ಮೂಡಬಿದಿರೆಯಲ್ಲಿ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ

ಸಾಹಸಮಯ ಕ್ರೀಡೆಗಳ ಆಡುಂಬೊಲ

Team Udayavani, Dec 18, 2022, 5:55 AM IST

ಮೂಡಬಿದಿರೆಯಲ್ಲಿ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ

ಮೂಡುಬಿದಿರೆ : ಇನ್ನು 3 ದಿನದ ಬಳಿಕ ಈ ವಿದ್ಯಾಗಿರಿ ಪರಿಸರಕ್ಕೆ ಬಂದರೆ ನೀವು ಕಾಣುವುದು ಕಸರತ್ತಿನಲ್ಲಿ ತೊಡಗಿರುವ ವಿದ್ಯಾರ್ಥಿಗಳು. ವಿವಿಧ ಸಾಹಸ ಕ್ರೀಡೆಗಳಲ್ಲಿ ತೊಡಗಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸದೃಢ ಗೊಳಿಸಿ ಕೊಳ್ಳುವಲ್ಲಿ ಕಾರ್ಯನಿರತ ರಾಗಿರುತ್ತಾರೆ ಈ ವಿದ್ಯಾರ್ಥಿಗಳು.

ವಿದ್ಯಾಗಿರಿ ಪರಿಸರದಲ್ಲಿ ಡಿ. 21ರಿಂದ 27ರ ವರೆಗೆ ನಡೆಯಲಿರುವ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿಯ ಭಾಗವಾಗಿದೆ ಈ ಸಾಹಸ ಕ್ರೀಡೆಗಳು.

ಸಾಂಸ್ಕೃತಿಕ ಜಾಂಬೂರಿಯಲ್ಲಿ ಒಂದು ಬಗೆಯ ಚಟುವಟಿಕೆಗಳಿಲ್ಲ. ಹಲವು ಬಗೆಯ ಚಟುವಟಿಕೆಗಳಿರಲಿವೆ. ಕೃಷಿ ಮೇಳದಿಂದ ಹಿಡಿದು ಸಾಹಸ ಮೇಳದವರೆಗೂ ಒಂದಲ್ಲ, ಹತ್ತಾರು ಬಗೆ.
ದೇಶವಿದೇಶಗಳಿಂದ ಆಗಮಿಸಲಿರುವ 50,000 ವಿದ್ಯಾರ್ಥಿಗಳು ಐದು ದಿನಗಳ ಪರ್ಯಂತ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವರು. ಪ್ರತೀ ದಿನ 10,000 ವಿದ್ಯಾರ್ಥಿಗಳಿಗೆ ಆಡಲು ಅವಕಾಶ ಕಲ್ಪಿಸಲಾಗಿದೆ.

ಫ‌ನ್‌ ಬೇಸ್‌, ಚಾಲೆಂಜ್‌ ವ್ಯಾಲಿ, ಪ್ರದರ್ಶನ ವಲಯ ಎಂಬ ಮೂರು ವಿಭಾಗಗಳಿವೆ. ಒಟ್ಟು 35 ವಿಧದ ಆಟಗಳು ವಿದ್ಯಾರ್ಥಿಗಳ ಕುತೂಹಲ ಕೆರಳಿಸುತ್ತ, ಅವರಲ್ಲಿ ಧೈರ್ಯ, ಸ್ಥೈರ್ಯ ಬೆಳೆಸುತ್ತ ಅವರ ಮನಸ್ಸನ್ನು ಅರಳಿಸಲಿವೆ.

ತಿಂಗಳಿನಿಂದ ತಯಾರಿ
100ಕ್ಕೂ ಅಧಿಕ ತರಬೇತಿ ಪಡೆದ ಮಾರ್ಗದರ್ಶಕರು ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ತಿಂಗಳಿಂದ ಈ ಕ್ರೀಡೆಗಳಿಗೆ ತಯಾರಿ ನಡೆಯುತ್ತಿದೆ. ಜಾಂಬೂರಿಯ ಪ್ರಧಾನ
ಕಾರ್ಯದರ್ಶಿ, ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಆವರ ಮೇಲುಸ್ತುವಾರಿಯಲ್ಲಿ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಸಹಾಯಕ ಆಯುಕ್ತ ಮಧುಸೂದನ, ರಾಷ್ಟ್ರೀಯ ನಿರ್ದೇಶಕ ಕೃಷ್ಣಸ್ವಾಮಿ, ಜಿಮ್ಮಿ ಸಿಕ್ವೇರ, ಜಾಂಬೂರಿ ಸಂಯೋಜಕ ನವೀನ್‌ಚಂದ್ರ ಅಂಬೂರಿ ಮೊದಲಾದವರು ಈ ಸಾಹಸ ಕ್ರೀಡೆಗಳ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.

ಸೌಟ್ಸ್‌, ಗೈಡ್ಸ್‌, ರೇಂಜರ್ಸ್‌, ರೋವರ್ಸ್‌ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಟಗಳನ್ನು ಸಂಯೋಜಿಸಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ತಂಡಗಳನ್ನಾಗಿಸಿ ಆಟಗಳಲ್ಲಿ ತೊಡಗಿಸುವ ಮೂಲಕ ಎಲ್ಲೂ ಒತ್ತಡದ ಸನ್ನಿವೇಶ ನಿರ್ಮಾಣವಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಯಾವೆಲ್ಲ ಕ್ರಿಡೆಗಳಿವೆ?
ಬೀಮ್‌ ಬ್ಯಾಲೆನ್ಸ್‌, ಒಬ್ಸ್ಟೆಕಲ್‌ ಪ್ಲಾಂಕ್‌ ಬ್ಯಾಲೆನ್ಸ್‌ ವಾಕ್‌, ಲೋಗ್‌ಬ್ಯಾಲೆನ್ಸ್‌ ವಾಕ್‌, ನೆಟ್‌ ಕ್ರಾಲಿಂಗ್‌, ಮಂಕಿ ಬ್ರಿàಚ್‌, ಒಬ್ಸ್ಟೆಕಲ್‌ ಕ್ಲೈಂಬಿಂಗ್‌, ಟೈರ್‌ ಬ್ಯಾಲೆನ್ಸ್‌, ಪ್ಲಾಂಕ್‌ ಬ್ಯಾಲೆನ್ಸ್‌ ವಾಕ್‌, ಲ್ಯಾಡರ್‌ ಸ್ವಿಂಗ್‌, ಟೈರ್‌ ಕ್ರಾಲಿಂಗ್‌, ಟೈರ್‌ ಪಾಸಿಂಗ್‌, ನೆಟ್‌ ವಾಲ್‌ ಕ್ಲೈಂಬಿಂಗ್‌, ಫೋರ್‌ ಲೆಗ್‌ ಟವರ್‌, ರ್ಯಾಪ್ಲಿಂಗ್‌ ಆ್ಯಂಡ್‌ ವಾಲ್‌ ಕ್ಲೈಂಬಿಂಗ್‌, ಟೈರ್‌ ವಾಲ್‌ ಕ್ಲೈಂಬಿಂಗ್‌, ರಷ್ಯನ್‌ ವಾಲ್‌, ಏರಿಯಲ್‌ ರನ್‌ ವೇ, ಒಕ್ಟೋಗೊನಲ್‌ ಟವರ್‌, ಚಿಮ್ನಿ, ಸಸ್ಪೆನ್ಸ್‌ ಬ್ರಿಜ್‌, ಬೀಮ್‌ ಬ್ರಿಜ್‌, ಬ್ಯಾಲೆನ್ಸ್‌ ಬ್ರಿಜ್‌, ಡೆರಿಕ್‌ ಬ್ರಿಜ್‌, ಟ್ರೀ ಹಟ್‌, ಟ್ರಸ್ಟ್‌ ಫಾಲ್‌, ವಾಟರ್‌ ಫಾಲ್‌, ಸೀ ಸಾ, ರ್ಯಾಪ್ಟಿಂಗ್‌, ಫ್ಲೋಟರ್‌ ವಾಕ್‌, ಜಿಪ್‌ ಲೈನ್‌, ಟಾರ್ಜಾನ್‌ ಸ್ವಿಂಗ್‌, ರೋಪ್‌ ಕ್ಲೈಂಬಿಂಗ್‌, ಆರ್ಚರಿ, ರ್ಯಾಪ್ಲಿಂಗ್‌ ಇವೆಲ್ಲವೂ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕ ಆಟಗಳಾಗಿವೆ. ಎಲ್ಲ ಆಟಗಳಿಗೂ ತಲಾ ಇಬ್ಬರು ತರಬೇತಿ ಪಡೆದ ಮಾರ್ಗದಶರ್ಕರು ಪ್ರಾಥಮಿಕ ಚಿಕಿತ್ಸೆಗೆ ವೈದ್ಯರು ಹಾಗೂ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ.

ಟಾಪ್ ನ್ಯೂಸ್

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.