ್ತ ಇಬ್ಬರೂ ನೋಡಿದ್ದು ಆ ಸನ್ಯಾಸಿಯನ್ನೆ. ಆದರೆ ಅವರ ಮನಸ್ಸು ಅವರನ್ನು ಮಾರ್ಗದರ್ಶನ ಮಾಡಿಸಿದ್ದು ಮಾತ್ರ ಬೇರೆ ಬೇರೆ ತರಹ. ಇಂತಹ ಎಷ್ಟೋ ಘಟನೆಗಳು ನಮ್ಮ ನಡುವೆಯೂ ನಡೆದಿವೆ. ಸುಖಃ -ದುಃಖ, ನೋವು-ನಲಿವು ಇವೆಲ್ಲವೂ ನಿರ್ಧಾರವಾಗುವುದು ನಿಮ್ಮ ಮನಸ್ಸನ್ನು ನೀವು ಎಷ್ಟು ಹಿಡಿತದಲ್ಲಿ ಇಟ್ಟುಕೊಂಡಿದ್ದೀರಿ ಎನ್ನುವುದರ ಮೇಲೆಯೇ ಅವಲಂಬಿತ.

ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡ ಬಡವನೂ ನೂರುಕಾಲ ಖುಷಿಯಿಂದ ಬಾಳಬಹುದು. ಮನೋನಿಯಂತ್ರಣವೇ ಇಲ್ಲದ ಕೋಟ್ಯಾಧೀಶ ಎಲ್ಲ ಇದ್ದು ಏನೂ ಇಲ್ಲದಂತೆ ಬಾಳಬೇಕಾಗಬಹುದು.

ಪ್ರಸನ್ನ ಹೆಗಡೆ ಊರಕೇರಿ 

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.