Moodabidri: ವ್ಯರ್ಥವಾಗುತ್ತಿದೆ ಜಲನಿಧಿ! ಸ್ವರಾಜ್ಯ ಮೈದಾನದ ಪಕ್ಕದ ಚರಂಡಿ


Team Udayavani, May 22, 2023, 3:16 PM IST

Moodabidri: ವ್ಯರ್ಥವಾಗುತ್ತಿದೆ ಜಲನಿಧಿ! ಸ್ವರಾಜ್ಯ ಮೈದಾನದ ಪಕ್ಕದ ಚರಂಡಿ

ಮೂಡುಬಿದಿರೆ: ಅತ್ತ ಮೂಡುಬಿದಿರೆ ಪುರಸಭೆಗೆ ನೀರುಣಿಸು ವ ಪುಚ್ಚಮೊಗರಿನ ಫಲ್ಗುಣೀ ನದಿಯೊಡಲೇ ಬರಿದಾಗಿ ಹೋಗಿದೆ. ಇತ್ತ ಸದ್ಯ ಜೀವ ವಿರುವ ನೂರಾರು ಬೋರ್‌ವೆಲ್‌ಗ‌ಳ ಜಲನಿಧಿಯನ್ನೇ ಪಾಲುಪಟ್ಟಿ ಮಾಡಿ ಹಂಚುವಲ್ಲಿ ಪುರಸಭೆ ಹೈರಾಣಾಗಿ ಹೋಗಿದೆ. ಹೆಚ್ಚುವರಿ ಬೋರ್‌ವೆಲ್‌ ತೋಡಿಸಲು ಚುನಾವಣೆ ಮತ್ತಿತರ ಕುಂಟು ನೆವ, ಅಡ್ಡಿ ಆತಂಕ. ಈಗ ಚುನಾವಣೆ ಮುಗಿದಿದೆ, ಹೊಸಸರಕಾರ ಬಂದಿದೆ. ಇನ್ನು ಜಿಲ್ಲಾಧಿಕಾರಿ ಮನಸ್ಸು ಮಾಡಿದರಾ ಯಿತು, ಬೋರ್‌ವೆಲ್‌ ತೋಡಬಹುದು. ಅದಕ್ಕೆ ಟೆಂಡರ್‌ ಪ್ರಕ್ರಿಯೆ ಆಗುವಾಗ ಇನ್ನೊಂದೆರಡು ವಾರಗಳೂ ಉರುಳಿ ಯಾವು. ಈಗಂತೂ ನೀರಿಗಾಗಿ ಕಾಯುವ ಪರಿಸ್ಥಿತಿ. ಸಮರ್ಪ ಕವಾಗಿ ಒದಗಿಸಲು ಕಷ್ಟ ಪಡುವ ಸ್ಥಿತಿ.

ಇಂಥ ಸಂಕಟ ಸಮಯದಲ್ಲಿ ಹೂವಿನ ಗಿಡಗಳಿಗೆ ನಳ್ಳಿ ನೀರು ಬಿಡ ಬೇಡಿರೋ, ಕಟ್ಟಡ ಕಾಮಗಾರಿಗಳಿಗೆ ನಳ್ಳಿ ನೀರು ಬಳಸಬೇಡಿರೋ ಎಂದು ಆಡಳಿತ ಕಡೆಯಿಂದ ಮನವಿ, ಸೂಚನೆ ಹೊರಡುವುದೇನೋ ಸಾಮಾನ್ಯ, ಸಹಜ. ಆದರೆ ಮೂರು ವರ್ಷಗಳಿಂದಲೂ ಗೊತ್ತಿಧ್ದೋ ಗೊತ್ತಿಲ್ಲದೆಯೋ ದುಬಾರಿ ಯಾದ ಫಲ್ಗುಣಿ ನದಿ ನೀರು ಮೂಡು ಬಿದಿರೆಯ ಸ್ವರಾಜ್ಯ ಮೈದಾನದ ಪಕ್ಕ, ಕಾಮಧೇನು ಸಭಾಂಗಣದ ಎದುರಿನ ಬಾಕ್ಸ್‌ ಚರಂಡಿಯಲ್ಲಿ ವ್ಯರ್ಥವಾಗಿ ಹರಿಯುತ್ತಿದೆಯಲ್ಲ ಎಂಬ ಗುಮಾನಿ ಜನರಲ್ಲಿದೆ.

ಮೊದಮೊದಲಿಗೆ ಇದು ತಾತ್ಕಾಲಿಕ ವಾಗಿ ಎಂದು 5 ವರ್ಷಗಳಿಂದ ಸ್ವರಾಜ್ಯ ಮೈದಾನದಲ್ಲಿ ಬೀಡುಬಿಟ್ಟಿರುವ ಪುರಸಭಾ ದಿನವಹಿ ಮಾರುಕಟ್ಟೆಯ ನೈಋತ್ಯ ಮೂಲೆಯ ಟ್ಯಾಂಕ್‌ನಿಂದ ಹೆಚ್ಚುವರಿಯಾಗಿ ಹರಿದು ಬಂದ ನೀರು ಆಗಿರಬೇಕು ಎಂದು ಶಂಕಿಸಲಾಗಿತ್ತು. ಇದೀಗ ಪರಿಶೀಲಿಸಿದಾಗ ಅದುಹಾಗಾಗಿ ರುವುದಲ್ಲ ಎಂದು ಬಾಕ್ಸ್‌ ಚರಂಡಿಯ ನಡುವೆ ಇರುವ ರಂದ್ರಗಳಿಗೆ ಕೋಲು ಹಾಕಿ ನೋಡಿದಾಗ ನಿಶ್ಚಿತವಾಯಿತು.

ಸ್ವರಾಜ್ಯ ಮೈದಾನದ ಗೇಟಿನಿಂದ ಸುಮಾರು 20 ಅಡಿ ಉದ್ದಕ್ಕೆ ಚರಂಡಿ ಯನ್ನು ಎತ್ತಿಡಬಲ್ಲ ಪುಟ್ಟ ಸ್ಲ್ಯಾಬ್ ಗಳಾಗಿ ರಚಿಸದೆ ಉದ್ದಕ್ಕೆ ಕಾಂಕ್ರೀಟ್‌ ಎರಕ ಹೊಯಿದಂತಿರುವ ಕಾರಣ ನೀರು ಎಲ್ಲಿಂದ ಪೋಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ತೀರಾ ಕೆಳಗಡೆ ಬಂದಾಗ ಹೊರ ಸೂಸುವ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದು ಗೋಚರಿಸಿದೆ. ತೀರಾ ಕೆಳಗಿನ ಮೋರಿಯ ಪಕ್ಕದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪಾದನ ತಾಣವಾಗಿ ಕಂಡುಬಂದಿದ್ದು ಶನಿವಾರವಷ್ಟೇ ಪೇಟೆಯಲ್ಲಿ ಆಚರಿಸಲಾಗಿದ್ದ ಡೆಂಗ್ಯೂ ದಿನಾಚರಣೆ, ಜಾಗೃತಿ ಜಾಥಾವನ್ನು ಅಣಕಿಸುವಂತಿದೆ!

ಜಲನಿಧಿಯನ್ನುಳಿಸಿ
ಕೂಡಲೇ ಈ ಚರಂಡಿಯ ಎಲ್ಲ ಸ್ಲಾ Âಬ್‌ಗಳನ್ನೆತ್ತಿ ಎಲ್ಲಿ ನೀರಿನ ಪೈಪ್‌ಲೈನ್‌ ಒಡೆದಿದೆ ಎಂಬುದನ್ನು ಪತ್ತೆ ಹಚ್ಚಿ ಜಲನಿಧಿಯನ್ನುಳಿಸುವ ಕಾರ್ಯ ನಡೆಸಬೇಕಾಗಿದೆ. ಇಲ್ಲವಾದಲ್ಲಿ ಒಂದು ವಾರ್ಡ್‌ಗಾಗುವಷ್ಟು ನೀರು ಹಾಗೆಯೇ ಪೋಲಾಗುವುದು ಖಂಡಿತ.

ಪರಿಶೀಲಿಸಿ ಸೂಕ್ತ ಕ್ರಮ
ನಾಳೆಯೇ ಅಂದರೆ ಸೋಮ ವಾರವೇ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವೆ.
-ಶಿವ ನಾಯ್ಕ…, ಪುರಸಭಾ ಮುಖ್ಯಾಧಿಕಾರಿ, ಮೂಡುಬಿದಿರೆ

 

ಟಾಪ್ ನ್ಯೂಸ್

Karnataka ಕೆಐಎಡಿಬಿಗೆ ಬಂಪರ್‌: ಸಾಲ ಮಿತಿ 5000 ಕೋ.ರೂ.ಗೆ ಹೆಚ್ಚಳ

Karnataka ಕೆಐಎಡಿಬಿಗೆ ಬಂಪರ್‌: ಸಾಲ ಮಿತಿ 5000 ಕೋ.ರೂ.ಗೆ ಹೆಚ್ಚಳ

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Mangaluru: ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಗುದ್ದಿದ ಕಾರು

9

Mangaluru: ಇ-ಖಾತಾ ವರ್ಗಾವಣೆ ವ್ಯವಸ್ಥೆಯಲ್ಲಿ ತಾಂತ್ರಿಕ ತೊಂದರೆ

8

Mangaluru: ಸೆಂಟ್ರಲ್‌ ಮಾರ್ಕೆಟ್‌ ಬಳಿ ಅಡ್ಡಾದಿಡ್ಡಿ ಸಂಚಾರ

6(2

Surathkal: ಮಧ್ಯ ಗ್ರಾಮ ರಸ್ತೆಯಲ್ಲಿ; ದ್ವಿಚಕ್ರ ಸವಾರರು ಬಿದ್ದು ಎದ್ದು ಹೋಗಬೇಕಿದೆ

5

Mudbidri: ದುರ್ಬಲ ನೀರ್ಕೆರೆ ಸೇತುವೆ; ಹೊಸ ವರುಷಕ್ಕೆ ಹೊಸತು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PCB

PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ

1-foot

FIFA ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಮಾಲ್ದೀವ್ಸ್‌  ವಿರುದ್ಧ ಭಾರತಕ್ಕೆ 11-1 ಗೆಲುವು

Karnataka ಕೆಐಎಡಿಬಿಗೆ ಬಂಪರ್‌: ಸಾಲ ಮಿತಿ 5000 ಕೋ.ರೂ.ಗೆ ಹೆಚ್ಚಳ

Karnataka ಕೆಐಎಡಿಬಿಗೆ ಬಂಪರ್‌: ಸಾಲ ಮಿತಿ 5000 ಕೋ.ರೂ.ಗೆ ಹೆಚ್ಚಳ

4

Kaup: ರಿಕ್ಷಾ ಚಾಲಕ ನೇಣಿಗೆ ಶರಣು

12

Mangaluru: ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಗುದ್ದಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.