ಮಳಲಿ: ಫೈನಾನ್ಸರ್ ನಿಂದ ಲಕ್ಷಾಂತರ ರೂ. ದರೋಡೆ
ಬೈಕ್ ತಡೆದು ಮಾರಕಾಸ್ತ್ರ ತೋರಿಸಿ ಲೂಟಿ
Team Udayavani, Jul 15, 2019, 9:50 AM IST
ಮಂಗಳೂರು: ಮಾರಕಾಯುಧಗಳನ್ನು ಹಿಡಿದುಕೊಂಡು ಜೀವ ಬೆದರಿಕೆ ಹಾಕಿದ ದರೋಡೆಕೋರರು, ಖಾಸಗಿ ಫೈನಾನ್ಸರ್ ಓರ್ವ ರಿಂದ ಲಕ್ಷಾಂತರ ರೂ. ದೋಚಿ ಪರಾರಿಯಾದ ಘಟನೆ ಬಜಪೆ ಸಮೀಪದ ಮಳಲಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
ಮಳಲಿ ನಿವಾಸಿ, ಫೈನಾನ್ಸರ್ ಸೆಂಥಿಲ್ ಕುಮಾರ್ ದರೋಡೆಗೊಳಗಾದ ವ್ಯಕ್ತಿ.
ಸೆಂಥಿಲ್ಕು ಮಾರ್ ಸಹಿತ ಕೆಲವರು ಸೇರಿಕೊಂಡು ಬಜಪೆ ವ್ಯಾಪ್ತಿಯಲ್ಲಿ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸೆಂಥಿಲ್ ಕುಮಾರ್ ಅವರು ಪ್ರತಿ ರವಿವಾರ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ಅದರಂತೆ ರವಿವಾರ ಮಧ್ಯಾಹ್ನ 2.30ಕ್ಕೆ ಹಣ ಸಂಗ್ರಹಿಸಿ ಮಳಲಿ ಸಮೀಪದ ಕಾಲನಿಯೊಂದರ ಸಮೀಪದಲ್ಲಿ ತೆರಳುತ್ತಿದ್ದರು.
ಆಗ ಎರಡು ಬೈಕುಗಳಲ್ಲಿ ಬಂದ ನಾಲ್ವರು ತಂಡ ಅವರನ್ನು ಹಿಂಬಾಲಿಸಿದೆ. ಕೆಲಹೊತ್ತಿನ ಈ ತಂಡ ಸೆಂಥಿಲ್ಕುಮಾರರಿಂದ ಮುಂದೆ ತೆರಳಿ, ಮತ್ತೆ ವಿರುದ್ಧ ದಿಕ್ಕಿನಲ್ಲಿ ವಾಪಸಾಯಿತು. ಅದರಲ್ಲಿದ್ದವರು ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿ, 2 ಲ.ರೂ. ನಗದು ಇದ್ದ ಪೆಟ್ಟಿಗೆಯನ್ನು ಒಡೆದಿದ್ದಾರೆ. ಜತೆಗೆ ಅವರ ಜೇಬಲ್ಲಿದ್ದ 5 ಸಾವಿರ ರೂ. ಸಹಿತ ಒಟ್ಟು 2.05 ಲಕ್ಷ ರೂ.ನ್ನು ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.