ಅಳಿಕೆಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಗ್ರಾಮ ವಾಸ್ತವ್ಯ
Team Udayavani, Oct 5, 2017, 2:37 PM IST
ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರಕ್ಕೂ ಅಧಿಕ ಹಕ್ಕು ಪತ್ರ, 3,500ಕ್ಕೂ ಅಧಿಕ ಮನೆ ಒದಗಿ
ಸಲಾಗಿದೆ. ನೆಲ-ಸೂರು-ಅಕ್ಕಿ ಸೇರಿ ಅರ್ಹ ಫಲಾನುಭವಿಗಳು ಕೇಳಿದ್ದೆಲ್ಲವನ್ನೂ ಸರಕಾರ ನೀಡಿದೆ. ಮಾನವೀಯತೆ ಮರೆತು ರಾಜಕೀಯ ಮಾಡುವುದು ಕೃತಘ್ನತೆಯಾಗಿದೆ. ಸರಕಾರದ ಪ್ರತಿಯೊಂದು ಕಾರ್ಯಕ್ರಮವನ್ನು ಪಕ್ಷಾತೀತವಾಗಿ ನೀಡಲಾಗಿದೆ. ಅಳಿಕೆ ಗ್ರಾಮಕ್ಕೆ ಕಳೆದ ನಾಲ್ಕು ವರ್ಷದಲ್ಲಿ 10 ಕೋ.ರೂ.ಗೂ ಅಧಿಕ ಅನುದಾನ ಒದಗಿಸಲಾಗಿದೆ ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಅವರು ಬುಧವಾರ ಅಳಿಕೆ ಗ್ರಾ.ಪಂ. ಸಭಾಭವನದಲ್ಲಿ ದ.ಕ.ಜಿ.ಪಂ., ಅಳಿಕೆ ಗ್ರಾ.ಪಂ. ಮತ್ತು ಕಂದಾಯ ಇಲಾಖೆ ಜಂಟಿ ಆಶ್ರಯದಲ್ಲಿ ಮನೆ ನಿವೇಶನ 94ಸಿ ಹಕ್ಕು ಪತ್ರ ವಿತರಣೆ ಹಾಗೂ ವರ್ಗಾವಣೆಗೊಂಡ ಪಿಡಿಒ ಅವರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಬಡವರು 25 ವರ್ಷಗಳಿಂದ ಮನೆ ಕಟ್ಟಿ ಕುಳಿತವರಿಗೆ ಹಕ್ಕುಪತ್ರ ನೀಡುವ ಕಾರ್ಯವನ್ನು ಸರಕಾರ ಮಾಡಿದೆ. ಗ್ರಾ.ಪಂ. ಜತೆಗೆ ಕಂದಾಯ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಿದಾಗ ಸರಕಾರದ ಯೋಜನೆಗಳು ಯಶಸ್ವಿಯಾಗುತ್ತವೆ ಎಂದರು. ಅಳಿಕೆ ಗ್ರಾ.ಪಂ.ಉಪಾಧ್ಯಕ್ಷೆ ಸೆಲ್ವಿನ್ ಡಿ’ಸೋಜಾ, ಪ್ರಭಾರ ಕಾರ್ಯದರ್ಶಿ ಹೊನ್ನಪ್ಪ ಗೌಡ ಉಪಸ್ಥಿತರಿದ್ದರು.
ಸ್ವತ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಭಾರತೀಯ ಕೆಥೋಲಿಕ್ ಯುವ ಸಂಚಲನದ ಪೆರುವಾಯಿ ಘಟಕ, ಒಡಿ
ಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಸದಸ್ಯ ರನ್ನು ಗುರುತಿಸಲಾಯಿತು. 59 ಮಂದಿಗೆ ಪಂ.
ನಿವೇಶನ, 34 ಮಂದಿಗೆ 94ಸಿ ಅಡಿ ಹಕ್ಕು ಪತ್ರ ವಿತರಿಸಲಾಯಿತು. 9 ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
ಅಳಿಕೆ ಗ್ರಾ. ಪಂ.ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಪ್ರಸ್ತಾವನೆಗೈದು, ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ
ಅಧಿಕಾರಿ ಜಿನ್ನಪ್ಪ ಗೌಡ ವಂದಿಸಿದರು. ಸದಸ್ಯ ಸದಾಶಿವ ಶೆಟ್ಟಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
ಸಮ್ಮಾನ
ಕಂದಾಯ ನಿರೀಕ್ಷಕ ದಿವಾಕರ್, ಗ್ರಾಮಕರಣಿಕ ಪ್ರಕಾಶ್, ಗ್ರಾಮ ಸಹಾಯಕ ಜಗನ್ನಾಥ ಅವರನ್ನು ಸಮ್ಮಾನಿಸಲಾಯಿತು. ಅಳಿಕೆಯಲ್ಲಿ 7 ವರ್ಷಗಳ ಕಾಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ
ಸಲ್ಲಿಸಿ ಬಡಗಬೆಳ್ಳೂರು ಗ್ರಾಮಕ್ಕೆ ವರ್ಗಾವಣೆಯಾದ ಹರೀಶ್ ಕೆ.ಎ. ಅವರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು. ನೀರಿನ ಕೊರತೆಯಿದ್ದಾಗ ಗ್ರಾಮಕ್ಕೆ ಖಾಸಗಿ ಕೊಳವೆಬಾವಿಯಿಂದ ನೀರೊದಗಿಸಿದ ರಮೇಶ್ ಹಾಗೂ ಹಸೈನಾರ್ ಅವರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.