ಮೂಡುಬಿದಿರೆ ರಿಂಗ್‌ರೋಡ್‌: ಇನ್ನೂ ಬಗೆಹರಿಯದ ಸಮಸ್ಯೆಗಳು


Team Udayavani, Jan 14, 2021, 6:30 AM IST

ಮೂಡುಬಿದಿರೆ ರಿಂಗ್‌ರೋಡ್‌: ಇನ್ನೂ ಬಗೆಹರಿಯದ ಸಮಸ್ಯೆಗಳು

ಮೂಡುಬಿದಿರೆ: ಸ್ವರಾಜ್ಯ ಮೈದಾನವನ್ನು ಆವರಿಸಿಕೊಂಡು ಅಲಂಗಾರು ರಸ್ತೆಯತ್ತ ಸಾಗುವ ರಿಂಗ್‌ರೋಡ್‌ನ‌ಲ್ಲಿ ಕಂಡುಬಂದಿರುವ ಸಮಸ್ಯೆಗಳ ಪರಿಹಾರ ಕೋರಿ 2019ರ ಸೆ. 16ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದಿದ್ದ ಲೋಕಾಯುಕ್ತರ ಸಭೆಯಲ್ಲಿ, ಪುರಸಭೆ, ಪೊಲೀಸ್‌ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸಮಕ್ಷಮ ಸಲ್ಲಿಸಲಾದ ದಾರಿಹೋಕರೋರ್ವರ ಪತ್ರಕ್ಕಿನ್ನೂ ಸಮಂಜಸ ಪರಿಹಾರ ಮಾರ್ಗ ತೋರಿಸಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಪತ್ರ ಹೀಗೂ ನನೆಗುದಿಗೆ ಬೀಳುವುದೆ? ಎಂಬ ಆತಂಕ ಅರ್ಜಿದಾರರನ್ನು ಕಾಡುತ್ತಿದೆ.

ಮೂಡುಬಿದಿರೆ ಪೇಟೆಯನ್ನು ಪ್ರವೇಶಿಸುವ (ಈಗಿನ ಶಾಸಕರ ಕಚೇರಿ, ಕೋರ್ಟ್‌ ರಸ್ತೆ ತಿರುವು, ಜೆಡಿಎಸ್‌ ಕಚೇರಿ ಇವುಗಳ ಮುಂಭಾಗದಲ್ಲಿ) ಉತ್ತರಕ್ಕೆ ರಿಂಗ್‌ರೋಡ್‌ ರಚಿಸಲಾಗಿತ್ತು. ರಿಂಗ್‌ರೋಡ್‌ನ‌ ಪಕ್ಕವೇ ಮೂರು ದೇವಸ್ಥಾನಗಳು, ಕಲ್ಯಾಣಮಂದಿರ, ಕ್ರೀಡಾಂಗಣ, ಪೇಟೆಯಿಂದ ಸ್ಥಳಾಂತರಿತ ಪುರಸಭೆ ಮಾರುಕಟ್ಟೆ ಇವೆ; ಬಲಗಡೆಯಲ್ಲಿ ಮೀನು, ಮಾಂಸ ಮಾರುಕಟ್ಟೆ, ಸಣ್ಣ ಕೈಗಾರಿಕೆ ಘಟಕಗಳಿವೆ.

ಪೇಟೆಯಿಂದ ಆಳ್ವಾಸ್‌ ಆಸ್ಪತ್ರೆ ರಸ್ತೆಯಾಗಿ ಬರುವ ಒಳಮಾರ್ಗವೂ ಮಾರುಕಟ್ಟೆಯ ಒಂದು ದ್ವಾರವೂ ಒಂದೇ ಜಂಕ್ಷನ್‌ನಲ್ಲಿ ಮುಖಾಮುಖೀಯಾಗುತ್ತಿದೆ. ಹತ್ತಿರದಲ್ಲೇ ಆಳ್ವಾಸ್‌ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌, ಮುಂದೆ ತಿರುವುಗಳೊಂದಿಗೆ ಸಾಗುವ ರಸ್ತೆ ಪಕ್ಕದಲ್ಲೇ ಬಿಎಸ್‌ಎನ್‌ಎಲ್‌ ಟವರ್‌, ನೂತನ ಕನ್ನಡ ಭವನ, ಎಡಗಡೆ ಈಜುಕೊಳ, ಬಲಗಡೆ ರೈತ ಸಂಪರ್ಕ ಕೇಂದ್ರ ಇವೆ. ರಿಂಗ್‌ರೋಡ್‌ ರಚನೆಯಾದ ಬಳಿಕ ಆ ಮೂಲಕ ಹಾದುಹೋಗುವ ವಾಹನಗಳ ಸಂಖ್ಯೆ ಹೆಚ್ಚಿದೆ. ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ಎಷ್ಟೋ ಪ್ರಕರಣಗಳಲ್ಲಿ ಸಾವು ನೋವು ನಡೆದಿದ್ದರೂ ಅಧಿಕೃತವಾಗಿ ದಾಖಲಾಗಿಲ್ಲ. ಅನಾಮಧೇಯವಾಗಿ ಹಾಗೆಯೇ ಬಿದ್ದುಹೋಗಿವೆ. (ಶುಕ್ರವಾರ ವಾರದ ಸಂತೆಯ ದಿನವಂತೂ ಮಾರುಕಟ್ಟೆಯ ಮುಂಭಾಗದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗುತ್ತಿದೆ)

ಇದಾಗಿ ಮತ್ತೆ ಒಂದೂಕಾಲು ವರ್ಷಗಳೇ ಸಂದಿವೆ. ಅಭಿಪ್ರಾಯಗಳೆಲ್ಲ ಪತ್ರಗಳ ಒಳಗೇ ನರಳುತ್ತಿವೆ. ರಿಂಗ್‌ರೋಡಿನ ಸಮಸ್ಯೆಗಳಿಗೆ ಪರಿಹಾರ ಗೋಚರಿಸುವುದೆಂದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.

16 ತಿಂಗಳ ಹಿಂದೆ ಸಲ್ಲಿಸಿದ್ದ ಪತ್ರದಲ್ಲಿದ್ದುದೇನು? :

ಈ ರಿಂಗ್‌ರೋಡ್‌ಅನ್ನು ದ್ವಿಪಥ ಗೊಳಿಸಬೇಕಾಗಿದೆ. ಇಲ್ಲಿ ಅಗತ್ಯವಿರುವಲ್ಲಿ, ವಿಶೇಷವಾಗಿ ಮಾರುಕಟ್ಟೆ, ಆಸ್ಪತ್ರೆ, ರಿಂಗ್‌ರೋಡ್‌ ರಸ್ತೆಗಳು ಸಂಪರ್ಕಿಸುವಲ್ಲಿ ವೇಗತಡೆಗಳನ್ನು, ಕನ್ನಡಭವನದ ಬಳಿ ವೃತ್ತವನ್ನು ನಿರ್ಮಿಸಬೇಕಾಗಿದೆ ಎಂಬಿತ್ಯಾದಿ ಕೋರಿಕೆಗಳಿರುವ ಪತ್ರವನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ಪುರಸಭೆ, ಲೋಕೋಪಯೋಗಿ ಮತ್ತು ಪೊಲೀಸ್‌ ಇಲಾಖೆಯವರಿಗೆ ಅಧಿಕಾರಿ ಕೂಡಲೇ ಕ್ರಮ ಜರಗಿಸುವಂತೆ ಸೂಚಿಸಿದ್ದರು. ಇದಾಗಿ ತಿಂಗಳ ಬಳಿಕ ಕಡೆಯಿಂದ ಪೊಲೀಸ್‌ ನಿರೀಕ್ಷಕರಿಗೆ “ಪುರಸಭೆ ಮುಖ್ಯಾಧಿಕಾರಿಯವರು ಪತ್ರದಲ್ಲಿ ವ್ಯಕ್ತಪಡಿಸಲಾದ ಕೋರಿಕೆಗಳಿಗೆ ಸಂಬಂಧಿಸಿ ಪೊಲೀಸ್‌ ಇಲಾಖೆಯವರು ಅಭಿಪ್ರಾಯ ನೀಡಬೇಕಾಗಿ ಕೋರಿದ್ದರು.

ರಿಂಗ್‌ರೋಡ್‌ ಸಮಸ್ಯೆಗಳ ಬಗ್ಗೆ ಪುರಸಭೆಯ ವತಿಯಿಂದ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಪುರಸಭೆಯಲ್ಲಿ ಎಂಜಿನಿಯರ್‌ ಹುದ್ದೆ ಖಾಲಿ ಬಿದ್ದು ಸಮಯವಾಗಿದೆ, ಸಮಸ್ಯೆಯಾಗಿದೆ. ಆದರೂ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಅಭಿಪ್ರಾಯದಂತೆ ಕೂಡಲೇ ಪ್ರಯತ್ನಿಸಲಾಗುವುದು. ಇಂದೂ ಎಂ.,   ಮುಖ್ಯಾಧಿಕಾರಿ, ಮೂಡುಬಿದಿರೆ ಪುರಸಭೆ

 

ಧನಂಜಯ  ಮೂಡುಬಿದಿರೆ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.