ಮತದಾನಕ್ಕೆ ಮುಂಚಿತವಾಗಿ ಅಣಕು ಮತದಾನ: ದ.ಕ. ಜಿಲ್ಲಾಧಿಕಾರಿ
Team Udayavani, Apr 10, 2018, 6:00 AM IST
ಮಂಗಳೂರು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತಯಂತ್ರಗಳು ಹಾಗೂ ವಿವಿಪ್ಯಾಟ್‌ಗಳ ಪ್ರಥಮ ಹಂತದ ಪರಿಶೀಲನೆ ಯಶಸ್ವಿಯಾಗಿ ನಡೆದಿದೆ. ದ್ವಿತೀಯ ಹಂತದಲ್ಲಿ ಪಕ್ಷ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಅಣಕು ಮತದಾನಕ್ಕೆ ಅವಕಾಶ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರು ತಿಳಿಸಿದರು.
ಮಂಗಳೂರು ಪಾಲಿಕೆಯಲ್ಲಿ ಸೋಮವಾರ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವಿವಿಧ ಪಕ್ಷಗಳ ಪ್ರತಿನಿಧಿಗಳ ಜತೆಗಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತೀ ಬೂತ್ ಮಟ್ಟದ ಅಧಿಕಾರಿಗಳು ಮತದಾನಕ್ಕೆ ಒಂದು ವಾರ ಮುಂಚಿತವಾಗಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪತ್ರ (ವೋಟರ್ ಸ್ಲಿಪ್) ಹಂಚುತ್ತಾರೆ. ಮತದಾನಕ್ಕೆ ಎರಡು ದಿನ ಮುಂಚಿತವಾಗಿ ಬಿಎಲ್‌ಒಗಳು ಆಯಾ ಮತಗಟ್ಟೆಗಳಲ್ಲಿ ಲಭ್ಯವಿದ್ದು, ಅಲ್ಲಿಂದ ಮತದಾರರು ತಮ್ಮ ಮತಪತ್ರಗಳನ್ನು ಪಡೆಯಬಹುದು. ಇಲ್ಲವಾದಲ್ಲಿ ಮತದಾನದ ದಿನದಂದು ಮತಗಟ್ಟೆಗಳಲ್ಲಿಯೂ ಮತಪತ್ರಗಳು ಲಭ್ಯವಾಗಲಿದೆ. ಬಿಎಲ್‌ಒಗಳು ನೀಡುವ ಮತಪತ್ರಗಳು ಅಧಿಕೃತ ಮತದಾರರ ನೋಂದಣಿ ನಕಲು ಆಗಿರುತ್ತವೆ. ಮತದಾನದ ದಿನದಂದು ಮತ ದಾರರು ಮತದಾರರ ಚೀಟಿಯೊಂದಿಗೆ ಈ ಪತ್ರ ವನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ ವಿರುತ್ತದೆ. ಆದರೆ ವಿವಿಧ ಪಕ್ಷಗಳಿಂದ ನೀಡಲಾಗುವ ಮತಪತ್ರಗಳು ಮಾನ್ಯತೆ ಹೊಂದಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.