ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ


Team Udayavani, Nov 14, 2024, 9:21 AM IST

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

ಮಂಗಳೂರು: ಭಾರತ ಜಗತ್ತಿನಲ್ಲೇ ಐದನೇ ಅತಿದೊಡ್ಡ ಆರ್ಥಿಕತೆ ಯಾಗಿರುವುದಕ್ಕೆ ಪರಿಣಾಮಕಾರಿ ನಾಯಕತ್ವ ಹಾಗೂ ರಾಷ್ಟ್ರದ ನೀತಿಗಳೂ ಕಾರಣವಾಗಿವೆ. ಮೂರನೇ ಬಾರಿಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಡಿಜಿಟಲ್‌ ಮೂಲಸೌಕರ್ಯ, ವಿತ್ತೀಯ ಸೇರ್ಪಡೆ ಹಾಗೂ ಯುವಜನರ ಕೌಶಲ ಸುಧಾರಣೆಗೆ ಆದ್ಯತೆ ನೀಡುವ ಖಚಿತ ನಿರ್ದೇಶನಗಳನ್ನು ಹೊಂದಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಬುಧವಾರ ಸಿಟಿಜನ್‌ ಕೌನ್ಸಿಲ್‌ ವತಿಯಿಂದ ಹಮ್ಮಿಕೊಳ್ಳಲಾದ ಅನೌಪಚಾರಿಕ ಸಂವಾದ ಸಮಾರಂಭದಲ್ಲಿ ಮಾತನಾಡಿದರು.

ಭಾರತ 2014ರಲ್ಲಿ 10ನೇ ಸ್ಥಾನದಲ್ಲಿತ್ತು, ಈಗ ನಿರಂತರ ಬೆಳವಣಿಗೆ ಕಂಡು 5ನೇ ಸ್ಥಾನಕ್ಕೆ ಏರಿದೆ. ಆದರೆ ಇದರಲ್ಲಿ ಯಾವುದೆ ವಿಶೇಷ ಇಲ್ಲ, ಇದು ಸಹಜವಾಗಿ ಆಗುವ ಪ್ರಕ್ರಿಯೆ. ಇದರಲ್ಲಿ ನಾಯಕತ್ವದ ಯಾವುದೇ ಪಾತ್ರ ಇಲ್ಲ ಎನ್ನುವಂತಹ ವ್ಯಾಖ್ಯಾನಗಳನ್ನು ಕೆಲವರು ನೀಡುತ್ತಿದ್ದಾರೆ. ಆದರೆ ಸವಾಲುಗಳನ್ನು ಎದುರಿಸುವಾಗ, ತೆರಿಗೆ ನೀತಿ ರೂಪಿಸುವಾಗ, ಕೃಷಿ, ಕೈಗಾರಿಕೆ, ಎಂಎಸ್‌ಎಂಇ ಕ್ಷೇತ್ರದ ನೀತಿಗಳನ್ನು ರೂಪಿಸುವುದು ಕೂಡ ಅದರದ್ದೇ ಆದ ಪ್ರಭಾವ ಬೀರುತ್ತದೆ. ಕೋವಿಡ್‌ ವೇಳೆ ಆಡಳಿತದಲ್ಲಿದ್ದ ಐವತ್ತಕ್ಕೂ ದೇಶಗಳಲ್ಲಿ ಸರಕಾರಗಳು ಅಧಿಕಾರ ಕಳೆದುಕೊಂಡಿವೆ. ಆದರೆ ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತದ ವೈಖರಿ ಹಾಗೂ ಜನರಿಗೆ ಅವರ ಮೇಲಿನ ವಿಶ್ವಾಸದಿಂದಾಗಿ ಮತ್ತೆ ಅಧಿಕಾರಕ್ಕೆ ಬಂದಿದೆ ಎಂದರು.

ಬಜೆಟ್‌ನಲ್ಲಿ ಯುವಜನತೆಗೆ ಆದ್ಯತೆ
ಈ ಬಾರಿಯ ಬಜೆಟ್‌ನಲ್ಲಿ ಯುವ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದ್ಯೋಗಾರ್ಹತೆ ಹೆಚ್ಚಿಸಲು 21-24 ವರ್ಷದೊಳಗಿನ ನಿರುದ್ಯೋಗಿ ಯುವಕರಿಗೆ ಕೌಶಲ ನೀಡಲು 500 ಟಾಪ್‌ ಕಂಪೆನಿಗಳ ಸಹಯೋಗದಲ್ಲಿ ಇಂಟರ್ನ್ಶಿಪ್‌ ಕಾರ್ಯಕ್ರಮವನ್ನು ಯೋಜಿಸಿದ್ದೇವೆ. ಅದೇ ರೀತಿ ಐಟಿಐ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ತರಬೇತಿ ನೀಡಲು ಐಟಿಐಗಳಿಗೆ ಅತ್ಯಾಧುನಿಕ ಯಂತ್ರೋಪಕರಣ ಒದಗಿಸಲಾಗುವುದು ಎಂದು ಹೇಳಿದರು. ಸಿಟಿಝನ್‌ ಕೌನ್ಸಿಲ್‌ ಅಧ್ಯಕ್ಷ ವಾಸುದೇವ ಕಾಮತ್‌ ಇದ್ದರು.

ತಾರತಮ್ಯ ಮಾಡಿಲ್ಲ
ಬಿಹಾರ, ಆಂಧ್ರಪ್ರದೇಶ ರಾಜ್ಯಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿ, ಕೇರಳ- ಮಣಿಪುರಕ್ಕೆ ಕಡಿಮೆ ಅನುದಾನ ಹಂಚಿಕೆ ಮಾಡಿರುವ ಕುರಿತು ನಾಗರಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಅಂತಹ ತಾರತಮ್ಯ ಮಾಡಿಲ್ಲ. ಬಿಹಾರದಲ್ಲಿ ಪ್ರತಿವರ್ಷ ಕೋಸಿ ನದಿಯ ಪ್ರವಾಹದಿಂದ ಜನಜೀವನಕ್ಕೆ ತೀವ್ರ ಹಾನಿಯಾಗುತ್ತಿದೆ. ಈ ಕಾರಣಕ್ಕೆ ಸೂಕ್ತ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ. ಹಾಗಂತ ಇತರ ರಾಜ್ಯಗಳನ್ನು ನಿರ್ಲಕ್ಷಿಸಿಲ್ಲ. ಈ ವಿಚಾರದಲ್ಲಿ ಕರ್ನಾಟಕದಂತೆ ಕೇರಳವೂ ರಾಜಕೀಯವಾಗಿ ಕೆಸರೆರಚುವ ಕೆಲಸ ಮಾಡುತ್ತಿದೆ ಎಂದರು.

ವಿದ್ಯಾರ್ಥಿ ಪ್ರಶ್ನೆಗೆ ಸಚಿವೆ ಖುಷ್‌!
ವಿದ್ಯಾರ್ಥಿಗಳಿಗೆ ನೀವು ಕೊಡಬಹುದಾದ ಹಣದ ಪಾಠವೇನು? ಹೀಗೊಂದು ಪ್ರಶ್ನೆಯನ್ನು ಸಭೆಯಲ್ಲಿದ್ದ ರಿಶಾಂತ್‌ ಎಂಬ 5ನೇ ತರಗತಿ ವಿದ್ಯಾರ್ಥಿ ಮುಂದಿಟ್ಟದ್ದು ಸಚಿವರಿಗೆ ಖುಷಿ ಕೊಟ್ಟಿತು. ಬಾಲಕನನ್ನು ವೇದಿಕೆಗೆ ಕರೆದು ಪ್ರಶ್ನೆಯನ್ನು ಮತ್ತೆ ಕೇಳಿಸಿಕೊಂಡರಲ್ಲದೆ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಕರಾವಳಿಯ ಬಾಲಕನಿಂದ ಈ ಪ್ರಶ್ನೆ ನನಗೆ ಅಚ್ಚರಿ ಮೂಡಿಸಿಲ್ಲ. ಎಲ್ಲ ಮಕ್ಕಳೂ ಹಣಕಾಸು ವಿಚಾರದಲ್ಲಿ ಜಾಗರೂಕರಾಗಬೇಕು. ಡಿಜಿಟಲ್‌ ಪಾವತಿಯಿರುವ ಈಗಿನ ಕಾಲದಲ್ಲಿ ಗೇಮಿಂಗ್‌, ಜೂಜಿನಿಂದ ಹಣ ಕಳೆದುಕೊಳ್ಳುವ ಬದಲು ಹಣಕಾಸು ವಿಚಾರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಸಂಸದರಿಗೆ ಭೇಷ್‌
ದಕ್ಷಿಣಕನ್ನಡದಲ್ಲಿ ಉತ್ಸಾಹಿ ಯುವ ಸಂಸದರಿದ್ದಾರೆ. ಹಿಂದೆ ಇಲ್ಲಿ ಇನ್‌ಕುÂಬೇಷನ್‌ ಸೆಂಟರ್‌ ಆರಂಭಿಸಿದ್ದನ್ನು ನೆನಪಿಸಿದ್ದಾರೆ ಎಂದು ಸಂಸದ ಕ್ಯಾ|ಬ್ರಿಜೇಶ್‌ ಚೌಟರನ್ನು ಶ್ಲಾಘಿಸಿದ ಸಚಿವೆ, ಈ ಭಾಗಕ್ಕೆ ಇನ್ನೇನು ಸೌಲಭ್ಯ ಬೇಕು ಎನ್ನುವುದನ್ನು ಗುರುತಿಸಿ. ಅದನ್ನು ಒದಗಿಸಲು ನಾನು ಬದ್ಧಳಾಗಿದ್ದೇನೆ ಎಂದರು.

ಇದನ್ನೂ ಓದಿ: Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

ಟಾಪ್ ನ್ಯೂಸ್

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

suicide

Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು

hk-patil

C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್‌.ಕೆ.ಪಾಟೀಲ್‌

6

ಮಮ್ತಾಜ್‌ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.