ಮಂಗಳೂರಿನ ಮಾದರಿ ಮತಗಟ್ಟೆ
Team Udayavani, May 12, 2018, 11:02 AM IST
ಮಂಗಳೂರು: ಮಂಗಳೂರಿನ ಎರಡು ಮತಗಟ್ಟೆಗಳು ಆಧುನಿಕ ಸೌಲಭ್ಯಗಳ ಮೂಲಕ ವಿನೂತನ ರೀತಿಯಲ್ಲಿ ಸಿದ್ಧಗೊಂಡಿದ್ದು, ಶನಿವಾರ ನಡೆಯುವ ಮತದಾನಕ್ಕೆ ಸಕಲ ರೀತಿಯಲ್ಲಿ ಸನ್ನದ್ಧಗೊಂಡಿವೆ.
ನಗರದ ಲೇಡಿಹಿಲ್ ವಿಕ್ಟೋರಿಯಾ ಪ್ರೌಢ ಶಾಲೆಯ ಬೂತ್ ಸಂಖ್ಯೆ 12 ಹಾಗೂ ಗಾಂಧೀ ನಗರದ ಸ. ಹಿ. ಪ್ರಾ. ಶಾಲೆಯ ಬೂತ್ ಸಂಖ್ಯೆ 74ರ ಮತಗಟ್ಟೆಗಳನ್ನು ಮಾದರಿಯಾಗಿ ಸಿದ್ಧಪಡಿಸಲಾಗಿದ್ದು, ಈ ಬೂತ್‌ನಲ್ಲಿ ಮತ ಚಲಾವಣೆ ಮಾಡಲು ಇಂದು ಆಗಮಿಸುವ ಮತದಾರರಿಗೆ ವಿಶೇಷ ಸೌಲಭ್ಯಗಳು ದೊರೆಯಲಿದೆ.
ಸರದಿ ಸಾಲು ಇಲ್ಲಿಲ್ಲ
ಸರದಿ ಸಾಲು ಇಲ್ಲಿ ಇರುವುದಿಲ್ಲ. ಮತ ಹಾಕಲು ಬರುವ ಮತದಾರ ನೇರವಾಗಿ ಬಂದು ಮತ ಹಾಕಬಹುದು. ಅದಕ್ಕಿಂತ ಮೊದಲು ಬಂದ ಮತದಾರರು ಇದ್ದರೆ, ಟೋಕನ್ ಕೊಡಲಾಗುತ್ತದೆ. ಅಲ್ಲಿಯವರೆಗೆ ಮತದಾರ ಅಲ್ಲಿಯೇ ವಿಶ್ರಾಂತಿ ಪಡೆಯಲು ಕುರ್ಚಿ, ಬೆಂಚು, ಸೋಫಾ ಸೇರಿದಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ.
ಮತಗಟ್ಟೆಗಳ ಪ್ರವೇಶದ್ವಾರದಿಂದಲೇ ಸುಸಜ್ಜಿತವಾಗಿ ನವೀಕರಿಸಲಾಗಿದೆ. ಸ್ವಾಗತ ಕಮಾನು ಮಾಡ ಲಾಗಿದೆ. ಮತದಾರರಿಗೆ ಮಾಹಿತಿ ತಿಳಿಸುವ ಸೂಚನಾ ಫಲಕಗಳನ್ನು ಅಲ್ಲಲ್ಲಿ ಜೋಡಿಸಲಾಗಿದೆ. ಮತ ಗಟ್ಟೆಯ ಒಳಗಡೆ ಬಲೂನುಗಳ ಸಹಾಯದಿಂದ ಆಕರ್ಷಕವಾಗಿ ಕೋಣೆ ಶೃಂಗರಿಸಲಾಗಿದೆ. ಮದುವೆ ಮನೆಯಲ್ಲಿರುವ ಶೃಂಗಾರ ಮತಗಟ್ಟೆಯಲ್ಲಿದೆ.
ಫ್ಯಾನ್, ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯ ವ್ಯವಸ್ಥೆ ಇದೆ. ಮತಗಟ್ಟೆಗಳಿಗೆ ಮತದಾರರು ಬರುವಾಗ ಅನಿವಾರ್ಯವಾಗಿ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದರೆ ನೋಡಿಕೊಳ್ಳಲು ಒಬ್ಬ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಜತೆಗೆ ಮಕ್ಕಳಿಗೆ ಆಟವಾಡುವ ಕಾರಣದಿಂದ ಆಟೋಟ ಸಾಮಾಗ್ರಿಗಳನ್ನು ಜೋಡಿಸಿಡಲಾಗಿದೆ.
ಮಾದರಿ ಮತಗಟ್ಟೆಗಳು ರೆಡಿ
ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಮತದಾರರನ್ನು ಆಕರ್ಷಿಸಬೇಕು ಎಂಬ ಉದ್ದೇಶದಿಂದ ಕೆಲವು ಮತಗಟ್ಟೆಗಳನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಈ ಪೈಕಿ ಮಂಗಳೂರಿನ ಲೇಡಿಹಿಲ್ ಹಾಗೂ ಗಾಂಧೀನಗರದ ಎರಡು ಮತಗಟ್ಟೆಗಳನ್ನು ಮಾದರಿ ರೀತಿಯಲ್ಲಿ ರೂಪಿಸಲಾಗಿದೆ.
-ಡಾ| ಎಂ.ಆರ್. ರವಿ, ಜಿ. ಪಂ. ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.