ರಾಜಕಾರಣಿಗಳಿಂದ ಅಖಂಡ ಕರ್ನಾಟಕದ ಭವ್ಯತೆ ಮಂಕಾಗದು: ವೈ.ಎಸ್‌.ವಿ. ದತ್ತ


Team Udayavani, Nov 18, 2018, 10:40 AM IST

18-november-2.gif

ವಿದ್ಯಾಗಿರಿ (ಮೂಡಬಿದಿರೆ): ಅಖಂಡ ಕರ್ನಾಟಕದ ಸಾಮರಸ್ಯ ಹಾಗೂ ಸುದೀರ್ಘ‌ ಕಾಲದ ಕನ್ನಡದ ಅಸ್ಮಿತೆಯನ್ನು ಅಳಿಸಲು ಅಥವಾ ಮುರಿದು ಹಾಕಲು ಐದು ವರ್ಷಕ್ಕೆ ಬಂದು ಹೋಗುವ ರಾಜಕಾರಣಿಯಿಂದ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ವೈ.ಎಸ್‌.
ವಿ. ದತ್ತ ಹೇಳಿದ್ದಾರೆ. ಆಳ್ವಾಸ್‌ ನುಡಿಸಿರಿಯ ಎರಡನೇ ದಿನವಾದ ಶನಿವಾರ ‘ಅಖಂಡ ಕರ್ನಾಟಕ’ ವಿಚಾರದಲ್ಲಿ ಅವರು ವಿಶೇಷೋಪನ್ಯಾಸ ನೀಡಿದರು.

ಅಖಂಡ ಕರ್ನಾಟಕದ ಭವ್ಯತೆ ಯಾವುದೇ ಕಾರಣಕ್ಕೂ ಮುಕ್ಕಾಗದು. ಆದರೂ ಕೆಲವು ಭಾಗಗಳಿಗೆ ಆಗಿರುವ ತಾರತಮ್ಯದಿಂದ ಜನರಲ್ಲಿ ಅಸಮಾಧಾನ ಇದೆ ಎಂಬುದನ್ನು ಎಚ್ಚರದಿಂದ ಪರಿಗಣಿಸಬೇಕಿದೆ ಎಂದರು. ಕರ್ನಾಟಕಕ್ಕೆ ಏಕೀಕರಣ ಭಾಗ್ಯ ದೊರೆತರೂ ಪ್ರಾದೇಶಿಕ ಅಸಮಾನತೆ ತೊಡೆಯಲು ಸಾಧ್ಯವಾಗಿಲ್ಲ. ದಕ್ಷಿಣ ಕರ್ನಾಟಕದ ಒಂದು ಹೋಬಳಿಯ ಭೌಗೋಳಿಕ ವಿಸ್ತಾರ ಹಾಗೂ ಜನಸಂಖ್ಯೆಯ ಆಧಾರದಲ್ಲಿ ಉತ್ತರ ಕರ್ನಾಟಕದ ಒಂದು ಹೋಬಳಿಯನ್ನು ಪರಿಗಣಿಸಿದಾಗ ಅಜಗಜಾಂತರವಿದೆ.

ದ.ಕರ್ನಾಟಕದ ಒಂದು ಹೋಬಳಿ ಉತ್ತರ ಕರ್ನಾಟಕದ ಮೂರು ಹೋಬಳಿಗಳ ವಿಸ್ತಾರ ಪಡೆದಿರುತ್ತದೆ. ಸರಕಾರ ಮಾತ್ರ ಇದಾವುದನ್ನೂ ಪರಿಗಣಿಸದೆ ಒಂದೊಂದು ಹೋಬಳಿಗೆ ಸಾವಿರ ಕೋಟಿ ರೂ. ಎಂದು ಪ್ರಕಟಿಸುತ್ತದೆ. ಇದು ಸರಿಯಲ್ಲ, ಅನುದಾನ ಹಂಚಿಕೆ ವ್ಯತ್ಯಾಸ ಸರಿಪಡಿಸಲು ಆಯೋಗವೊಂದನ್ನು ಜಾರಿಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಏಕೀಕರಣ ಸಂದರ್ಭ ಕೆಂಗಲ್‌ ಹನುಮಂತಯ್ಯ ‘ಬಂಡೆಯೊಂದನ್ನು ಬೆಟ್ಟದಿಂದ ಉರುಳಿಸಿದ್ದೇನೆ. ಅದರ ವೇಗದಲ್ಲಿ ನಾನೂ ಓಡಬೇಕಿದೆ. ಇಲ್ಲವಾದರೆ ನಾನು ಹಿಂದೆ ಉಳಿಯುವ ಅಪಾಯವಿದೆ’ ಎಂದಿದ್ದರು. ಇಂದಿನ ಪರಿಸ್ಥಿತಿಗೆ ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು. ಸಮ್ಮೇಳನಾಧ್ಯಕ್ಷೆ ಡಾ| ಮಲ್ಲಿಕಾ ಎಸ್‌. ಘಂಟಿ, ಡಾ| ಎಂ. ಮೋಹನ ಆಳ್ವ ಉಪಸ್ಥಿತರಿದ್ದರು

ಸಂಪತ್ತಿಗೆ ಸವಾಲ್‌!
ಉತ್ತರ ಕರ್ನಾಟಕ ಭಾಗದ ಜನರ ರಾಷ್ಟ್ರೀಕೃತ ಬ್ಯಾಂಕ್‌ ಠೇವಣಿ ಹಾಗೂ ನಗದೀಕರಣ ಲೆಕ್ಕಹಾಕಿದಾಗ ರಾಜ್ಯದಲ್ಲಿಯೇ ಮುಂದಿದೆ. ಆದರೆ ಬಡತನದ ಸೂಚ್ಯಂಕದಲ್ಲಿ ಉತ್ತರ ಕರ್ನಾಟಕವನ್ನು ಲೆಕ್ಕಹಾಕಿದಾಗ ಸರಾಸರಿ 21.02 ದರದ ಪೈಕಿ 40ರ ದರ ಪಡೆಯುವ ಮೂಲಕ ಹಿಂದಿದೆ. ಅಂದರೆ ಎಲ್ಲೋ ಒಂದು ಕಡೆ ವ್ಯತ್ಯಾಸ ಆಗಿದೆ ಎಂಬುದು ಸ್ಪಷ್ಟ. ಇದನ್ನು ಆಳವಾಗಿ ಪರಿಶೀಲಿಸಿದಾಗ ಉ.ಕ.ದಲ್ಲಿ ಸಂಪತ್ತಿನ ಸಮಾನ ಹಂಚಿಕೆ ಆಗಿಲ್ಲ ಎಂಬುದು ತಿಳಿಯುತ್ತದೆ. ಇದಕ್ಕೆ ನಿಜವಾಗಿಯೂ ರಾಜಕಾರಣಿಗಳೇ ಹೊಣೆ .
– ವೈ.ಎಸ್‌.ವಿ. ದತ್ತ

ಟಾಪ್ ನ್ಯೂಸ್

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

6

Mangaluru: ಕರಾವಳಿ ಖಗೋಳ ಉತ್ಸವ; ಉಲ್ಕಾ ತುಣುಕು, ನಕ್ಷತ್ರ ವೀಕ್ಷಣೆ ಅವಕಾಶ

5

Bajpe: ಇನ್ಮುಂದೆ ದೀಪಗಳಿಂದ ಬೆಳಗ‌ಲಿದೆ ವಿಮಾನ ನಿಲ್ದಾಣ ರಸ್ತೆ

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

4(2

Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.