2025ರ ವೇಳೆಗೆ ಮಂಗಳೂರು ಸಮಗ್ರ ಚಿತ್ರಣ ಬದಲು: ಶಾಸಕ ವೇದವ್ಯಾಸ ಕಾಮತ್
ಉದಯವಾಣಿಯಿಂದ ಶಾಸಕರ ಜತೆ ನಮ್ಮ ಮಾತುಕತೆ ಸರಣಿಯ ಕಾರ್ಯಕ್ರಮ
Team Udayavani, Jul 18, 2022, 5:45 AM IST
ಮಂಗಳೂರು: ಹತ್ತು ಹಲವು ಕಾಮಗಾರಿಗಳು ನಡೆಯುತ್ತಿರುವುದರಿಂದ ಮಂಗಳೂರು ನಗರದ ಈಗಿರುವ ಸನ್ನಿವೇಶದಲ್ಲಿ ಜನರಿಗೆ ತೊಂದರೆಯಾಗಿರಬಹುದು, ಆದರೆ 2025ರ ವೇಳೆಗೆ ನೋಡಿ, ಮಂಗಳೂರಿನ ಪೂರ್ತಿ ಚಿತ್ರಣ ಬದಲಾಗಿರುತ್ತದೆ, ಎಲ್ಲರ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಸಾಧಿಸಿರುತ್ತೇವೆ, ಅಲ್ಲಿಯವರೆಗೆ ಇದೇ ಸಹಕಾರ ನೀಡಿ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಶನಿವಾರ “ಉದಯವಾಣಿ’ ಮಂಗಳೂರು ಕಚೇರಿ ಯಲ್ಲಿ ನಡೆದ “ಶಾಸಕರ ಜತೆ ನಮ್ಮ ಮಾತುಕತೆ’ ಸರಣಿಯಲ್ಲಿ ಅವರು ಭಾಗಿಯಾಗಿ ಈ ಭರವಸೆ ನೀಡಿದ್ದಾರೆ.
ನಗರದ ಅನೇಕ ಕಡೆ ಸ್ಮಾರ್ಟ್ಸಿಟಿ, ಗೈಲ್ ಗ್ಯಾಸ್, ಜಲ ಸಿರಿ, ಹೀಗೆ ಏಕಕಾಲಕ್ಕೆ ಹಲವು ರೀತಿಯ ಕೆಲಸ
ಕಾರ್ಯ ಗಳು ನಡೆಯುತ್ತಿವೆ, ಒಂದು ವೇಳೆ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳದೆ ಹೋದರೆ ಅನು ದಾನ ಹಿಂದಕ್ಕೆ ಹೋಗುವ ಭೀತಿ ಇದೆ. ನಾಗರಿಕರು ತಾಳ್ಮೆಯಿಂದ ಇದುವರೆಗೆ ಸಹಕಾರ ನೀಡಿದ್ದಿರಿ, ಇನ್ನೆರಡು ವರ್ಷಗಳಲ್ಲಿ ಮಂಗಳೂರು ಸಂಪೂರ್ಣ ಬದಲಾಗಿರುತ್ತದೆ ಎಂದರು.
ಪ್ರವಾಸೋದ್ಯಮ, ಬ್ಯಾಂಕಿಂಗ್, ವೈದ್ಯ ಕೀಯ, ಶಿಕ್ಷಣ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದ ಸಂಶೋಧನೆ ನಡೆಸಿ, ಕೇಂದ್ರ ಸರಕಾರಕ್ಕೆ ಈ ತಜ್ಞರ ತಂಡದವರು ವರದಿ ಸಲ್ಲಿಸಲಿದ್ದಾರೆ, ಅದನ್ನು ಅನು ಸರಿಸಿಕೊಂಡು ಕೇಂದ್ರ ಸರಕಾರ ನಗರದ ಅಭಿವೃದ್ಧಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಿದೆ ಎಂದರು.
ಈ ತಜ್ಞರ ತಂಡದವರಿಗೆ 1 ಎಕ್ರೆ ಜಾಗ ಬೇಕಾಗಿದ್ದು, ಅವರು ಅದರಲ್ಲಿ ಕಚೇರಿ ನಿರ್ಮಿಸಿ ಸಂಶೋಧನೆ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ, ಮಂಗಳೂರು ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಇದು ನೆರವಾಗಲಿದೆ ಎಂದರು.
ಮಂಗಳೂರು ನಗರ ಮುಂದೆ ಹೇಗಿರಬೇಕು ಎಂಬ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದೇನೆ, ಅದಕ್ಕಾಗಿ ಶಾಲೆಗಳ ಝೋನ್ ಮಾಡುವುದು, ನಗರದಲ್ಲಿ ಜನದಟ್ಟಣೆ ಕಡಿಮೆ ಮಾಡುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು, ಮೂಲಸೌಕರ್ಯಗಳನ್ನು ಇನ್ನಷ್ಟು ಸುವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವುದು ಮುಂತಾದ ತಮ್ಮ ಕಾರ್ಯಯೋಜನೆಗಳನ್ನು ಶಾಸಕ ವೇದವ್ಯಾಸ ಕಾಮತ್ “ಶಾಸಕರೊಂದಿಗೆ ಮಾತುಕತೆ’ಯಲ್ಲಿ ವಿವರಿಸಿದರು. ಉದಯವಾಣಿ ಪರವಾಗಿ ಶಾಸಕರನ್ನು ಗೌರವಿಸಲಾಯಿತು.
ಕೇಂದ್ರದ ತಜ್ಞರ ತಂಡದಿಂದ ಸಮೀಕ್ಷೆ
ನಗರದಲ್ಲಿ ಸಮಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಅಧ್ಯಯನ, ಸಂಶೋಧನೆ ಕೈಗೊಳ್ಳುವುದಕ್ಕಾಗಿ ಕೇಂದ್ರ ಸರಕಾರ, ಎನ್ಜಿಒ ಹಾಗೂ ಇತರ ತಜ್ಞರನ್ನೊಳಗೊಂಡ ತಂಡವನ್ನು ರೂಪಿಸಿದ್ದು ರಾಜ್ಯದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಕಾರ್ಯಾಚರಿಸುವ ನಿರೀಕ್ಷೆ ಇದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.