ವಿವಿಧ ರೈಲು ಸಂಚಾರ ವ್ಯತ್ಯಯ: ಕಬಕ ಪುತ್ತೂರು ಯಾರ್ಡ್‌ನಲ್ಲಿ ಕಾಮಗಾರಿ
Team Udayavani, Jan 7, 2023, 7:10 AM IST
ಮಂಗಳೂರು: ಕಬಕ ಪುತ್ತೂರು ರೈಲ್ವೇ ಯಾರ್ಡ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಸೇತುವೆ ಸ್ತಂಭದಲ್ಲಿ ಎರಡು ತಾತ್ಕಾಲಿಕ ಗರ್ಡರ್‌ಗಳನ್ನು ಅಳವಡಿಸುವ ಕಾಮಗಾರಿಯಿಂದ ಕೆಲವು ರೈಲು ಸೇವೆ ವ್ಯತ್ಯಯವಾಗಲಿದೆ.
ನಂ. 06489 ಮಂಗಳೂರು ಸೆಂಟ್ರಲ್ -ಸುಬ್ರಹ್ಮಣ್ಯ ರೋಡ್ ಎಕ್ಸ್‌ಪ್ರೆಸ್ ರೈಲು ಹಾಗೂ ನಂ. 06488 ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ರೈಲು ಜ. 7ರಂದು ರದ್ದಾಗಲಿವೆ.
ನಂ. 06485 ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ಎಕ್ಸ್‌ಪ್ರೆಸ್ ನೇರಳಕಟ್ಟೆ ಹಾಗೂ ಕಬಕ ಪುತ್ತೂರು ಮಧ್ಯೆ ಜ. 7ರಂದು ರದ್ದು. ನಂ. 06484 ಕಬಕ ಪುತ್ತೂರು -ಮಂಗಳೂರು ಸೆಂಟ್ರಲ್ ರೈಲು ಜ.7ರಂದು ನೇರಳಕಟ್ಟೆಯಿಂದ ಬೆಳಗ್ಗೆ 8.10ಕ್ಕೆ ಪ್ರಯಾಣ ಆರಂಭಿಸಲಿದೆ.
ನಂ. 10107 ಮಡಗಾಂವ್ ಜಂಕ್ಷನ್ -ಮಂಗಳೂರು ಸೆಂಟ್ರಲ್ ಡೆಮು ಎಕ್ಸ್ ಪ್ರಸ್ ರೈಲನ್ನು ಜ. 7ರಂದು ತೋಕೂರು ಹಾಗೂ ಮಂಗಳೂರು ಸೆಂಟ್ರಲ್ ಮಧ್ಯೆ ರದ್ದುಗೊಳಿಸಲಾಗಿದೆ.
ನಂ. 10108 ಮಂಗಳೂರು ಸೆಂಟ್ರಲ್ -ಮಡಗಾಂವ್ ಜಂಕ್ಷನ್ ಮೆಮು ರೈಲು ಮಂಗಳೂರು ಸೆಂಟ್ರಲ್-ತೋಕೂರು ಮಧ್ಯೆ 7ರಂದು ರದ್ದಾಗಲಿದ್ದು, ರೈಲು ತೋಕೂರಿನಿಂದ ಅಪರಾಹ್ನ 3.40ಕ್ಕೆ ಹೊರಡಲಿದೆ. ನಂ. 07377 ವಿಜಯಪುರ-ಮಂಗಳೂರು ಜಂಕ್ಷನ್ ರೈಲು ಜ. 6ರಂದು 2 ಗಂಟೆ ತಡವಾಗಿ ಬಿಡಲಾಗಿದೆ.
ನಂ.07378 ಮಂಗಳೂರು ಜಂಕ್ಷನ್ -ವಿಜಯಪುರ ದೈನಂದಿನ ಎಕ್ಸ್‌ಪ್ರೆಸ್ ರೈಲು ಮಂಗಳೂರು ಜಂಕ್ಷನ್‌ನಿಂದ ಜ. 7ರಂದು ಸಂಜೆ 4.20ಕ್ಕೆ ಹೊರಡಲಿದೆ. ನಂ. 16516 ಕಾರವಾರ -ಯಶವಂತಪುರ ಎಕ್ಸ್‌ಪ್ರೆಸ್ ಜ. 7ರಂದು ಕಾರವಾರದಿಂದ ಬೆಳಗ್ಗೆ 5.30ರ ಬದಲು 7.10ಕ್ಕೆ ಹೊರಡುವುದು.
ನಂ. 07377 ವಿಜಯಪುರ -ಮಂಗಳೂರು ಜಂಕ್ಷನ್ ರೈಲನ್ನು 1.20 ಗಂಟೆ ಕಾಲ ನಿಯಂತ್ರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.