ಆರ್ಯಾಪು ಪ್ರಥಮ; ವೇಣೂರು ದ್ವಿತೀಯ
Team Udayavani, Aug 7, 2018, 10:06 AM IST
ವೇಣೂರು: ಈ ಸಾಲಿನ ಮಹಾತ್ಮಾ ಗಾಂಧಿ ರಾ. ಗ್ರಾ. ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ವೇಣೂರು ಗ್ರಾ. ಪಂ. ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ, ದ.ಕ. ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಯೋಜನೆ ಮೂಲಕ ದೊಡ್ಡ ಮಟ್ಟದ ಕಾಮಗಾರಿ ಗಳನ್ನೇ ನಿರ್ವಹಿಸಿ ಸಂಪೂರ್ಣ ಸದ್ಬಳಕೆ ಮಾಡಿ ಕೊಂಡಿದೆ. ಹಿಂದೂ ರುದ್ರಭೂಮಿ, ಅಂಗನವಾಡಿ ಕಟ್ಟಡ, 10 ರಸ್ತೆಗಳಿಗೆ ಕಾಂಕ್ರೀಟ್, 5 ಮೋರಿ, ಕಿಂಡಿ ಅಣೆಕಟ್ಟು, 2 ನೆಡು ತೋಪು ಕಾಮಗಾರಿ, ತಡೆಗೋಡೆ, 4 ಸಾರ್ವಜನಿಕ ಕೊಳವೆ ಬಾವಿ ಹಾಗೂ ಬಾವಿಗಳಿಗೆ ಜಲ ಮರುಪೂರಣ, 29 ಸಾರ್ವಜನಿಕ ಹಾಗೂ ಖಾಸಗಿ ಬಾವಿ ರಚನೆ, 30 ದನದ ಹಟ್ಟಿ, 135 ವಸತಿ, 40 ಮಂದಿಯ ಜಮೀನಿನಲ್ಲಿ ಅಡಿಕೆ ಗಿಡ ನಾಟಿ, 20 ಕಡೆ ಕಾಳುಮೆಣಸು ಗಿಡ ನಾಟಿ ಹಾಗೂ 7 ಶೌಚಾಲಯ ನಿರ್ಮಾಣ ನಡೆಸಲಾಗಿದೆ. ಒಟ್ಟು 44,12,384 ರೂ. ವ್ಯಯಿಸಿ 18,696 ಮಾನವ ಕೆಲಸದ ದಿನಗಳನ್ನು ಸೃಜಿಸಲಾಗಿದೆ. 34,00,000 ರೂ. ಕಾಮಗಾರಿಗೆ ಸಾಮಗ್ರಿ ಪೂರೈಸಲಾಗಿದೆ. ಒಟ್ಟು 70,34,384 ರೂ. ಖರ್ಚು ಮಾಡಿ ಸಾಧನೆ ಮಾಡಿದೆ.
ಸಾರ್ವಜನಿಕ ಕಾಮಗಾರಿ
ಸಾರ್ವಜನಿಕ ಕೊಳವೆಬಾವಿ ಮರು ಪೂರಣ ಘಟಕ, ಕಿಂಡಿ ಅಣೆಕಟ್ಟು ತಡೆಗೋಡೆ ನಿರ್ಮಾಣ, ರಸ್ತೆ ಕಾಂಕ್ರೀಟು ಕೆಲಸ, ರುದ್ರಭೂಮಿ ಅಭಿವೃದ್ಧಿ, ಬಾವಿ ನಿರ್ಮಾಣ, ನೆಡುತೋಪು ರಚನೆ ಹಾಗೂ ಮೋರಿ ರಚನೆ ನಡೆಸಲಾಗಿದೆ.
ಖಾಸಗಿ ಕಾಮಗಾರಿ
ಖಾಸಗಿ ಬಾವಿ ರಚನೆ, ತೋಟ ಗಾರಿಕೆ ಅಭಿವೃದ್ಧಿ, ದನದ ಹಟ್ಟಿ ನಿರ್ಮಾಣ, ವಸತಿ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ, ಶೌಚಾಲಯ ನಿರ್ಮಾಣ ನಡೆಸಲಾಗಿದೆ.
ಆರ್ಯಾಪು ಗ್ರಾ.ಪಂ. ಪ್ರಥಮ
ಪುತ್ತೂರು: ಏಳು ವೆಂಟೆಡ್ ಡ್ಯಾಂ ನಿರ್ಮಾಣ ಮಾಡಿರುವ ಪುತ್ತೂರು ತಾ.ಪಂ.ನ ಆರ್ಯಾಪು ಗ್ರಾಮ ಪಂಚಾಯತ್ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಒಂದು ಡ್ಯಾಂಗೆ 5 ಲಕ್ಷ ರೂ.ಗಳಂತೆ ಒಟ್ಟು 35 ಲಕ್ಷ ರೂ.ಗಳನ್ನು ವೆಂಟೆಡ್ ಡ್ಯಾಂಗೆ ಬಳಸಿಕೊಳ್ಳಲಾಗಿದೆ. ವೆಂಟೆಡ್ ಡ್ಯಾಂ ಸೇರಿದಂತೆ ಶಾಲಾ ಆವರಣ ಗೋಡೆ, ಕಾಂಕ್ರೀಟ್ ರಸ್ತೆ, ಶಾಲಾ ಆವರಣದಲ್ಲಿ ಕೃಷಿ, ಬಾವಿ ತೋಡಿಸುವ ಕೆಲಸಗಳನ್ನು ಉದ್ಯೋಗ ಖಾತರಿಯಡಿ ಮಾಡಲಾಗಿದೆ.
ಬಾವಿ ತೋಡಿ 70 ಸಾವಿರ ರೂ. ಪಡೆಯಿರಿ
ತೆರೆದ ಬಾವಿಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಕುಡಿಯುವ ನೀರು ಯೋಜನೆ ಯಡಿ ಬಾವಿ ತೆಗೆಸಿದರೆ ಎನ್‌ಆರ್‌ಇಜಿ ಅಡಿ 70 ಸಾವಿರ ರೂ. ಅನುದಾನವನ್ನು ನೀಡಲಾಗುತ್ತದೆ. ಗುಡ್ಡ ಪ್ರದೇಶದಲ್ಲಿ ತೆರೆದ ಬಾವಿ ತೆಗೆಯಲು 1 ಲಕ್ಷ ರೂ.ವರೆಗೂ ಖರ್ಚು ಬರುತ್ತದೆ. ಅನುದಾನ ಪಡೆಯಲು ಸರಕಾರದ ನಿಯ ಮಾನು ಸಾರ ಬಾವಿ ನಿರ್ಮಿಸಬೇಕಾಗುತ್ತದೆ. ಇದರಿಂದ ಸ್ಥಳೀಯ ಕಾರ್ಮಿಕರಿಗೂ ಉದ್ಯೋಗ ದೊರಕಿದಂತಾಗುತ್ತದೆ.
ಜಂಕ್ಷನ್‌ಗಳ ಅಭಿವೃದ್ಧಿಗೂ ಒತ್ತು
ಗ್ರಾಮಸ್ಥರ ಸಹಕಾರದಲ್ಲಿ ಯೋಜನೆಯ ಸಂಪೂರ್ಣ ಸದ್ಬಳಕೆ ಮಾಡಿದ್ದು, ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿರುವುದು ವೇಣೂರಿಗೆ ಹೆಮ್ಮೆ. ಪಂ. ಅಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಸಿಬಂದಿಯ ಸಹಕಾರದಿಂದ ಇದು ಸಾಧ್ಯ ವಾಗಿದೆ. ಮುಂದಿನ ದಿನಗಳಲ್ಲಿ ಜಂಕ್ಷನ್‌ಗಳ ಅಭಿವೃದ್ಧಿಗೂ ಒತ್ತು ನೀಡುತ್ತೇವೆ.
ಅರುಣ್ ಕ್ರಾಸ್ತ, ಉಪಾಧ್ಯಕ್ಷ, ವೇಣೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?
Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ
Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.