ಮುಂಗಾರು ವಿಳಂಬ: ರೈತರಿಂದ ಭತ್ತ ನೇರ ಬಿತ್ತನೆ


Team Udayavani, Jul 14, 2019, 5:13 AM IST

1307MALALI1

ಗುರುಪುರ: ಈ ಬಾರಿ ಮುಂಗಾರು ಮಳೆ ವಿಳಂಬಗೊಂಡ ಕಾರಣ ರೈತರು ನೇಜಿ ನೆಡುವ ಬದಲು ನೇರ ಬಿತ್ತನೆಯಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಜೂನ್‌ ತಿಂಗಳ ಆರಂಭದಲ್ಲಿ ನೇಜಿ ನೆಟ್ಟು ನಾಟಿ ಮಾಡಲಾಗಿತ್ತು. ಆದರೆ ಈ ಬಾರಿ ಮಳೆಯಾಗದ ಕಾರಣ ಗದ್ದೆಗಳಲ್ಲಿ ನೀರು ನಿಲ್ಲದಿರುವುದರಿಂದ ನೇಜಿ ಹಾಕುವ ಬದಲು ಗದ್ದೆಗಳನ್ನು ಉಳುಮೆ ಮಾಡಿ ನೇರ ಬಿತ್ತನೆಯಲ್ಲಿ ತೊಡಗಿದ್ದಾರೆ.


ಈ ಹಿನ್ನೆಲೆಯಲ್ಲಿ ಈ ವರ್ಷ ಕೊಯ್ಲು ಕಾರ್ಯ ಒಂದು ತಿಂಗಳು ತಡವಾಗಲಿದ್ದು, ಸುಗ್ಗಿ ಮಾಡುವ ರೈತರಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ಜೂನ್‌ ತಿಂಗಳ ಮೊದಲ ವಾರದಲ್ಲಿ ಮಳೆಯಾದರೆ ಡಾಪೋಗ್‌ ವಿಧಾನದ ಮೂಲಕ ಅಥವಾ ಗದ್ದೆಯಲ್ಲೇ ಮಡಿಗಳನ್ನು ತಯಾರಿಸಿ ಭತ್ತದ ಸಸಿಗಳನ್ನು ಬೆಳೆಸಿ ಬಳಿಕ ಗದ್ದೆಯನ್ನು ಉಳುಮೆಗೈದು ನಾಟಿ ಹಾಕಲಾಗುತ್ತಿತ್ತು. ಆದರೆ ನೀರಿನ ಸಮಸ್ಯೆಯ ಕಾರಣ ಈ ಬಾರಿ ನೇರ ಬಿತ್ತನೆ ಮಾಡಲಾಗಿದೆ. ಆದರೂ ಕೆಲವು ರೈತರು ಡಾಪೋಗ್‌ ವಿಧಾನದ ಮೂಲಕ ಅಂಗಳದಲ್ಲಿಯೇ ಸಸಿಮಡಿಗಳನ್ನು ತಯಾರಿಸಿ ನಾಟಿ ಕಾರ್ಯ ಮುಗಿಸಿದ್ದಾರೆ.

ಮಳೆ ತಡವಾಗಿ ಆರಂಭವಾದರೆ ಗ್ರಾಮೀಣ ರೈತರು ನೇರ ಬಿತ್ತನೆ ಮಾಡುತ್ತಾರೆ. ಆದರೆ ಈ ರೀತಿ ಮಾಡಿದರೆ ನೆರೆ ಹಾವಳಿ ಉಂಟಾದರೆ ಬಿತ್ತನೆ ಬೀಜ ನೀರಲ್ಲಿ ಕೊಚ್ಚಿ ಕೊಂಡು ಹೋಗುವ ಸಾಧ್ಯತೆ ಇದೆ. ಸಸಿಗಳು ಹುಳಗಳಿಗೆ ಆಹಾರವಾಗುವ ಸಾಧ್ಯತೆಯೂ ಇದೆ. ನೀರಿನ ಮಟ್ಟ ಹೆಚ್ಚು-ಕಮ್ಮಿಯಾದರೆ ಸಮಸ್ಯೆಯಾಗುತ್ತದೆ. ಅಲ್ಲದೆ ಸಸಿಗಳು ಆರೋಗ್ಯ  ಪೂರ್ಣವಾಗಿರದೆ ಬೆಳೆಯೂ ಸಾಕಷ್ಟು ಸಿಗುವುದಿಲ್ಲ. ಆದರೆ ನೀರಿನ ಪ್ರಮಾಣ ಸಮಪ್ರಮಾಣದಲ್ಲಿ ದೊರಕಿ ಸಾಕಷ್ಟು ಗೊಬ್ಬರ ಹಾಕಿದರೆ ಇದರಿಂದಲೂ ಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ. ಆದರೆ ಸಮಸ್ಯೆ ಹೆಚ್ಚಾಗಿರುವುದರಿಂದ ಈ ವಿಧಾನ ವನ್ನು ರೈತರು ಅನುಸರಿಸುವುದಿಲ್ಲ. ಆದರೆ ಈ ಬಾರಿ ಮಳೆ ವಿಳಂಬದಿಂದಾಗಿ ಅನಿವಾರ್ಯವಾಗಿ ಈ ವಿಧಾನ ಅನುಸರಿಸಬೇಕಾಗುತ್ತದೆ.

ಮಳೆ ವಿಳಂಬದಿಂದಾಗಿ ಬಿತ್ತನೆ
ಈ ಬಾರಿ ಮಳೆ ಒಂದು ತಿಂಗಳು ವಿಳಂಬಗೊಂಡಿದ್ದು, ಆರಂಭದಲ್ಲಿ ನೀರಿನ ಕೊರತೆಯಿಂದಾಗಿ ನೇಜಿ ಹಾಕುವ ಬದಲು ನೇರವಾಗಿ ಗದ್ದೆಗಳನ್ನು ಉಳುಮೆ ಮಾಡಿ ಬಿತ್ತನೆ ಮಾಡಲಾಗಿದೆ. ಕಳೆದ ಬಾರಿ ಆರಂಭದಲ್ಲಿಯೇ ಮಳೆ ಸಾಕಷ್ಟಿದ್ದುರಿಂದ ಸಸಿಮಡಿಗಳನ್ನು ತಯಾರಿಸಿ ನೇಜಿ ನೆಡಲಾಗಿತ್ತು.
 - ಈಶ್ವರ ಬಂಗೇರ ಮಳಲಿ ರೈತ

ಹಲವು ಗದ್ದೆಗಳು ಹಡೀಲು
ಮಳೆ ವಿಳಂಬ ಗೊಂಡಿರುವುದರಿಂದ ಅನೇಕ ಬೈಲು ಗದ್ದೆಗಳನ್ನು ಹಡೀಲು ಬಿಡಲಾಗಿದೆ. ಮಳಲಿ, ಗುರುಪುರ, ಕಂದಾವರ, ಕುಪ್ಪೆಪದವು ಪ್ರದೇಶದಲ್ಲಿ ಗದ್ದೆಗಳನ್ನು ಹಡೀಲು ಬಿಡಲಾಗಿದೆ. ಇದರಿಂದ ಮುಂದಿನ ವರ್ಷ ಕುಚಲಕ್ಕಿಗಳಿಗೆ ದರ ಏರುವ ಸಾಧ್ಯತೆಯೂ ಇದೆ. ಈ ಬಾರಿ ಎಣೆಲ್‌(ಮೊದಲ ಬೆಳೆ) ತಡವಾಗಿರುವುದರಿಂದ ಸುಗ್ಗಿ(ಎರಡನೇ ಬೆಳೆ) ಮಾಡಲು ಸಾಧ್ಯವಾಗುವುದು ಅನುಮಾನವಾಗಿದೆ. ಪಟ್ಲ ಭಾಗಗಳಲ್ಲಿ ಕೊಳಕೆ(ಮೂರನೇ ಬೆಳೆ) ಮಾಡಲಾಗುತ್ತಿದೆ.

ಟಾಪ್ ನ್ಯೂಸ್

10-mambadi

ಮಾಂಬಾಡಿ ಸುಬ್ರಹ್ಮಣ್ಯ ಭಟ್ ಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

10-mambadi

ಮಾಂಬಾಡಿ ಸುಬ್ರಹ್ಮಣ್ಯ ಭಟ್ ಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆ

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.