ಮಾದರಿ ವಿದ್ಯುತ್ ಗ್ರಾಮ ಕಿನ್ಯಾ
Team Udayavani, Aug 8, 2017, 6:40 AM IST
ವಿದ್ಯುತ್ ಸಬ್‌ಸ್ಟೇಷನ್ ಆದರೆ ಸಮಸ್ಯೆ ಪರಿಹಾರ
ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ಯಾ ರಾಜ್ಯ ಸರಕಾರದ ನಿರಂತರ ವಿದ್ಯುತ್ ಪೂರೈಕೆಯ ಮಹತ್ವಾಕಾಂಕ್ಷಿ ಯೋಜನೆಗೆ ಆಯ್ಕೆಯಾದ ಗ್ರಾಮ ಪಂಚಾಯತ್. ಈ ಗ್ರಾಮವು ಕೋಟೆಕಾರು, ಮಂಜನಾಡಿ, ತಲಪಾಡಿ ಮತ್ತು ಬಂಟ್ವಾಳ ತಾಲೂಕಿನ ನರಿಂಗಾನ ಪಂಚಾಯತ್‌ನ ಗಡಿಭಾಗವನ್ನು ಹೊಂದಿದ್ದು, ಪಂಚಾಯತ್ ವ್ಯಾಪ್ತಿಯ ಒಟ್ಟು ವಿಸ್ತೀರ್ಣದಲ್ಲಿ ಶೇ. 70ರಷ್ಟು ಕೃಷಿ ಭೂಮಿಯನ್ನು ಹೊಂದಿದೆ. 1994ರಲ್ಲಿ ಗ್ರಾಮ ಪಂಚಾಯತ್ ಆಗಿ ಸ್ಥಾಪನೆಗೊಂಡ ಈ ಗ್ರಾಮ 2008-09ರ ಸಾಲಿನಲ್ಲಿ ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದಿದ್ದು, ಉಳ್ಳಾಲ ಮೆಸ್ಕಾಂನ ಕೋಟೆಕಾರು ವಿಭಾಗದ ವ್ಯಾಪ್ತಿಯಲ್ಲಿದೆ.
ಕಿನ್ಯಾ ಗ್ರಾಮ
1,034.70 ಹೆಕ್ಟೇರ್ ವಿಸ್ತೀರ್ಣ, 4,970 ಜನಸಂಖ್ಯೆ (2,607 ಪುರುಷರು, 2,363 ಮಹಿಳೆಯರು), 1,100 ಮನೆಗಳು (ಪರಿಶಿಷ್ಟ ಜಾತಿ-23 ಮನೆಗಳು, 110 ಜನರು, ಪ.ಪಂಗಡ -2 ಮನೆಗಳು, 10 ಜನರು), 12 ಗ್ರಾ.ಪಂ. ಸದಸ್ಯರು ಇದ್ದು, 9 ಮಸೀದಿಗಳು, 10 ದೇವಸ್ಥಾನ -ದೈವಸ್ಥಾನಗಳು, 5 ಅಂಗನವಾಡಿ ಕೇಂದ್ರಗಳು, 2 ಕಿರಿಯ, 2 ಹಿರಿಯ ಪ್ರಾಥಮಿಕ ಶಾಲೆಗಳು, 9 ನೀರಿನ ಸ್ಥಾವರಗಳು, 370 ದಾರಿದೀಪಗಳಿವೆ.
ಗ್ರಾಮದ ಹಳ್ಳಿಗಳ ಹೆಸರು
ಮೀನಾದಿ, ಕುತುಬಿ ನಗರ, ತಟ್ಟಾಜೆ, ಕನಕ ಮುಗೇರು, ಪಾದೆ, ಉಕ್ಕುಡ, ಬೆಳರಿಂಗೆ, ಕುಚ್ಚಿಗುಡ್ಡೆ, ಪಾಲೆದಡಿ, ಮೀಂಪ್ರಿ, ಸಂಕೇಶ, ನಾಟೆಕಲ್ (ಭಾಗಶಃ ಪ್ರದೇಶ), ರಹಮತ್‌ನಗರ,ಸಾಂತ್ಯ, ಕುರಿಯ, ಮೇಗಿನ ಕಜೆ, ಕಜೆ.
10 ಲ.ರೂ. ಅನುದಾನದಲ್ಲಿ ಕಾಮಗಾರಿ
ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೀನಾದಿ ಕನಕ ಮುಗೇರು ಮತ್ತು ಕುರಿಯ ಬಳಿ ಟ್ರಾನ್ಸ್‌ಫಾರ್ಮರ್ ಅಭಿವೃದ್ಧಿ ಕಾರ್ಯ 10 ಲಕ್ಷ ರೂ. ವೆಚ್ಚ ದಲ್ಲಿ ಮೆಸ್ಕಾಂ ಅನುದಾನದಲ್ಲಿ ನಡೆಯುತ್ತಿದೆ. ಈ ಯೋಜನೆ ಜಾರಿಯಾದರೆ ಗ್ರಾಮದಲ್ಲಿ ಹಳೆ ವಿದ್ಯುತ್ ತಂತಿ, ಕಂಬ ಬದಲಾವಣೆಯಾಗಬೇಕಿದ್ದು, ಹೆಚ್ಚುವರಿ ಬೀದಿ ದೀಪಗಳ ಆವಶ್ಯಕತೆಯಿದೆ.
ಕೋಟೆಕಾರು ವಿದ್ಯುತ್ ಸಬ್‌ಸ್ಟೇಷನ್
ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಕೋಟೆಕಾರು ಫೀಡರ್ ಮತ್ತು ಮಂಜನಾಡಿ ಫೀಡರ್‌ನಿಂದ ವಿದ್ಯುತ್ ಪೂರೈಕೆ ನಡೆಯುತ್ತಿದೆ. ಕೋಟೆಕಾರು ಫೀಡರ್‌ನಿಂದ ಸಮಸ್ಯೆಗಳು ಕಡಿಮೆಯಿದ್ದರೆ, ಮಂಜನಾಡಿ ಫೀಡರ್‌ನಿಂದ ಬರುವ ಹೆಚ್ಚಿನ ವಿದ್ಯುತ್ ತಂತಿಗಳು ತೋಟದ ಮಧ್ಯೆ ಹಾದು ಹೋಗುವುದರಿಂದ ವೋಲ್ಟೆàಜ್ ಸಮಸ್ಯೆ, ತಂತಿ ತುಂಡಾಗುವ ಸಮಸ್ಯೆ ಇದೆ. ಈಗಾಗಲೇ ಉಳ್ಳಾಲ ಮೆಸ್ಕಾಂ ವ್ಯಾಪ್ತಿಯಲ್ಲಿ ಚೆಂಬುಗುಡ್ಡೆ ಮತ್ತು ಕೊಣಾಜೆಯಲ್ಲಿ ಎರಡು ಸ್ಟೇಷನ್ ಮಾತ್ರವಿದ್ದು, ಕೋಟೆಕಾರಿನಲ್ಲಿ ಸುಸಜ್ಜಿತ ಸಬ್‌ಸ್ಟೇಷನ್ ಆದರೆ ತಲಪಾಡಿ, ಕೋಟೆಕಾರು, ಕಿನ್ಯಾ, ಸೋಮೇಶ್ವರ ಗ್ರಾಮದ ವಿದ್ಯುತ್ ಸಮಸ್ಯೆ ಪರಿಹಾರವಾಗಲಿದೆ.
ಫೀಡರ್ ಅಭಿವೃದ್ಧಿ ಮಾಡಬೇಕು
ಮಂಜನಾಡಿ ಪುಳಿತ್ತಡಿ ಫೀಡರ್ ಬದಲಾವಣೆ ಮಾಡಿ ಕೋಟೆಕಾರು ಫೀಡರ್ ಅಭಿವೃದ್ಧಿ ಮಾಡಬೇಕು. ತೋಟಗಳಲ್ಲಿ ಹೋಗಿರುವ ವಿದ್ಯುತ್ ಕಂಬಗಳು, ತಂತಿಗಳನ್ನು ಬದಲಾವಣೆ ಮಾಡಿದರೆ ಇಲ್ಲಿನ ವಿದ್ಯುತ್‌ಗೆ ಸಂಬಂಧಿಸಿದ ಪ್ರಮುಖ ಸಮಸ್ಯೆ ನಿವಾರಣೆಯಾಗುತ್ತದೆ.
-ಸಿರಾಜ್ ಕಿನ್ಯಾ, ಉಪಾಧ್ಯಕ್ಷರು, ಕಿನ್ಯಾ ಗ್ರಾ.ಪಂ.
ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ 1,100 ಮನೆಗಳಿಗೆ ವಿದ್ಯುತ್ ಸೌಲಭ್ಯವಿದೆ. ಬುಧವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ವಿದ್ಯುತ್ ಸಂಪರ್ಕವಿದೆ. ಆದರೂ, ಶೇ. 70 ಪ್ರತಿಶತ ಕೃಷಿ ಭೂಮಿ ಇದ್ದು, ಹೆಚ್ಚಿನ ವಿದ್ಯುತ್ ಕಂಬಗಳು (ಮಂಜನಾಡಿ ಫೀಡರ್) ತೋಟದ ನಡುವೆ ಹಾದು ಹೋಗುವುದರಿಂದ ವಿದ್ಯುತ್ ತಂತಿಗಳಿಗೆ ಹಾನಿಯಾಗಿ (ಮರ ಬಿದ್ದು, ಇತ್ಯಾದಿ ಕಾರಣಗಳಿಂದ) ವಿದ್ಯುತ್ ವ್ಯತ್ಯಯ ಸರ್ವೇ ಸಾಮಾನ್ಯವಾಗಿದೆ.
– ವಸಂತ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.