Moodbidri: ಆಳ್ವಾಸ್ ವಿರಾಸತ್ ಶಾಸ್ತ್ರೀಯ ಯುವಸಂಪದ
ಭಾರತೀಯ ಶಾಸ್ತ್ರೀಯ ಯುವ ಕಲಾಸಕ್ತರ ಸಮಾವೇಶ
Team Udayavani, Nov 29, 2024, 11:57 PM IST
ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ವಿರಾಸತ್-2024ನ್ನು ಮತ್ತಷ್ಟು ಸಮಾಜಮುಖಿಯನ್ನಾಗಿಸಲು “ಆಳ್ವಾಸ್ ವಿರಾಸತ್ ಶಾಸ್ತ್ರೀಯ ಯುವ ಸಂಪದ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಡಿ.10ರಿಂದ 15ರ ವರೆಗೆ ಆಳ್ವಾಸ್ ವಿರಾಸತ್‌ನ ಕೊನೆಯ ದಿನ ಹೊರತುಪಡಿಸಿ, ಉಳಿದ 5 ದಿನಗಳ ಕಾಲ ಬೆಳಗ್ಗೆ 7.30ರಿಂದ ಸಂಜೆ 5ರ ವರೆಗೆ ಶಿಬಿರ ನಡೆಯಲಿದೆ.
ಶಾಸ್ತ್ರೀಯ (ಹಿಂದೂಸ್ಥಾನಿ- ಕರ್ನಾಟಕ) ಸಂಗೀತ- ನೃತ್ಯ- ತಾಳವಾದ್ಯ ಮತ್ತು ಯಕ್ಷಗಾನ ಕಲೆಗಳನ್ನು ಅಭ್ಯಸಿಸುವ 6ರಿಂದ ಸ್ನಾತಕೋತ್ತರ ತರಗತಿವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಭಾಗವಹಿ ಸುವವರು ಅಭ್ಯಸಿಸುವ ಕಲಾಪ್ರಕಾರಗಳಲ್ಲಿ ಕನಿಷ್ಠ 2 ವರ್ಷಗಳ ಪರಿಶ್ರಮ ಹೊಂದಿರಬೇಕು. ತರಬೇತಿ ಶುಲ್ಕ ಇಲ್ಲ. ಊಟ, ಉಪಾಹಾರ ಮತ್ತು ವಸತಿ ಉಚಿತ. ಪ್ರತಿದಿನ ವಿದ್ವಾಂಸರಿಂದ ಉಪನ್ಯಾಸ, ಶಾಸ್ತ್ರೀಯ ಸಂಗೀತ-ನೃತ್ಯಾದಿ ಕಲೆಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಪ್ರಾತ್ಯಕ್ಷಿಕೆಗಳಿವೆ. “ಆಳ್ವಾಸ್ ವಿರಾಸತ್-2024’ರ ಮಹಾವೈಭವದಲ್ಲಿ ಭಾಗಿಯಾಗುವ ಅವಕಾಶ ಇರಲಿದೆ. ಆಸಕ್ತರು ಡಿ.9ರ ಮೊದಲು ಹೆಸರು ನೋಂದಾ ಯಿಸಬೇಕು. ಅವಕಾಶ ಸೀಮಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.