ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಸ್ವಾಧೀನ ಅಧಿಕಾರಿ
ಗೇಟ್‌ನಲ್ಲೇ ತಪಾಸಣೆ; ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೂ ಮೊಬೈಲ್ ನಿಷೇಧ
Team Udayavani, Mar 19, 2020, 5:29 AM IST
ಮಹಾನಗರ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಾಗದಂತೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿ ಸುತ್ತಿದೆ. ಇದೇ ಮೊದಲ ಬಾರಿಗೆ ಮೊಬೈಲ್ ಸ್ವಾಧೀನ ಅಧಿಕಾರಿಗಳನ್ನು ಎಲ್ಲ 95 ಪರೀಕ್ಷಾ ಕೇಂದ್ರಗಳಲ್ಲಿ ನೇಮಿಸಲಾಗುತ್ತಿದೆ.
ಬಹುತೇಕ ಸಂದರ್ಭಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮ ಗಳಿಗೆ ಮೊಬೈಲ್ ಬಹುಮುಖ್ಯ ಕಾರಣ ವಾಗು ತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ಇಲ್ಲ ವಾದರೂ ಕೆಲವೆಡೆ ಕಣ್ತಪ್ಪಿಸಿ ಮೊಬೈಲ್ ಬಳಕೆ ನಡೆಯುತ್ತದೆ. ದ.ಕ. ಜಿಲ್ಲೆ ಯಲ್ಲಿ ಯಾವುದೇ ಪರೀಕ್ಷಾ ಅಕ್ರಮ ನಡೆಯ ಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾ ಸಾರ್ವ ಜನಿಕ ಶಿಕ್ಷಣ ಇಲಾಖೆಯು ಮೊಬೈಲ್ ಸ್ವಾಧೀನ ಅಧಿ ಕಾರಿಯನ್ನು ನೇಮಿ ಸಲು ಮುಂದಾಗಿದೆ.
ಗೇಟ್‌ನಲ್ಲೇ ತಪಾಸಣೆ
ಪರೀಕ್ಷಾ ಕೇಂದ್ರಗಳಿಗೆ ತೆರಳುವ ಗೇಟ್‌ನಲ್ಲೇ ಮೊಬೈಲ್ ಸ್ವಾಧೀನ ಅಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಶಿಕ್ಷಕರು ಪರೀಕ್ಷಾ ಕೇಂದ್ರದೊಳಗೆ ಹೋಗುವ ಮುನ್ನ ಗೇಟ್‌ನಲ್ಲಿ ಮೊಬೈಲ್ ಸ್ವಾಧೀನ ಅಧಿಕಾರಿಗೆ ಮೊಬೈಲ್ ನೀಡಿ ತೆರಳಬೇಕು. ಮೊಬೈಲ್ ನೀಡದವರನ್ನು ತಪಾ ಸಣೆ ಮಾಡಿ ಮೊಬೈಲ್ ಇದ್ದಲ್ಲಿ ಪಡೆದು ಕೊಂಡು ಬಳಿಕ ಕೇಂದ್ರದೊಳಗೆ ಬಿಡ ಲಾ ಗುತ್ತದೆ. ಪರೀಕ್ಷಾರ್ಥಿಗಳು ಮೊಬೈಲ್ ತರುವುದು ನಿಷಿದ್ಧವಾದರೂ, ಒಂದು ವೇಳೆ ತಂದಿದ್ದಲ್ಲಿ ಅದನ್ನು ಸ್ವಾಧೀನ ಅಧಿಕಾರಿಯಲ್ಲಿ ನೀಡಬೇಕು.
ಭರದ ಸಿದ್ಧತೆ
ವಿದ್ಯಾರ್ಥಿಗಳನ್ನೂ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತದೆ. ಮಾ. 27 ರಿಂದ ಎ. 9ರ ವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಸಿದ್ಧತಾಕಾರ್ಯ ಭರದಿಂದ ಸಾಗುತ್ತಿದೆ. ಬಂಟ್ವಾಳದ 17, ಬೆಳ್ತಂಗ ಡಿಯ 13, ಮಂಗಳೂರು ಉತ್ತ ರದ 21, ಮಂಗಳೂರು ದಕ್ಷಿಣದ 21, ಮೂಡುಬಿದಿರೆಯ 5, ಪುತ್ತೂರಿನ 12 ಮತ್ತು ಸುಳ್ಯದ 6 ಪರೀಕ್ಷಾ ಕೇಂದ್ರಗಳ ಪ್ರತಿ ಪರೀಕ್ಷಾ ಕೊಠಡಿಗಳಿಗೂ ಸಿಸಿಟಿವಿ ಅಳವಡಿಸಲಾಗುತ್ತದೆ. ಉತ್ತರ ಪತ್ರಿಕೆಯನ್ನು ಕೊಂಡೊಯ್ಯುವ ವಾಹನಕ್ಕೆ ಜಿಪಿಎಸ್ ಅಳವಡಿ ಸಲಾಗುತ್ತಿದೆ. ಪರೀಕ್ಷೆಯ ಎಲ್ಲ ಪ್ರಕ್ರಿಯೆ ಸಿಸಿಟಿವಿ ಅಡಿಯಲ್ಲೇ ನಡೆ ಯುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪಾಸ್ ಪ್ಯಾಕೇಜ್ ವ್ಯವಸ್ಥೆ
ಈಗಾಗಲೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಸ್ ಪ್ಯಾಕೇಜ್ ವ್ಯವಸ್ಥೆ ಮುಖಾಂತರ ಬೋಧನೆ ನಡೆದಿದೆ. ಪ್ರತಿ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಐವರು ವಿದ್ಯಾರ್ಥಿಗಳನ್ನು ಪಾಸ್ ಪ್ಯಾಕೇಜ್ ವ್ಯವಸ್ಥೆಯಡಿ ವಿಶೇಷ ತರಬೇತಿ ನೀಡಿ ಮನನ ಮಾಡಿಸುವ ಕೆಲಸ ನಡೆಸಲಾಗಿದೆ.
ಗೇಟ್‌ನಲ್ಲೇ ಎಲ್ಲರ ತಪಾಸಣೆ
ಪಾರದರ್ಶಕವಾಗಿ ಎಸೆಸೆಲ್ಸಿ ಪರೀಕ್ಷೆ ನಡೆಯಬೇಕೆಂಬ ನಿಟ್ಟಿನಲ್ಲಿ ಈ ಬಾರಿ ಮೊಬೈಲ್ ಸ್ವಾಧೀನ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಗೇಟ್‌ನಲ್ಲೇ ಎಲ್ಲರನ್ನೂ ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಶಿಕ್ಷಕರು ಈ ಅಧಿಕಾರಿಯಲ್ಲಿ ಮೊಬೈಲ್ ನೀಡಿ ಕೇಂದ್ರದೊಳಗೆ ತೆರಳಬೇಕು.
- ಮಲ್ಲೇಸ್ವಾಮಿ, ವಿದ್ಯಾಂಗ ಉಪನಿರ್ದೇಶಕರು ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.