ಸಚಿವ ಯು.ಟಿ.ಖಾದರ್ ಹೇಳಿಕೆಗೆ ವಿಹಿಂಪ, ಬಜರಂಗ ದಳ ಖಂಡನೆ
Team Udayavani, Feb 27, 2017, 12:39 PM IST
ವಿಟ್ಲ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸುವುದನ್ನು ವಿರೋಧಿಸಿ, ಫೆ.25ರಂದು ಕರೆ ನೀಡಿರುವ ಹರತಾಳದ ಸಂದರ್ಭ ಚಪ್ಪಲಿ ಪದ ಬಳಕೆ ಮಾಡಿರುವ ಸಚಿವ ಯು.ಟಿ. ಖಾದರ್ ಅವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಇದನ್ನು ವಿಟ್ಲ ಪ್ರಖಂಡ ವಿಹಿಂಪ, ಬಜರಂಗ ದಳ ತೀವ್ರವಾಗಿ ಖಂಡಿಸಿವೆ. ಈ ಹೇಳಿಕೆಯನ್ನು ಸಚಿವರು ಹಿಂಪಡೆಯಬೇಕು. ಹಿಂದೂ ಸಂಘಟನೆ, ಹಿಂದೂ ನಾಯಕರ ವಿರುದ್ಧ ಹಗುರವಾಗಿ ಮಾತನಾಡಕೂಡದು ಎಂದು ವಿಟ್ಲ ವಿಹಿಂಪ ಮತ್ತು ಬಜರಂಗ ದಳ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿವೆ.
ನಾವು ಮುಖ್ಯಮಂತ್ರಿ ಪದವಿಯನ್ನು ವಿರೋಧಿಸುತ್ತಿರುವುದಲ್ಲ, ಒಂದು ರಾಜ್ಯದ ಮುಖ್ಯಮಂತ್ರಿ ಮತ್ತೂಂದು ರಾಜ್ಯಕ್ಕೆ ಆಗಮಿಸುವ ಸಂಪ್ರದಾಯಕ್ಕೆ ಖಂಡಿತಾ ಅಭ್ಯಂತರವಿಲ್ಲ, ಪಕ್ಷದ ಸಮಾವೇಶಕ್ಕೆ ಆಗಮಿಸಿದರೂ ವಿರೋಧಿಸಬಾರದು. ಕೇರಳದಲ್ಲಿ ರಕ್ತದ ಓಕುಳಿಯನ್ನು ಹರಿಸುತ್ತಿರುವ ಅಪರಾಧ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ, ಕ್ರಿಮಿನಲ್ ಹಿನ್ನೆಲೆಯುಳ್ಳ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸುವುದನ್ನು ವಿರೋಧಿಸಲಾಗಿದೆ ಅಷ್ಟೆ. ತುಳುನಾಡು ಸಾಮರಸ್ಯದ ನಾಡು. ಈ ಜಿಲ್ಲೆಗೆ ಬಂದು ಏಕತೆ, ಸೌಹಾರ್ದದ ಬಗ್ಗೆ ಮಾತನಾಡುವ ಅರ್ಹತೆ ಅವರಿಗಿಲ್ಲ ಎಂಬ ಉದ್ದೇಶಕ್ಕಾಗಿ ಪಿಣರಾಯಿ ವಿಜಯನ್ ವಿರುದ್ಧ ಹೋರಾಟ ಮಾಡಲಾಗಿದೆ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.
ಈ ಬಗ್ಗೆ ಉದ್ವೇಗಕ್ಕೊಳಗಾದ ಕರ್ನಾಟಕದ ಆಹಾರ ಸಚಿವ ಯು.ಟಿ.ಖಾದರ್ ಅವರು ಅನಾರೋಗ್ಯಕರ ಹೇಳಿಕೆ ನೀಡದೆ, ಗೌರವ ಉಳಿಸಿಕೊಳ್ಳಬೇಕು. ಉಳ್ಳಾಲದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಅಪರಾಧಿಗಳ ಬಂಧನ, ಗೋಕಳ್ಳರನ್ನು ಬಂಧಿಸುವವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಯತ್ನಿಸಬೇಕಾದ ಖಾದರ್ ಅವರಿಂದ ಪಾಠ ಕಲಿತುಕೊಳ್ಳುವ ಅಗತ್ಯ ಸಂಘ ಪರಿವಾರಕ್ಕಿಲ್ಲ ಎಂದು ಸಂಘಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್ ಪ್ರತಿಭಟನೆ
Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.