Fraud Case ಹಣ ದ್ವಿಗುಣ ಮೆಸೇಜ್: 7.76 ಲಕ್ಷ ರೂ.ವಂಚನೆ
Team Udayavani, Jan 10, 2025, 11:43 PM IST
ಮಂಗಳೂರು: ಸ್ಟಾಕ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದ್ವಿಗುಣ ಮಾಡಿಕೊಡುವುದಾಗಿ ವಾಟ್ಸ್ ಆ್ಯಪ್‌ನಲ್ಲಿ ಬಂದ ಮೆಸೇಜನ್ನು ನಂಬಿ ವ್ಯಕ್ತಿಯೊಬ್ಬರು 7.76 ಲಕ್ಷ ರೂ. ಹಣವನ್ನು ಕಳೆದುಕೊಂಡಿರುವ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ವಾಟ್ಸ್ ಆ್ಯಪ್‌ನಲ್ಲಿ ಐಯಾಮ್ ರಾಹುಲ್ ಎಂಬ ವ್ಯಕ್ತಿ ಲಿಂಕ್ ಕಳುಹಿಸಿದ್ದು, ಆ ಲಿಂಕ್ ಕ್ಲಿಕ್ ಮಾಡಿ ಆತನ ಗ್ರೂಪ್‌ಗೆ ಜಾಯಿನ್ ಆಗಿದ್ದಾರೆ. ಬಳಿಕ ಆ ಗ್ರೂಪ್‌ನ ಅಡ್ಮಿನ್‌ಗಳಲ್ಲಿ ಒಬ್ಟಾತ ಇನ್ನೊಂದು ಲಿಂಕ್ ಕಳುಹಿಸಿದ್ದು, ಆ ಗ್ರೂಪ್‌ಗ್ೂ ಜಾಯಿನ್ ಆಗಿದ್ದಾರೆ. ಸುಮಿತ್ ಸಿಂಗ್ ಗ್ರೂಪ್‌ಗೆ ಸ್ವಾಗತಿಸಿ, ಸ್ಟಾಕ್ ಟಿಪ್ಸ್ ಕಳುಹಿಸಿದ್ದಾನೆ.
ಅದರ ಅಡ್ಮಿನ್‌ಗಳಲ್ಲಿ ಒಬ್ಬಳಾದ ಶಿವಾನಿ ಹಣವನ್ನು ಹೂಡಿಕೆ ಮಾಡಿದರೆ ದ್ವಿಗುಣ ಮಾಡಿಕೊಡುವುದಾಗಿ ಹೇಳಿದ್ದು, ಆಕೆಯ ಮಾತನ್ನು ನಂಬಿ ಹಂತ ಹಂತವಾಗಿ 7,76,265 ರೂ.ವನ್ನು ವರ್ಗಾವಣೆ ಮಾಡಿದ್ದಾರೆ. ಹಣವನ್ನು ದ್ವಿಗುಣ ಮಾಡದೆ, ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೂಡಾ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.