Moodabidri ಆಳ್ವಾಸ್ ವಿರಾಸತ್-2023 ಪ್ರಶಸ್ತಿ ಪ್ರದಾನ
ಮೈಸೂರು ಮಂಜುನಾಥ್, ಪ್ರವೀಣ್ ಗೋಡ್ಖಿಂಡಿ, ವಿಜಯಪ್ರಕಾಶ್ ಅವರಿಗೆ
Team Udayavani, Dec 17, 2023, 11:32 PM IST
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಲ್ಕು ದಿನಗಳ ಪರ್ಯಂತ ನಡೆದ ಆಳ್ವಾಸ್ ವಿರಾಸತ್-2023ರ ರವಿವಾರ ರಾತ್ರಿ ಖ್ಯಾತ ವಯೊಲಿನ್ ವಾದಕ ಡಾ| ಮೈಸೂರು ಮಂಜುನಾಥ್, ಬಾನ್ಸುರಿ ವಾದಕ ಡಾ| ಪ್ರವೀಣ್ ಗೋಡ್ಖಿಂಡಿ ಹಾಗೂ ಗಾಯಕ, ಸಂಗೀತ ನಿರ್ದೇಶಕ ವಿಜಯ ಪ್ರಕಾಶ್ ಇವರಿಗೆ “ಅಳ್ವಾಸ್ ವಿರಾಸತ್-2023′ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಳ್ವಾಸ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಕಲಾವಿದರಿಗೆ ಶಾಲು ಹೊದೆಸಿ, ಹಾರ ತೊಡಿಸಿ, ಫಲಕಾಣಿಕೆ, ಪ್ರಶಸ್ತಿ ಫಲಕ ಸಹಿತ 1 ಲಕ್ಷ ರೂ. ನಗದು ಪುರಸ್ಕಾರ ಸಹಿತ ಗೌರವಿಸಿದರು. ಆಳ್ವಾಸ್ ವಿದ್ಯಾರ್ಥಿ ಗಳ ಹಾಡಿನೊಂದಿಗೆ ಕನ್ನಿಕೆಯರು ಕಲಾವಿದರಿಗೆ ಆರತಿ ಬೆಳಗಿ ತಿಲಕವಿರಿಸಿ, ಹೂಮಳೆ ಸುರಿಸಿದರು.
ಸ್ವರ್ಗವೇ ಇಳೆಗಿಳಿದು ಬಂದಿದೆ
ಡಾ| ಮೈಸೂರು ಮಂಜುನಾಥ್ ಸಮ್ಮಾನಕ್ಕೆ ಸ್ಪಂದಿಸಿ, “ದೇವೇಂದ್ರನೂ ನಾಚಬೇಕು, ಸ್ವರ್ಗವೇ ಇಳೆಗಿಳಿದು ಬಂದಿದೆ ಇಲ್ಲಿ. ಸಾಧಾರಣ ಹಳ್ಳಿ ಯೊಂದು ವಿಶ್ವದ ಭೂಪಟದಲ್ಲಿ ಶಿಕ್ಷಣ, ಕಲೆ, ಸಂಸ್ಕೃತಿ, ಕ್ರೀಡೆ ಸಹಿತ ಹತ್ತಾರು ವಿಷಯಗಳಲ್ಲಿ ಗುರುತಿಸ ಲ್ಪಟ್ಟಿರುವ ಹಿಂದೆ ಡಾ| ಆಳ್ವ ಎಂಬ ಕನಸುಗಾರ ಇದ್ದಾರೆ. ಅವರದು ಬರೇ ಹಗಲುಕನಸಲ್ಲ, ಅದನ್ನು ನನಸಾಗಿಸುವ ಪರಿಶ್ರಮವಿದೆ. ಕಲಾಕ್ಷೇತ್ರದ ದಿಗ್ಗಜರೆಲ್ಲ ಬಂದು ಕಾರ್ಯಕ್ರಮ ನೀಡಿರುವ ವಿರಾಸತ್‌ನಲ್ಲಿ ಒಮ್ಮೆ ತನಗೂ ಅವಕಾಶ ಲಭಿಸೀತೇ ಎಂಬ ಮನದಾಸೆ ಹೆಚ್ಚಿನ ಕಲಾವಿದರಿಗಿದೆ ಎಂದರೆ ಅದು ಅತಿಶಯವಾಗದು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು “ಭಾರತೀಯ ಸಂಸ್ಕೃತಿಯ ಚೆಲುವು, ಸೊಬಗಿನ ಅನಾವರಣದೊಂದಿಗೆ ಮನಸ್ಸುಗಳನ್ನರಳಿಸುವ ಆಳ್ವಾಸ್ ವಿರಾಸತ್ ನಮಗೆಲ್ಲ ಹೆಮ್ಮೆ ಎಂದರು.
ವಿರಾಸತ್ ಮೂಲಕ ಸಂದೇಶ
ವಿರಾಸತ್ ಸಾಗಿ ಬಂದ ದಾರಿ ಯನ್ನು ಅವಲೋಕಿಸಿದ ಡಾ| ಆಳ್ವರು, “ಇದಾವುದೂ ಬರೇ ಪ್ರದರ್ಶನ ಕಲೆಗಳಿಗಾಗಿ ಮೀಸ ಲಲ್ಲ, ಮನೋರಂಜನೆಗಲ್ಲ, ಪ್ರತಿ ಯೊಂದು ವಿರಾಸತ್ ಮೂಲಕ ಹಲವು ಸಂದೇಶ ಗಳು ನಾಡಿಗೆ ರವಾನೆಯಾಗಬೇಕು; ಸೌಂದರ್ಯ ಪ್ರಜ್ಞೆಯ ಪ್ರೇಕ್ಷಕರು ರೂಪುಗೊಳ್ಳು ವಂತಾಗಬೇಕು, ಪ್ರೇಕ್ಷಕರು ಮಾನಸಿಕವಾಗಿ ಭ್ರಷ್ಟರಾಗ ಬಾರದು ಎಂಬುದೇ ಇಲ್ಲಿನ ಉದ್ದೇಶ’ ಎಂದರಲ್ಲದೆ, ಈ ಉತ್ಸವವನ್ನು ದೇಶಕ್ಕಾಗಿ ಪ್ರಾಣತ್ಯಾಗಗೈದ ವೀರಯೋಧ ಕ್ಯಾ| ಎಂ.ವಿ. ಪ್ರಾಂಜಲ್ ಅವರಿಗೆ ಸಮರ್ಪಿಸುವುದಾಗಿ ಪ್ರಕಟಿಸಿದರು.
ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾ ರ್ಯವರ್ಯ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್, ಮಣಿಪುರದ ಮಾಜಿ ಸಂಸದ ನಾರಾಸಿಂಗ್, ಸ್ಕೌಟ್ಸ್ ಗೈಡ್ಸ್ ರಾಜ್ಯಮುಖ್ಯ ಕಮಿಶನರ್ ಪಿ.ಜಿ. ಆರ್. ಸಿಂಧಿಯಾ, ಮಾಜಿ ಸಚಿವ ಕೆ. ಅಭಯಚಂದ್ರ, ಮಂಗಳೂರು ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ. ಪುರಾಣಿಕ್, ಉದ್ಯಮಿ ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಉಪನ್ಯಾಸಕ ಕೆ. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.