Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Team Udayavani, Apr 26, 2024, 12:13 AM IST

1-MB

ಮಂಗಳೂರು: ನೋಟು ಅಮಾನ್ಯಿàಕರಣ ಮಾಡಿದ ಸಂದರ್ಭ ಅದೆಷ್ಟೋ ಮಹಿಳೆಯರು ತಮ್ಮ ಮಂಗಳಸೂತ್ರವನ್ನೇ ಅಡವಿಟ್ಟಿದ್ದರು. ಆಗ ಪ್ರಧಾನಿ ಮೋದಿ ಮೌನವಾಗಿದ್ದು ಯಾಕೆ? ಸಾಲದ ಸುಳಿಯಲ್ಲಿ ಸಿಲುಕಿರುವ ರೈತನ ಪತ್ನಿ ಮಂಗಳಸೂತ್ರವನ್ನು ಮಾರಬೇಕಾದಾಗ ಪ್ರಧಾನಿ ಎಲ್ಲಿದ್ದರು? ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಸಂದರ್ಭ ಏನನ್ನೂ ಹೇಳದ ಪ್ರಧಾನಿ ಅವರು ಈಗ ಮಾಂಗಲ್ಯವನ್ನು ಕಾಂಗ್ರೆಸ್‌ ಕಿತ್ತುಕೊಳ್ಳುತ್ತಿದೆ ಎಂಬ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಮಂಗಳೂರಿನ ವಿವಿಧ ಕಡೆಗಳಲ್ಲಿ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಅವರ ಪರವಾಗಿ ಮನೆ ಮನೆ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಚುನಾವಣ ಭಾಷಣದಲ್ಲಿ ಹೇಳಿದ ಹೇಳಿಕೆಗಳು ಗೌರವಾನ್ವಿತ ಪ್ರಧಾನ ಮಂತ್ರಿ ಸ್ಥಾನಕ್ಕೆ ಯೋಗ್ಯವಾಗಿರುವುದಿಲ್ಲ ಹಾಗೂ ಅಂತಹ ಕೀಳುಮಟ್ಟದ ಹೇಳಿಕೆಗಳು ದೇಶದಲ್ಲಿರುವ ಧರ್ಮಗಳ ನಡುವೆ, ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತಿರುತ್ತದೆ ಎಂದರು.

ಮೋದಿ ಸರಕಾರ ಮೌನ ಯಾಕೆ?
ಕರ್ನಾಟಕದಲ್ಲಿ ಮುಸಲ್ಮಾನರಿಗೆ ನೀಡಿದ ಮೀಸಲಾತಿಯನ್ನು ಸ್ವಾತಂತ್ರ್ಯ ಪೂರ್ವದ ನಾಲ್ವಡಿ ಕೃಷ್ಣರಾಜ ಒಡೆಯರ್‌ ನೇಮಿಸಿದ ಮಿಲ್ಲರ್‌ ಆಯೋಗದಿಂದ ಹಿಡಿದು ಸ್ವಾತಂತ್ರ್ಯಾ ನಂತರದ ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ ಆಯೋಗದ ಆದಿಯಾಗಿ ಇಂದಿನ ಎಲ್ಲ ಆಯೋಗಗಳು ಮುಸ್ಲಿಮರನ್ನು ಹಿಂದುಳಿದ ವರ್ಗಗಳು ಎಂದೇ ಕರ್ನಾಟಕದಲ್ಲಿ ಗುರುತಿಸಲಾಗಿದೆ. ಕರ್ನಾಟಕದಲ್ಲಿ ಮುಸಲ್ಮಾನರನ್ನು 2ಬಿ ಕೆಟಗರಿಯಾದ ಹಿಂದುಳಿದ ವರ್ಗದವರೊಂದಿಗೆ ಸೇರಿಸಿಕೊಂಡು 1974ರ ಎಲ್‌.ಜಿ. ಹಾವನೂರು ಅವರ ವರದಿಯಿಂದ ಇದು ಕಳೆದ 3 ದಶಕಗಳಿಂದ ಇದೆ. ಕಳೆದ ಸಲ ಬಿಜೆಪಿ ಸರಕಾರವಿರುವಾಗ ಅಥವಾ ಕಳೆದ 10 ವರ್ಷದಿಂದ ಮೋದಿ ಸರಕಾರ ಇದರ ಬಗ್ಗೆ ಯಾಕೆ ಚಕಾರ ಎತ್ತಲಿಲ್ಲ ಅಥವಾ ಕೋರ್ಟ್‌ನಲ್ಲಿ ಸಹ ಪ್ರಶ್ನೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ಮೀಸಲಾತಿ; ಕೇಂದ್ರ ಸರಕಾರ ನಿರಾಕರಣೆ
ಧರ್ಮವನ್ನು ಒಡೆದು ಮತ ಗಳಿಸುವ ಉದ್ದೇಶದಿಂದ ಕಳೆದ ಸಲ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರಕಾರ ಮುಸಲ್ಮಾನರಿಗೆ ಮೀಸಲಾತಿಯನ್ನು ತಿದ್ದುಪಡಿ ಮಾಡಿದೆ. ಆದರೆ ಸುಪ್ರೀಂ ಕೋರ್ಟ್‌ ಅದನ್ನು ಅನುಷ್ಠಾನ ಮಾಡಲು ಬಿಡಲಿಲ್ಲ. ಕಳೆದ ಬಿಜೆಪಿ ಸರಕಾರ ಎಸ್‌ಸಿ ರಿಸರ್ವೇಶನ್‌ ಶೇ. 15ರಿಂದ 17ರ ವರೆಗೆ, ಎಸ್‌ಟಿಯನ್ನು ಶೇ. 3ರಿಂದ 5ರ ವ ರೆ ಗೆ ಏರಿಸಿತ್ತು. ಆದರೆ ಮಾರ್ಚ್‌ 14ರಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರು ನಮಗೆ ರಾಜ್ಯದಿಂದ ಯಾವುದೇ ರೀತಿಯ ಮನವಿ ಬಂದಿಲ್ಲ ಎಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ ಎಂದರು.

ರಾಜ್ಯದಿಂದ ಗ್ಯಾರಂಟಿ; ಕೇಂದ್ರದಿಂದ ಚೊಂಬು
ಕಳೆದ 10 ವರ್ಷಗಳಿಂದ ಪ್ರಧಾನಿಯವರು ಭರವಸೆಗಳನ್ನು ನೀಡಿ ಯಾವುದನ್ನೂ ನಿರ್ವಹಿಸದೆ ಭಾರತೀಯ ಜನತೆಗೆ ಕೇವಲ ಚೊಂಬು ನೀಡಿದ್ದಾರೆ. ಆದರೆ ಕರ್ನಾಟಕ ಸರಕಾರದ ಗ್ಯಾರಂಟಿಗಳನ್ನು ನಂಬಿದ ಜನರು ಅದರಲ್ಲೂ ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿರುವ ಜನರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದಲ್ಲಿ ಅತ್ಯಧಿಕ ಸ್ಥಾನ ನೀಡುವ ಎಲ್ಲ ಸಾಧ್ಯತೆ ಇದೆ ಎಂದು ಮಂಜುನಾಥ ಭಂಡಾರಿ ಅವರು ಮತಯಾಚನೆಯ ಸಂದರ್ಭ ತಿಳಿಸಿದರು.

ಟಾಪ್ ನ್ಯೂಸ್

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

OM BIrla

Waqf ಸಮಿತಿಯಿಂದ ದೂರ: ಇಂದು ಸ್ಪೀಕರ್‌ ಜತೆ ವಿಪಕ್ಷ ಚರ್ಚೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ

Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ

BJP Protest: ರೈತರ ಜಮೀನು ವಕ್ಫ್ ಖಾತೆಗೆ ಭೂಪರಿವರ್ತನೆ

BJP Protest: ರೈತರ ಜಮೀನು ವಕ್ಫ್ ಖಾತೆಗೆ ಭೂಪರಿವರ್ತನೆ

Mangaluru: ಮಹಾಕಾಳಿಪಡ್ಪು ಕೆಳಸೇತುವೆ ಜನವರಿಯಲ್ಲಿ ಪೂರ್ಣ

Mangaluru: ಮಹಾಕಾಳಿಪಡ್ಪು ಕೆಳಸೇತುವೆ ಜನವರಿಯಲ್ಲಿ ಪೂರ್ಣ

Mangaluru: ನ.5, 6: ವಿಶ್ವ ಕೊಂಕಣಿ ಸಮಾರೋಹ, ಪ್ರಶಸ್ತಿ ಪ್ರದಾನ

Mangaluru: ನ.5, 6: ವಿಶ್ವ ಕೊಂಕಣಿ ಸಮಾರೋಹ, ಪ್ರಶಸ್ತಿ ಪ್ರದಾನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.