ಮುಂಗಾರು ಮುಂಜಾಗ್ರತೆ: ಮುಂದುವರಿದಿದೆ ಕಾರ್ಯಾಚರಣೆ
Team Udayavani, Jun 8, 2018, 2:00 AM IST
ಮಹಾನಗರ: ಮುಂಗಾರು ಪೂರ್ವದಲ್ಲಿ ಸುರಿದ ಮಹಾಮಳೆಗೆ ನಲುಗಿದ ನಗರದಲ್ಲಿ ಇದೀಗ ಮುಂಗಾರು ಮುಂದಡಿ ಇಟ್ಟಿದೆ. ನಗರದ ವಿವಿಧೆಡೆಗಳಲ್ಲಿ 10 ದಿನಗಳಿಂದ ನಡೆಯುತ್ತಿರುವ ರಾಜಕಾಲುವೆ, ತೋಡುಗಳನ್ನು ಸ್ವಚ್ಛಗೊಳಿಸುವ ಕಾರ್ಯಾಚರಣೆ ಗುರುವಾರ ಮಳೆಯ ನಡುವೆಯೂ ಮುಂದುವರಿದಿದೆ. ಜಪ್ಪಿನಮೊಗರು, ಕೊಟ್ಟಾರ, ಕುದ್ರೋಳಿ ಸೇರಿದಂತೆ ವಿವಿಧೆಡೆಗಳಲ್ಲಿ ರಾಜಕಾಲುವೆಗಳ ನೀರು ಹರಿದು ಹೋಗಲು ಇರುವ ಅಡಚಣೆಗಳನ್ನು ನಿವಾರಿಸುವ ಕಾರ್ಯ ನಡೆಸಲಾಗಿದೆ.
ರಾಜಕಾಲುವೆಗಳಲ್ಲಿ ಅಡೆತಡೆಗಳನ್ನು ನಿವಾರಣೆ ಕಾರ್ಯಾಚರಣೆ ಜತೆಗೆ ವಾರ್ಡ್ ಮಟ್ಟದಲ್ಲಿ ಆರೋಗ್ಯ ವಿಭಾಗ ಹಾಗೂ ಸಿವಿಲ್ ಗ್ಯಾಂಗ್ ಗಳು ಸಣ್ಣ ತೋಡುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೂಡ ಪಾಲಿಕೆ ವತಿಯಿಂದ ನಡೆಯುತ್ತಿವೆ. ರಾಜಕಾಲುವೆಗಳು ಹಾಗೂ ತೋಡುಗಳ ಹೂಳೆತ್ತುವ ಹಾಗೂ ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಸಿ ಮಳೆ ನೀರ ಸರಾಗವಾಗಿ ಹರಿದುಹೋಗುವಂತೆ ಮಾಡುವ ಕಾರ್ಯಾಚರಣೆ ಸಾಗುತ್ತಿದ್ದರೆ ಇನ್ನೊಂದೆ ಡೆ ಮೇ 29ರಂದು ಉಂಟಾಗಿದ್ದ ಪರಿಸ್ಥಿತಿ ಮತ್ತೆ ಮರುಕಳಿಸಬಹುದೇ ಎಂಬ ಆತಂಕ ಕೃತಕ ನೆರೆಗೆ ಒಳಗಾಗಿದ್ದ ಪ್ರದೇಶಗಳ ಜನರನ್ನು ಕಾಡುತ್ತಿದೆ.
ಇತ್ತೀಚೆಗೆ ಜಪ್ಪಿನಮೊಗರು, ಪಂಪ್‌ವೆಲ್, ಕೊಟ್ಟಾರಚೌಕಿ, ಕೋಡಿಕಲ್, ಮಾಲೆಮಾರ್, ಉಜ್ಜೋಡಿ, ಜೆಪ್ಪು ಮಹಾಕಾಳಿ ಪಡ್ಪು, ಪಡೀಲ್, ಅಳಕೆ, ಹೊಯಿಗೆ ಬಜಾರ್, ಪಚ್ಚನಾಡಿ, ಹೊಸಬೆಟ್ಟು, ಕುಳೂರು, ಜ್ಯೋತಿ ವೃತ್ತ, ಪಡೀಲು ಮುಂತಾದ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡು ಗಣನೀಯ ಪ್ರಮಾಣದಲ್ಲಿ ಹಾನಿಯಾಗಿತ್ತು.
ಮುಂದುವರಿದ ಕಾರ್ಯಾಚರಣೆ
ನಗರದ ರಾಜಕಾಲುವೆಗಳು ಹಾಗೂ ತೋಡುಗಳಲ್ಲಿ ಇರುವ ಅಡಚಣೆಗಳನ್ನು ಬಹುತೇಕ ಕಡೆಗಳಲ್ಲಿ ನಿವಾರಿಸಲಾಗಿದ್ದು , ಉಳಿದೆಡೆಯ ಕಾರ್ಯಾಚರಣೆ ಮುಂದುವರಿದಿದೆ. ವಾರ್ಡ್ ಮಟ್ಟದಲ್ಲೂ ಹೆಲ್ತ್ ಮತ್ತು ಸಿವಿಲ್ ವಿಭಾಗದ ಗ್ಯಾಂಗ್ ಗಳು ತೋಡು, ಚರಂಡಿಗಳನ್ನು ಸ್ವತ್ಛಗೊಳಿಸುವ ಕಾರ್ಯ ನಡೆಸುತ್ತಿವೆ. ಮಳೆ ಬಂದರೂ ಕಾರ್ಯಾಚರಣೆ ನಡೆಯಲಿದೆ.
– ಮಹಮ್ಮದ್ ನಜೀರ್, ಮನಪಾ ಆಯುಕ್ತರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.