ಮಾದರಿ ವಿದ್ಯುತ್ ಗ್ರಾಮ ಬಡಗುಳಿಪಾಡಿ
Team Udayavani, Aug 6, 2017, 6:05 AM IST
ರಾಜ್ಯ ಸರಕಾರದ ನಿರಂತರ ವಿದ್ಯುತ್ ಪೂರೈಕೆಯ ಮಹತ್ವಾಕಾಂಕ್ಷಿ ಯೋಜನೆಯ ಮಾದರಿ ವಿದ್ಯುತ್ ಗ್ರಾಮಗಳಲ್ಲಿ ಬಡಗುಳಿಪಾಡಿ ಗ್ರಾಮ ಒಂದು. ಇದು ವಿದ್ಯುತ್ ಅಡಚಣೆ ರಹಿತ ಗ್ರಾಮವಾಗಿ ಮೂಡಿಬರಲಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗಂಜಿಮಠ ಗ್ರಾಮ ಪಂಚಾಯತ್‌ವ್ಯಾಪ್ತಿಯ ಈ ಗ್ರಾಮ ಮೆಸ್ಕಾಂ ಕೈಕಂಬ ಶಾಖೆಗೆ ಸೇರಿದೆ.
ಬಡಗುಳಿಪಾಡಿ ಗ್ರಾಮ
1,981.47 ಹೆಕ್ಟೇರ್ ವಿಸ್ತೀರ್ಣ, 12,475 ಜನಸಂಖ್ಯೆ, (ಗಂಡಸರು -6,092, ಹೆಂಗಸರು-6,383), ಪರಿಶಿಷ್ಟ ಜಾತಿ-253, ಪ.ಪಂಗಡ -260, ಅಲ್ಪಸಂಖ್ಯಾಕರು 2,253 ಒಟ್ಟು ಸೇರಿ 2,300 ಕುಟುಂಬಗಳು ಹಾಗೂ ಮನೆಗಳು (ಆರ್‌ಸಿಸಿ 1,575, ಹೆಂಚಿನ ಮನೆ 725), 11 ಗ್ರಾ.ಪಂ. ಸದಸ್ಯರು, 235 ಅಂಗಡಿಗಳು, 2 ದೇವಸ್ಥಾನಗಳು, 2 ಮಸೀದಿಗಳು, 7 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, 8 ಅಂಗನವಾಡಿಗಳು ಇದ್ದು, ಪಂಚಾಯತ್‌ನಿಂದ ನೀರಾವರಿ ಸರಬರಾಜಿಗೆ 8 ಪಂಪುಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 250 ದಾರಿದೀಪಗಳಿವೆ. 4 ಕಾರ್ಖಾನೆಗಳಿವೆ.
ಗ್ರಾಮದ ಹಳ್ಳಿಗಳ ಹೆಸರು
ಗಾಂಧಿನಗರ, ಮಡಿ, ಒಡೂxರು, ಮಳಲಿ ಕ್ರಾಸ್, ಸೂರಲ್ಪಾಡಿ, ಅಸ್ರರ್ ನಗರ.
ಯಾವುದು ಇನ್ನೂ ಆಗಬೇಕು
ರಾಜ್ ಅಕಾಡೆಮಿ ಶಾಲೆಯ ಬಳಿ ಹೊಸ ವಿದ್ಯುತ್ ಪರಿವರ್ತಕ, ಉರ್ದು ಶಾಲೆಯ ಬಳಿ ವಿದ್ಯುತ್ ಪರಿವರ್ತಕದ ತಂತಿ ಬದಲಾವಣೆ, ಸಾಧೂರು-ಪಟ್ಲ ಲಿಂಕ್ ಲೈನ್ ಅಳವಡಿಸುವುದು. ಬೀದಿದೀಪಗಳಿಗೆ ಮೀಟರ್ ಮತ್ತು ಟೈಮರ್ ಸ್ವಿಚ್ ಅಳವಡಿಕೆ ಆಗಬೇಕಾಗಿದೆ. ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ.
ಗ್ರಾಮಸ್ಥರ ಬೇಡಿಕೆ
ಶಾಂತಿನಗರದಲ್ಲಿ ಹೊಸ ವಿದ್ಯುತ್ ಪರಿವರ್ತಕ ಹಾಕಬೇಕು. ನಾರಳದಲ್ಲಿರುವ ಪಂಪ್ ಹೌಸ್ ಪ್ರದೇಶದಲ್ಲಿ ವಿದ್ಯುತ್ ತೊಂದರೆಯಿಂದಾಗಿ ಕುಡಿಯುವ ನೀರಿನ ಸರಬರಾಜಿಗೆ ಅಡಚಣೆಯಾಗಿದೆ. ಇಲ್ಲಿ ವಿದ್ಯುತ್ ಪರಿವರ್ತಕ ಬೇಕು.
ಚಿರತೆ ಕಾಣಿಸಿಕೊಂಡಿದೆ
ಮಟ್ಟಿಯಲ್ಲಿ ತಂತಿಗಳು ಅಪಾಯಕಾರಿ ರೀತಿಯಲ್ಲಿ ಜೋತು ಬಿದ್ದಿವೆ. ನಡುವೆ ವಿದ್ಯುತ್ ಕಂಬ ಹಾಕಬೇಕಾಗಿದೆ. ಮಟ್ಟಿ ಪಡೀಲು ರಸ್ತೆ ಹಾಗೂ ಬಲಿಪಗುರಿ ಕಾಂಕ್ರೀಟೀಕರಣಗೊಂಡ ರಸ್ತೆಗೆ ದಾರಿ ದೀಪ ಇಲ್ಲ. ಇದು ನಿರ್ಜನ ಪ್ರದೇಶವಾಗಿದ್ದು, ಚಿರತೆ ಕಾಣಿಸಿಕೊಂಡಿರುವ ಸಂದರ್ಭಗಳಿವೆ. ಹಾಗಾಗಿ, ದಾರಿದೀಪದ ವ್ಯವಸ್ಥೆ ಆಗಬೇಕು.
– ದೇವಿದಾಸ್ ಪ್ರಭು,
ಮಟ್ಟಿ, ಪಡೀಲ್ ನಿವಾಸಿ
– ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.