ಮಿಸ್ಬಾ ಝರಾತುಲ್ ಖುರ್-ಆನ್ ಫ್ರೀ ಸ್ಕೂಲ್: ಪ್ರಾರಂಭೋತ್ಸವ ಅಲೀಫ್ ಡೇ
Team Udayavani, Jun 25, 2019, 5:08 AM IST
ಕಾಟಿಪಳ್ಳ: ಮಿಸ್ಬಾ ನಾಲೇಜ್ ಫೌಂಡೇಶನ್ ಒಂದು ಸಮಾಜಮುಖೀಯಾದ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಉದ್ಯಮಿ ಡಾ| ಟಿ.ಎಂ. ಅಬ್ದುಲ್ ರವೂಫ್ ಹೇಳಿದರು.
ಮಿಸ್ಬಾ ನಾಲೇಜ್ ಫೌಂಡೇಶನ್ ಇದರ ವತಿಯಿಂದ ನೂತನವಾಗಿ ಪ್ರಾರಂಭವಾದ ಮಿಸ್ಬಾ ಝರಾತುಲ್ ಖುರ್-ಆನ್ ಫ್ರೀ ಸ್ಕೂಲ್ ಇದರ ಪ್ರಾರಂಭೋತ್ಸವ ಅಲೀಫ್ ಡೇ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಡವರ್ಗದವರಿಗೆ ಮಾಡುತ್ತಿರುವ ಈ ಶೈಕ್ಷಣಿಕ ಸೇವೆ ಎಲ್ಲರಿಗೂ ಮಾದರಿ. ಇದು ವಿದ್ಯಾರ್ಥಿನಿಯರ ಭವಿಷ್ಯವನ್ನು ರೂಪಿಸುತ್ತಿದೆ. ಯಾವುದೇ ಆರ್ಥಿಕ ಲಾಭವಿಲ್ಲದೆ ನಡೆಸುತ್ತಿರುವ ಈ ಸಂಸ್ಥೆ ಇನ್ನಷ್ಟು ಹೆಸರನ್ನು ಮಾಡಲಿ ಎಂದು ಹಾರೈಸಿದರು.
ಸಮ್ಮಾನ
ಮಿಸ್ಬಾ ಕಾಲೇಜಿನ ಪದವಿ ವಿಭಾಗದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯವು ನಡೆಸಿದ ಬಿ.ಎ., ಬಿಕಾಂ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾ ರ್ಥಿನಿಯರನ್ನು ಇದೇ ಸಂದರ್ಭ ಸಮ್ಮಾ ನಿಸಿದರು. ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಝಿಯಾವುದ್ಧೀನ್ ಮಾತನಾಡಿ, ಬಡ ವರ್ಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಪ್ರಶಂಸನೀಯ. ಇದರಿಂದಾಗಿ ಇನ್ನಷ್ಟು ವಿದ್ಯಾರ್ಥಿನಿಯರು ಶಿಕ್ಷಣವನ್ನು ಪಡೆಯುವ ಹಾಗೆ ಆಗಲಿ ಎಂದು ಶುಭ ಕೋರಿದರು.
ಕಾಲೇಜಿನ ಟ್ರಸ್ಟಿ, ಧಾರ್ಮಿಕ ವಿದ್ವಾಂ ಸರಾದ ಅಬೂ ಸೂಫಿಯಾನ್ ಮಿಸ್ಬಾ ಝರಾತುಲ್ ಖುರ್-ಆನ್ ಫ್ರೀ ಸ್ಕೂಲ್ ಇದನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡಬೇಕಾಗಿದೆ. ಶಿಕ್ಷಣದ ಜತೆಗೆ ಧರ್ಮವನ್ನು ಬೋಧಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಉದ್ಯಮಿ ಅಶ್ರಫ್, ಮಿಸ್ಬಾ ನಾಲೇಜ್ ಫೌಂಡೇಶನ್‌ನ ಅಧ್ಯಕ್ಷ ಮಮ್ತಾಜ್ ಆಲಿ, ಅಬ್ದುಲ್ ಹಮೀದ್, ಇಕ್ಬಾಲ್ ಬಿ.ಎ., ಉದ್ಯಮಿ ಹಮೀದ್, ಕಾಲೇಜಿನ ಸಂಚಾ ಲಕರಾದ ಬಿ.ಎ. ನಜೀರ್, ಟ್ರಸ್ಟಿಗಳಾದ ಅಬ್ದುಲ್ ಹಕೀಮ್ ಫಾಲ್ಕನ್, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ ಹಮೀದ್ ಅಶ್ಕಾಫ್, ಬಾವ ಫಕ್ರುದ್ದೀನ್, ಟಿ.ಎಚ್. ಮೆಹಬೂಬ್, ಮೌಲಾನ ಹಬೀಬ್ ಸಖಾಫಿ, ಮೌಲಾನ ಅಶ್ರಫ್ ಸಖಾಫಿ, ಮೌಲಾನ ಹನೀಫ್ ಸಖಾಫಿ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಝಾಹಿದಾ ಜಲೀಲ್ ಪ್ರಾಸ್ತಾವಿಕ ಮಾತು ಗಳನ್ನಾ ಡಿದರು. ಉಪ ಪ್ರಾಂಶುಪಾಲೆ ಸನಾ ಹುಸೈನ್ ನಿರ್ವಹಿಸಿದರು. ಮಮತಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.