ವಿಜಯ ಬ್ಯಾಂಕ್ ವಿಲೀನ ಕುರಿತು ಮೋದಿ ಉತ್ತರಿಸಲಿ: ಐವನ್ ಡಿ’ಸೋಜಾ
Team Udayavani, Apr 11, 2019, 6:00 AM IST
ನಗರ: ನರೇಂದ್ರ ಮೋದಿ ಅವರನ್ನು ಮೆಚ್ಚಿಸುವ ಸಲುವಾಗಿ ಜಿಲ್ಲೆಯವರಾದ ಮೂವರು ಸಂಸದರು ವಿಜಯ ಬ್ಯಾಂಕ್‌ನ್ನು ಬಲಿಕೊಟ್ಟಿದ್ದಾರೆ. ಈ ಕುರಿತು ಈ ಸಂಸದರು ಜನತೆಗೆ ಉತ್ತರ ನೀಡಲಿ. ಇಲ್ಲದಿದ್ದರೆ ಎ. 13ರಂದು ನರೇಂದ್ರ ಮೋದಿಯವರ ಎದುರು ಕಾರ್ಯಕರ್ತರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಎಚ್ಚರಿಸಿದ್ದಾರೆ.
ಪುತ್ತೂರಿನಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ ಬ್ಯಾಂಕ್ ಮುಳುಗಿಸಿದ್ದು ಕಾಂಗ್ರೆಸ್ ಎಂದು ಕೆಲವು ನಿವೃತ್ತ ಸಿಬಂದಿ ಆರೋಪಿಸಿರುವುದು ಬಿಜೆಪಿಗೆ ಬೆಂಬಲಿಸುವ ಸಲುವಾಗಿ. ಇದಕ್ಕೆ ಸರಿಯಾದ ದಾಖಲೆಗಳನ್ನು ಕೊಟ್ಟು ಅವರು ಮಾತನಾಡಲಿ ಎಂದು ಹೇಳಿದರು.
ವಂಚಿಸುವ ಮೋದಿ
ಕರ್ನಾಟಕದ 17 ಸಂಸದರು ಇದ್ದು ಕೊಂಡೂ ರಾಜ್ಯಕ್ಕೆ ಕೇಂದ್ರದಿಂದ ಏನೂ ನೀಡಿಲ್ಲ. ಒಮ್ಮೆ ಚಾಯ್‌ವಾಲಾ, ಮತ್ತೂಮ್ಮೆ ಚೌಕೀದಾರ್ ಎನ್ನುತ್ತಾ ಜನರನ್ನು ವಂಚಿಸುವ ಮೋದಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ರೇಣುಕಾಚಾರ್ಯ ಮೊದಲಾದವರು ಚೌಕೀದಾರರೇ? ಎಂಬುದನ್ನು ತಿಳಿಸಬೇಕು. ವಂಚನೆ ಮಾಡಿ ಜೈಲಿಗೆ ಹೋದವರು ಚೌಕಿದಾರರೇ? ಎನ್ನುವುದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಮೋದಿಗೆ ಜೈಲು ಖಚಿತ
30 ಸಾವಿರ ಕೋಟಿ ರೂ.ನ ರಫೇಲ್ ಡೀಲ್ ಕುರಿತು ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ನೈತಿಕ ಗೆಲುವು. ಮತ್ತೂಮ್ಮೆ ತನಿಖೆಯಾದಾಗ ಮೋದಿ ಜೈಲಿಗೆ ಹೋಗುವುದು ಖಚಿತ. 10 ದಿನದ ಕಂಪೆನಿಗೆ ಡೀಲ್ ಮಾಡಿಕೊಟ್ಟಿರುವುದಕ್ಕೆ ಬೆಲೆ ತೆರಬೇಕಾಗುತ್ತದೆ. ದೇಶದ ರಕ್ಷಣೆಗೆ ಸಂಬಂಧಿಸಿದ ಯುದ್ಧ ವಿಮಾನ ಖರೀದಿ ಯಲ್ಲಿ ವಂಚಿಸಿದವರು ದೇಶ ರಕ್ಷಕರೇ? ಅಥವಾ ಭಕ್ಷಕರೇ? ಸೈನಿಕರ ವಿಚಾರವನ್ನು ಬಳಸಿಕೊಂಡು ಚುನಾವಣೆಯಲ್ಲಿ 22 ಸೀಟು ಗೆಲ್ಲುವುದು ಖಚಿತ ಎನ್ನುವ ಹೇಳಿಕೆ ನೀಡುವ ಯಡಿಯೂರಪ್ಪ ದೇಶ ರಕ್ಷಕರೇ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಮಾಜಿ ಅಧ್ಯಕ್ಷ ಎ. ಹೇಮನಾಥ ಶೆಟ್ಟಿ, ಮುಖಂಡರಾದ ಮಹಮ್ಮದ್ ಆಲಿ, ನಿರ್ಮಲ್ ಕುಮಾರ್ ಜೈನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.