ಕಲ್ಮಕಾರು ಸಂತ್ರಸ್ತ ಮನೆಗಳಿಗೆ ಕೊಡಗು ಮಾದರಿ ನೆರವು: ಖಾದರ್
Team Udayavani, Dec 7, 2018, 10:28 AM IST
ಸುಳ್ಯ: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಸುಳ್ಯ ತಾಲೂಕಿನ ಕಲ್ಮಕಾರಿನ ನಾಲ್ಕು ಮನೆಗಳಿಗೆ ಕೊಡಗು ಮಾದರಿಯಲ್ಲಿ ಸರಕಾರ ನೆರವು ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಪತ್ರಕರ್ತರ ಜತೆ ಮಾತನಾಡಿದ ಅವರು, ಕೊಡಗಿನಲ್ಲಿ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಮನೆ ನಿರ್ಮಾಣ ಆಗುವ ತನಕ ಬಾಡಿಗೆ ರೂಪದಲ್ಲಿ ಸಂತ್ರಸ್ತ ಕುಟುಂಬಕ್ಕೆ 10 ಸಾವಿರ ರೂ. ನೆರವು ನೀಡಲು ಸರಕಾರ ತೀರ್ಮಾನಿಸಿದೆ. ಈ ಸೌಲಭ್ಯ ಕಲ್ಮಕಾರಿನ ಸಂತ್ರಸ್ತರಿಗೆ ದೊರೆಯಲಿದೆ ಎಂದರು.
ಜಿಲ್ಲೆಯ ಬಗ್ಗೆ ಮಾಹಿತಿ ಇಲ್ಲ
ದ.ಕ.ಜಿಲ್ಲೆಯಲ್ಲಿ ಪ್ರಾಕೃತಿಕ ಅವಘಡದಿಂದ 130ಕ್ಕೂ ಅಧಿಕ ಮನೆ ಸಂಪೂರ್ಣ ನಾಶಗೊಂಡಿದ್ದು, ಕೇವಲ 95 ಸಾವಿರ ರೂ. ಪರಿಹಾರ ನೀಡಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಂಪೂರ್ಣ ನಾಶದ ಬಗ್ಗೆ ಜಿಲ್ಲಾಡಳಿತದ ವರದಿ ನನ್ನ ಗಮನಕ್ಕೆ ಬಂದಿಲ್ಲ. ಇಲ್ಲಿ ನಡೆದದ್ದು ಪ್ರಕೃತಿ ವಿಕೋಪ ಎಂದು ಪರಿಗಣಿಸಲಾಗಿದೆ. ದ.ಕ. ಜಿಲ್ಲೆಯ ಗಡಿಭಾಗದ ಸಂಪಾಜೆ ಮೊದಲಾದ ಪ್ರದೇಶದ ಹಾನಿಗೆ ಕೊಡಗು ಮಾದರಿಯಲ್ಲಿ ನೆರವು ನೀಡಲಾಗುವುದು ಎಂದರು.
ಸಚಿವ ಖಾದರ್ಗೆ ಎರಡೂವರೆ ತಾಸು ಕಾದರು…!
ಪೂರ್ವ ನಿಗದಿ ಅವಧಿಗಿಂತ ತಡವಾಗಿ ಬಂದ ಸಚಿವ ಖಾದರ್ಗಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಜನರು ಎರಡೂವರೆ ತಾಸು ಕಾದರು. ವಿಳಂಬಕ್ಕೆ ಕ್ಷಮೆಯಾಚಿಸುತ್ತಲೇ ಸಚಿವರು ಕಾರ್ಯಕ್ರಮಗಳಿಗೆ ತೆರಳಿ ಜನರ ಅಹವಾಲು ಸ್ವೀಕರಿಸಿದರು. ರಾತ್ರಿಯೂ ನ.ಪಂ.ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.