ಸಂಪ್ರದಾಯಗಳ ಹೂರಣ ಕರಾವಳಿಯ ‘ಮೊಂತಿ ಹಬ್ಬ’
Team Udayavani, Sep 8, 2017, 3:45 PM IST
ಕ್ರೈಸ್ತ ಬಾಂಧವರು ಆಚರಿಸುವ ಹಲವು ಹಬ್ಬಗಳಲ್ಲಿ ಹೊಸ ಪೈರಿನ ಹಬ್ಬ ಗಮನಾರ್ಹವಾದದ್ದು. ಸೆಪ್ಟಂಬರ್ 8ರಂದು ಪ್ರಪಂಚದಾದ್ಯಂತ ಹಾಗೂ ಕರಾವಳಿಯ ಕೊಂಕಣಿ ಕ್ರೈಸ್ತರು ಈ ಹಬ್ಬವನ್ನು ‘ಮೊಂತಿ ಮಾತೆಯ ಹಬ್ಬ’ವೆಂದು ಆಚರಿಸುತ್ತ ಮಾತೆಯ ವಿಶೇಷ ಆಶೀರ್ವಾದವನ್ನು ಬೇಡಿಕೊಳ್ಳುತ್ತಾರೆ.
ಶಿಶು ಮೇರಿ ಮಾತೆಯನ್ನು ‘ಮೋಂತಿ ಮಾತೆ’ ಎಂದು ಕರಾವಳಿಯ ಕ್ರೈಸ್ತರು ಕರೆಯುತ್ತಾರೆ. ಹಬ್ಬಕ್ಕೆ ಸಿದ್ಧತೆಯಾಗಿ 9 ದಿನಗಳ ವಿಶೇಷವಾದ ಬಲಿಪೂಜೆಗಳೊಂದಿಗೆ ಪ್ರಾರ್ಥನೆಗಳಿವೆ. ದೇವಪುತ್ರ ಯೇಸುವಿನ ತಾಯಿಯಾದ ಮರಿಯಮ್ಮ ಪಾಪರಹಿತವಾಗಿ ಜನ್ಮವಿತ್ತರು. ಆದ್ದರಿಂದ ಈ ಪಾವನ ಶಿಶುವನ್ನು ಗೌರವಿಸುವುದು ಹಬ್ಬದ ಉದ್ದೇಶಗಳಲ್ಲಿ ಮುಖ್ಯವಾದದ್ದು.
ಲೂಕ 1:26 ಮರಿಯಳು ನಜಕೇತಿನ ಕನ್ನಿಕೆಯೆಂದು ತಿಳಿಸುತ್ತದೆ. ಆದರೆ ಈ ಕಥಾ ಪುಸ್ತಕಗಳ ಪ್ರಕಾರ ಮರಿಯಳ ಸ್ವಂತ ಊರು ಜೆರುಸಲೇಂ. ಇದಕ್ಕೆ ಆಧಾರವೆಂಬಂತೆ ಜೆರುಸಲೇಂನಲ್ಲಿ ಸಂತ ಅನ್ನಾಳಿಗೆ ಸಮರ್ಪಿತ ದೇವಾಲಯವು ನಿಂತಿದೆ. ಕ್ರಿ.ಶ. 300ರಲ್ಲಿ ಕಟ್ಟಿದ ಒಂದು ಸಣ್ಣ ಪ್ರಾರ್ಥನಾ ಮಂದಿರವನ್ನು ಕೆಡವಿ ಈ ದೊಡ್ಡ ದೇವಾಲಯ (ಬಾಸಿಲಿಕಾ)ವನ್ನು 6ನೇ ಶತಮಾನದಲ್ಲಿ ಕಟ್ಟಲಾಯಿತು.
ಸೆಪ್ಟಂಬರ್ 8ರಂದು ಕೊಂಕಣಿ ಕ್ರೈಸ್ತರ ಮನೆಗಳಲ್ಲಿ ಸಂತೋಷ ಸಂಭ್ರಮ ಎದ್ದು ಕಾಣುತ್ತದೆ. ಮನೆಯಿಂದ ದೂರವಿರುವ ಕುಟುಂಬದ ಸದಸ್ಯರೆಲ್ಲ ಹಿಂದಿನ ದಿನವೇ ಬಂದಿರುತ್ತಾರೆ. ಸಣ್ಣ ಮಕ್ಕಳಿಗಂತೂ ಅಂದು ಎಲ್ಲಿಲ್ಲದ ಸಂಭ್ರಮ. ಮಕ್ಕಳೆಲ್ಲ ಬೆಳಗ್ಗೆ ಬೇಗನೆ ಎದ್ದು ಮನೆಯಂಗಳದ ಹಾಗೂ ಆಸುಪಾಸಿನ ಬಯಲಿನಿಂದ, ತೋಟಗಳಿಂದ ವಿವಿಧ ಹೂಗಳನ್ನು ಆಯ್ದು ತಂದು ತಟ್ಟೆಯಲ್ಲಿ ಸುಂದರವಾಗಿ ಜೋಡಿಸುತ್ತಾರೆ. ಅನಂತರ ಕಿರಿಯರು, ಹಿರಿಯರು ಹೊಸ ಬಟ್ಟೆಗಳನ್ನು ಧರಿಸಿ ಚರ್ಚಿಗೆ ಹೊರಡುತ್ತಾರೆ.. ಮಕ್ಕಳು, ಶಿಶು ಮೇರಿಯ ಪ್ರತಿಮೆಯ ಸುತ್ತ ನೆರೆದು ಹಾಡು ಹಾಡುತ್ತಾ ತಾವು ತಂದ ಹೂಗಳನ್ನು ಅರ್ಪಿಸುವುದು ಒಂದು ಮನಮೋಹಕ ನೋಟವಾಗಿದೆ.
ಸಕ್ಕಡ್ ಸಾಂಗಾಂತಾ ಮೆಳ್ಯಾಮ್,
ಸಕ್ಕಡ್ ಲಾಗಿಂ ಸರ್ಯಾಂ
ಆಮೆc ತಾಳೆ ಏಕ್ ಕರ್ಯಾಂ,
ಮರ್ಯೆಕ್ ಹೋಗಳಿÕಯಾಂ
ಈ ಕವಿತೆಯ ಅರ್ಥ ಹೀಗಿದೆ- ‘ನಾವೆಲ್ಲ ಒಟ್ಟು ಸೇರೋಣ, ಎಲ್ಲರೂ ಹತ್ತಿರ ಬರೋಣ, ನಮ್ಮೆಲ್ಲರ ಸ್ವರಗಳನ್ನು ಒಂದಾಗಿಸಿ ಶಿಶು ಮೇರಿಯನ್ನು ಹೊಗಳ್ಳೋಣ’.
ಪೂಜೆಯ ವೇಳೆಯಲ್ಲಿ ಗುರುಗಳು ಹೊಸ ಬತ್ತದ ತೆನೆಗಳನ್ನು ಆಶೀರ್ವದಿಸಿ ಅನಂತರ ಜನರಿಗೆ ಹಂಚುತ್ತಾರೆ. ತಾವು ಬೆಳೆದ ತರಕಾರಿಗಳನ್ನು ತಂದು ದೇವಾಲಯಕ್ಕೆ ಕಾಣಿಕೆಯಾಗಿ ಅರ್ಪಿಸುವ ಸಂಪ್ರದಾಯವೂ ಇದೆ. ಪೂಜೆಯ ಅನಂತರ ಮಕ್ಕಳಿಗೆಲ್ಲ ಸಿಹಿತಿಂಡಿಯ ಜೊತೆಗೆ ಕಬ್ಬನ್ನೂ ಹಂಚುತ್ತಾರೆ.
ಅಂದು ಮಧ್ಯಾಹ್ನ ಮನೆಯಲ್ಲಿ ಹಲವು ಬಗೆಯ ತರಕಾರಿಗಳ ಪಲ್ಯಗಳನ್ನು ಸಿದ್ಧ ಮಾಡುವುದು ರೂಢಿ. ಸಡಗರದ ಕೂಟ. ಮನೆಯ ಯಜಮಾನ ಪವಿತ್ರೀಕರಿಸಿದ ತೆನೆಯ ಕಾಳುಗಳನ್ನು ಬಿಡಿಸಿ ಪುಡಿ ಮಾಡುತ್ತಾರೆ. ಅನಂತರ ಈ ಪುಡಿಯನ್ನು ಸಿಹಿರಾಸ ಅಥವಾ ತೆಂಗಿನಕಾಯಿ ಹಾಲಿನಲ್ಲಿ ಕಲಕಿ ಪ್ರಾರ್ಥನೆಯೊಂದಿಗೆ ಎಲ್ಲರಿಗೂ ಸ್ವಲ್ಪ ಸ್ವಲ್ಪವಾಗಿ ಕೊಡುವುದು ಮನೆಯ ಯಜಮಾನನ ಕೆಲಸ. ಅಂದು ಮನೆಯಲ್ಲಿ ಮಾಂಸಾಹಾರದ ಊಟವಿಲ್ಲ, ಮದ್ಯಪಾನ ಮಾಡುವಂತಿಲ್ಲ. ಎಲ್ಲಕ್ಕಿಂತ ಮೊದಲು ಹೊಸ ಊಟದ ಸೇವನೆಯಾಗಬೇಕು. ಸಕಾರಣದಿಂದ ಮನೆಗೆ ಬಂದ ತಮ್ಮೊಂದಿಗೆ ಸೇರಲಾಗದ ಸದಸ್ಯರ ನೆನಪನ್ನು ಮಾಡಿ ಅವರಿಗೂ ಪವಿತ್ರೀಕರಿಸಿದ ಕಾಳುಗಳನ್ನು ಅಂಚೆಯಲ್ಲಿ ಕಳುಹಿಸಿಕೊಡುವ ಏರ್ಪಾಡನ್ನು ಮಾಡುತ್ತಾರೆ.
ಇಂತಹ ಪದ್ಧತಿ ಮುಖ್ಯವಾಗಿ ಕರಾವಳಿ ಕ್ರೈಸ್ತರಲ್ಲಿ ಪ್ರಚಲಿತದಲ್ಲಿದೆ. ಈ ಪದ್ಧತಿಯ ಶ್ರೇಷ್ಟತೆಯನ್ನು ಅರಿತ ಒಳನಾಡಿನ ಕ್ರೈಸ್ತರು ಇತ್ತೀಚೆಗೆ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ಹಬ್ಬದ ದಿನಗಳು ವಿವಿಧ ಪಂಗಡಗಳ ಜನರಲ್ಲಿ ಬೇರೆ ಬೇರೆಯಾಗಿರುತ್ತದೆ. ರೈತ ಮನೆತನದವರಾದ ಕರಾವಳಿ ಕ್ರೈಸ್ತರಿಗೆ ಈ ಹಬ್ಬ ದೇವರು ಒಳ್ಳೆಯ ಮಳೆ ಬೆಳೆಯನ್ನು ದಯಪಾಲಿಸಿ ತಮ್ಮ ಕೃಷಿ ಕಾರ್ಯವನ್ನು ಆಶೀರ್ವದಿಸಿಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಲೂ ಸದವಕಾಶವಾಗಿದೆ.
ಈ ಹಬ್ಬಕ್ಕೆ ಸಂಬಂಧಿಸಿದಂತೆ ಕತೆಗಳೇನೇ ಇರಲಿ. ಮೋಂತಿ ಮಾತೆಯ ಭಕ್ತಿ ಕ್ರೈಸ್ತರಲ್ಲಿ ಬೇರೂರಿದೆ. ಕೌಟುಂಬಿಕ ಸ್ನೇಹ ಸೌಹಾರ್ದವನ್ನು ನವೀಕರಿಸಲು ಈ ಭಕ್ತಿ ಚೇತನವೀಯುತ್ತದೆ. ವರ್ಷವಿಡೀ ಒಂದಿಷ್ಟು ಕೂಲಿಗಾಗಿ ಕೃಷಿ ಕಾರ್ಯಗೈಯ್ಯುವವರ ಮನಸ್ಸಿಗೆ ಆನಂದವನ್ನೀಯುತ್ತದೆ. ಕುಟುಂಬ ಜೀವನ ಕುಸಿಯುತ್ತಿರುವ ಈ ಕಾಲದಲ್ಲಿ ಮೋಂತಿ ಮಾತೆಯ ಹಾಗೂ ಹೊಸ ಪೈರಿನ ಹಬ್ಬ ಮಹತ್ವಪೂರ್ಣವೆನಿಸುತ್ತದೆ.
– ದೋನಾತ್ ಡಿ’ಆಲ್ಮೇಡಾ ತೊಟ್ಟಂ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.