ಕರಾವಳಿಗೆ ಕಾಲಿಟ್ಟ ಮುಂಗಾರು ಮಳೆ
Team Udayavani, Jun 3, 2017, 3:00 PM IST
ಮಂಗಳೂರು/ಉಡುಪಿ: ಕರಾವಳಿಗೆ ಶುಕ್ರವಾರ ಮುಂಗಾರು ಆಗಮನವಾಗಿದೆ. ಆ ಮೂಲಕ ಅಧಿಕೃತವಾಗಿ ಮಳೆಗಾಲ ಆರಂಭವಾಗಿದೆ. ದ.ಕ. ಜಿಲ್ಲೆಯ ವಿವಿಧೆಡೆ ಬೆಳಗ್ಗೆಯಿಂದಲೇ ನಿರಂತರ ಮಳೆ ಸುರಿದಿದ್ದು, ಇಳೆ ತಂಪಾಗಿದೆ.
ಮಂಗಳೂರು, ಉಡುಪಿಯಲ್ಲಿ ಕಳೆದೆರಡು ದಿನಗಳಿಂದ ಮಳೆ ಬಂದರೂ ಶುಕ್ರವಾರ ದಿನವಿಡೀ ನಿರಂತರ ಸುರಿದಿದೆ. ಬಿಡದೇ ಸುರಿದ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು. ರೈನ್‌ಕೋಟ್, ಕೊಡೆ ತಾರದೇ ನಗರಕ್ಕಾಗಮಿಸಿದವರು ಮಳೆಯಲ್ಲಿ ನೆನೆದುಕೊಂಡೇ ತೆರಳಬೇಕಾಯಿತು. ನಗರದ ಅಲ್ಲಲ್ಲಿ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ತಿಳಿಯದೇ, ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಯಿತು. ನಂತೂರು ಬಳಿ ರಸ್ತೆ ಬದಿ ನೀರು ತುಂಬಿಕೊಂಡ ಹೊಂಡದೊಳಗೆ ರಿಕ್ಷಾವೊಂದು ಹೂತು ಹೋಗಿ ಚಾಲಕ ಪರದಾಡುವಂತಾಯಿತು.
ಅಲ್ಲಲ್ಲಿ ಉತ್ತಮ ವರ್ಷಧಾರೆ
ಕಿನ್ನಿಗೋಳಿ, ಕಟೀಲಿನಲ್ಲಿ ಉತ್ತಮ ವರ್ಷಧಾರೆಯಾಗಿದೆ. ಬೆಳ್ತಂಗಡಿ, ಸುರತ್ಕಲ್ ಪರಿಸರದಲ್ಲಿ ಸಾಧಾರಣ ಮಳೆಯಾದರೆ, ಪುತ್ತೂರು, ಮೂಲ್ಕಿ, ಹಳೆಯಂಗಡಿ, ಮುಕ್ಕದಲ್ಲಿಯೂ ಮಳೆ ಬಂದಿದೆ. ಬೆಳ್ತಂಗಡಿ, ಸುಳ್ಯ, ಮೂಡಬಿದಿರೆಯಲ್ಲಿ ಸಣ್ಣ ಪ್ರಮಾಣದ ಮಳೆ ಬಂದಿದೆ. ಬಂಟ್ವಾಳದಲ್ಲಿ ಆಗಾಗ ಗಾಳಿ ಸಹಿತ ಸಾಧಾರಣ ಮಳೆ ಸುರಿದಿದೆ. ಮಣಿಪಾಲ, ಶಿರ್ವ, ಕಾರ್ಕಳ, ಬೆಳ್ಮಣ್ಣು, ಕಾಪು, ಪಡುಬಿದ್ರಿ, ಬ್ರಹ್ಮಾವರ, ಹೆಬ್ರಿ ಪರಿಸರದಲ್ಲಿ ಮಳೆಯಾಗಿದೆ. ಕಾಸರಗೋಡಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ.
ಭಾರೀ ಮಳೆ: ಸಂಚಾರ ಅಸ್ತವ್ಯಸ್ತ
ಮಂಗಳೂರಿನಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆ ಯಾಗಿದ್ದು, ರಸ್ತೆಯಲ್ಲಿ ನೀರು ಶೇಖರಣೆಗೊಂಡು ಸಂಚಾರ ವ್ಯವಸ್ಥೆ ಬಾಧಿತವಾಯಿತು. ರಾತ್ರಿ ವೇಳೆಗೆ ಮಳೆ ಬಿರುಸುಗೊಂಡಿದ್ದು, ಭಾರೀ ಗಾಳಿ ಮಳೆ ಸುರಿದಿದೆ. ಕಳೆದ ಕೆಲವು ದಿನಗಳಿಂದ ಲಘು ಮಳೆಯಾಗುತ್ತಿದ್ದರೂ ಮುಂಗಾರಿನ ಆರಂಭದ ದಿನವೇ ಅಬ್ಬರದ ಮಳೆಯಾಗಿದ್ದರಿಂದ ಇದಕ್ಕೆ ಸಿದ್ಧಗೊಂಡು ಬಂದಿರದ ಜನರು ಸಮಸ್ಯೆಗೆ ಸಿಲುಕಿದರು. ರಾತ್ರಿ ಸುರಿದ ಮಳೆಯಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.
ಕೃಷಿಗೆ ಪೂರಕ: ಈ ಬಾರಿ ಮುಂಗಾರು ಮಳೆ ನಿಗದಿತ ಸಮಯದಲ್ಲಿಯೇ ಆರಂಭಗೊಂಡಿರುವುದರಿಂದ ಕೃಷಿಕರು ಸಂತಸಗೊಂಡಿದ್ದಾರೆ. ಹಲವಾರು ವರ್ಷಗಳಲ್ಲಿ ಮುಂಗಾರು ವಿಳಂಬವಾಗಿದ್ದರಿಂದ ಕೃಷಿಗೆ ಹಿನ್ನಡೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.