ಮಂಗಳೂರಿನಲ್ಲಿ  ವಾಸ್ತವ್ಯವಿದ್ದು  ನಿರ್ಗಮಿಸಿದ ಮೋದಿ


Team Udayavani, Dec 20, 2017, 3:00 PM IST

20-24.jpg

ಮಂಗಳೂರು: ನಗರದಲ್ಲಿ ಇದೇ ಮೊದಲ ಬಾರಿಗೆ ಸೋಮವಾರ ರಾತ್ರಿ ವಾಸ್ತವ್ಯವಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ 7.45ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ನಿರ್ಗಮಿಸಿದರು.

ಲಕ್ಷದ್ವೀಪ, ಕೇರಳ ಹಾಗೂ ತಮಿಳುನಾಡುಗಳಲ್ಲಿ   ಒಖೀ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಪರಿ ಶೀಲನೆಗಾಗಿ ಸೋಮವಾರ ರಾತ್ರಿ ಹೊಸದಿಲ್ಲಿ ಯಿಂದ ಹೊರಟು ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಕದ್ರಿಹಿಲ…Õನ ಸಕೀìಟ್‌ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಮೋದಿ ರಾತ್ರಿ 12 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ಸಕೀìಟ್‌ ಹೌಸ್‌ಗೆ ಪ್ರಯಾಣಿಸಿದರು. ಸಕೀìಟ್‌ ಹೌಸ್‌ನಲ್ಲಿ ಸೂಟ್‌ ನಂ.1ರ ಕೊಠಡಿಯನ್ನು ಪ್ರಧಾನಿ ವಾಸ್ತವ್ಯಕ್ಕೆ ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು.

ಮಂಗಳವಾರ ಮುಂಜಾನೆ ಸಕೀìಟ್‌ ಹೌಸ್‌ನಲ್ಲೇ ಉಪಾಹಾರ ಸೇವಿಸಿದ ಅವರು ಬಳಿಕ 7.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು. ಅಲ್ಲಿಂದ ಮತ್ತೆ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ನಿರ್ಗಮಿಸಿದರು. ಪ್ರಧಾನಿ ಜತೆಗೆ ಕೇಂದ್ರ ಭೂಸಾರಿಗೆ ಮತ್ತು ನೌಕಾಯಾನ ರಾಜ್ಯ ಸಚಿವ ಪೊಣ್‌ ರಾಧಾಕೃಷ್ಣನ್‌ ಅವರೂ ಪ್ರಯಾಣಿಸಿದ್ದಾರೆ. ರಾಜ್ಯ ಡಿಜಿಪಿ ನೀಲಮಣಿ ಎನ್‌. ರಾಜು, ಎಡಿಜಿಪಿ ಕಮಲ್‌ ಪಂತ್‌, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಜಿಲ್ಲಾ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಯವ ರನ್ನು ಶಿಷ್ಟಾಚಾರದಂತೆ ಬೀಳ್ಕೊಟ್ಟರು. ಸಂಸದ ನಳಿನ್‌, ಮಾಜಿ ಶಾಸಕ ಯೋಗೀಶ್‌ ಭಟ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯ ದರ್ಶಿ ಕಿಶೋರ್‌ ರೈ, ಜಿಲ್ಲಾಧಿಕಾರಿ ಸೆಂಥಿಲ್‌ ಹಾಜರಿದ್ದರು. 

“ನಮೋ ಮಂಜುನಾಥ’ ಹಸ್ತಾಂತರ
ಪ್ರಧಾನಿ ನರೇಂದ್ರ ಮೋದಿ ಅ. 29ರಂದು ಉಜಿರೆ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುರಿ ತಾಗಿನ ಮಾಹಿತಿ, ಚಿತ್ರಸಂಪುಟಗಳುಳ್ಳ “ನಮೋ ಮಂಜುನಾಥ’ ಎನ್ನುವ ಪುಸ್ತಕವನ್ನು  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ ಮೂಲಕ ಉದಯವಾಣಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಸಂಪಾ ದನೆಯಲ್ಲಿ ಹೊರತರಲಾಗಿತ್ತು. ಈ ಪುಸ್ತಕವನ್ನು ಸಂಸದ ನಳಿನ್‌ ಅವರು ಮಂಗಳವಾರ ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಿದರು. 

ಪುಸ್ತಕ ಕನ್ನಡದಲ್ಲಿದ್ದ ಕಾರಣ ವೀಕ್ಷಿಸಿದ ಮೋದಿಯವರು ಚಿತ್ರಗಳನ್ನು ನೋಡಿ, ಪುಸ್ತಕದ ಗುಣಮಟ್ಟ ಕಂಡು ಶ್ಲಾ ಸಿದರು. ಸಕೀìಟ್‌ ಹೌಸ್‌ ಮುಂದೆ ಅಭಿಮಾನಿಗಳು ಪ್ರಧಾನಿ ಮೋದಿ ಅವರನ್ನು ನೋಡುವುದಕ್ಕಾಗಿ ಬೆಳಗ್ಗೆ 7 ಗಂಟೆಯಿಂದಲೇ ಸಕೀìಟ್‌ ಹೌಸ್‌ನ ಹೊರಗಡೆ ರಸ್ತೆಯಲ್ಲಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಲಾರಂಭಿಸಿದ್ದರು. ಬೆಳಗ್ಗೆ 7.30ಕ್ಕೆ ಸಕೀìಟ್‌ ಹೌಸ್‌ನಿಂದ ಹೊರಬಂದ ಪ್ರಧಾನಿ ಮೋದಿ ಹೊರಗೆ ಕಾದು ನಿಂತಿದ್ದ ಜನರನ್ನು ಕಂಡು ತಮ್ಮ ಕಾರನ್ನು ನಿಧಾನಿಸಿ, ಜನರತ್ತ ಕೈಬೀಸಿದರು. ಜನರು ಪ್ರತಿಯಾಗಿ ಅವರತ್ತ ಕೈಬೀಸಿ “ಮೋದಿ, ಮೋದಿ’ ಎಂದು ಜೈಕಾರ ಕೂಗಿದರು.

ಜನರ ಸನಿಹಕ್ಕೆ …
ಪ್ರಧಾನಿ ಮೋದಿ ಅವರನ್ನು ಕಾಣಲು ವಿಮಾನ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಸೋಮವಾರ ಮಧ್ಯರಾತ್ರಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ನೆರೆದಿದ್ದರು. ಪೊಲೀಸ್‌ ಮೂಲಗಳ ಪ್ರಕಾರ, ಮೋದಿ ಅವರಿಗೆ ಸ್ವಾಗತ ಕೋರುವುದಕ್ಕೆ 2,500ಕ್ಕೂ ಅಧಿಕ ಕಾರ್ಯಕರ್ತರು ಅಲ್ಲಿ ಸೇರಿದ್ದರು. ಮೋದಿ ಅವರು ವಿಮಾನ ನಿಲ್ದಾಣದಿಂದ ಹೊರಬಂದ ಸಂದರ್ಭದಲ್ಲಿ ಅವರು ಕಾರನ್ನು ನಿಲ್ಲಿಸಿ ಅಲ್ಲಿಂದಲೇ ಜನರತ್ತ ಕೈಬೀಸಿ, ನಮಸ್ಕರಿಸಿ ಸಕೀìಟ್‌ ಹೌಸ್‌ಗೆ ತೆರಳುತ್ತಾರೆ ಎಂದು ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿ ಭಾವಿಸಿದ್ದರು. ಆ ಪ್ರಕಾರವೇ ಸೂಕ್ತ ಬಂದೋಬಸ್ತ್ ಹಾಗೂ ಜನರನ್ನು ನಿಯಂತ್ರಿಸುವುದಕ್ಕೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಪ್ರಧಾನಿ ಭದ್ರತೆಗಿದ್ದ ಎಸ್‌ಪಿಜಿ ಕಮಾಂಡೊ ಪಡೆ ಕೂಡ ಅದೇ ಲೆಕ್ಕಾಚಾರ ಹೊಂದಿತ್ತು. ಆದರೆ ನಡೆದದ್ದೇ ಬೇರೆ. ಪ್ರಧಾನಿ ಮೋದಿ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ, ನೆರೆದ ಕಾರ್ಯಕರ್ತರೆಲ್ಲ “ಮೋದಿ, ಮೋದಿ’ ಎಂದು ಘೋಷಣೆ ಕೂಗ ಲಾರಂಭಿಸಿದರು. ಆಗ ಮೋದಿಯವರು ಕಾರು ನಿಲ್ಲಿಸಿ, ಜನ ರತ್ತ ಕೈಬೀಸಿದರು. ಅವರು ಇನ್ನೇನು ನಿರ್ಗಮಿಸುತ್ತಾರೆ ಎಂದು ಪೊಲೀಸರು ಅಂದುಕೊಳ್ಳುತ್ತಿದ್ದಂತೆ, ಮೋದಿ ಏಕಾಏಕಿ ಕಾರಿನಿಂದ ಇಳಿದು ನೇರ ವಾಗಿ ಕಾರ್ಯಕರ್ತರ ಬಳಿ ಬಂದರು. ಇದರಿಂದ ಪೊಲೀಸರು ಹಾಗೂ ಭದ್ರತಾ ಸಿಬಂದಿ ಕ್ಷಣಕಾಲ ಗಾಬರಿಗೂ ಒಳಗಾದರು.

ಜನರನ್ನು ನಿಯಂತ್ರಿಸುವುದಕ್ಕೆ ತಾತ್ಕಾಲಿಕವಾಗಿ ಕಬ್ಬಿಣದ ಮೂರು ಹಂತದ ತಡೆಬೇಲಿಯನ್ನಷ್ಟೇ ನಿರ್ಮಿಸಲಾಗಿತ್ತು. ಮೋದಿ ಜನರತ್ತ ಆಗಮಿಸುತ್ತಿದ್ದಂತೆ ಜನಸ್ತೋಮ ಕೂಡ ರೋಮಾಂಚನಕ್ಕೆ ಒಳಗಾಗಿ ಭಾವಪರವಶರಾದರು. ಭಾರೀ ಸಂಖ್ಯೆಯಲ್ಲಿದ್ದ ಜನರು ಏಕಾಏಕಿ ಹಿಂಭಾಗದಿಂದ ಮುನ್ನುಗ್ಗಿ ಮೋದಿಯವರನ್ನು ಹತ್ತಿರದಿಂದ ಕಾಣುವುದಕ್ಕೆ ನೂಕುನುಗ್ಗಲು ಆರಂಭಿಸಿದರು. ಆಗ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಬಹುದೊಡ್ಡ ಸವಾಲಾಯಿತು. ಪ್ರಧಾನಿ ಮೋದಿ ಜನಸಮೂಹದ ಅಷ್ಟು ಸನಿಹಕ್ಕೆ ತೆರಳಿ ಹಸ್ತಲಾಘವ ನಡೆಸುತ್ತಾರೆ ಎಂಬುದನ್ನು ಪೊಲೀಸರಾಗಲಿ ಎಸ್‌ಪಿಜಿ ಭದ್ರತಾ ಸಿಬಂದಿಯಾಗಲಿ ಊಹಿಸಿಯೇ ಇರಲಿಲ್ಲ. ಒಂದೆಡೆ ಜನರ ಮುಗಿಲು ಮುಟ್ಟಿದ ಹರ್ಷ, ಇನ್ನೊಂದೆಡೆ ಪ್ರಧಾನಿ ಮೋದಿ ಅನಿರೀಕ್ಷಿತವಾಗಿ ಜನರ ಅತೀ ಸನಿಹಕ್ಕೆ ತೆರಳಿದ್ದು – ಭದ್ರತೆಗೆ ಸವಾಲೆನಿಸುವ ಈ ಸನ್ನಿವೇಶವನ್ನು ಭದ್ರತಾ ಸಿಬಂದಿ ಸಮಯೋಚಿತವಾಗಿ, ಯಶಸ್ವಿಯಾಗಿ ನಿರ್ವಹಿಸಿದ್ದು  ಗಮನಾರ್ಹ.

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವುMangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.