ಮೂಡಬಿದಿರೆ ಕೋಟಿ ಚೆನ್ನಯ ಕಂಬಳಕ್ಕೆ ಸಂಭ್ರಮದ ಚಾಲನೆ
Team Udayavani, Nov 12, 2017, 2:30 PM IST
ಮೂಡಬಿದಿರೆ: ಇಪ್ಪತ್ತು ತಿಂಗಳ ಬಳಿಕ ಬಹಳಷ್ಟು ಸಂಭ್ರಮ, ಆಶಾವಾದಗಳೊಂದಿಗೆ ಮೂಡಬಿದಿರೆಯ 15ನೇ ವರ್ಷದ
ಕೋಟಿ ಚೆನ್ನಯ ಜೋಡುಕರೆ ಕಂಬಳ ಶನಿವಾರ ಬೆಳಗ್ಗೆ ಪ್ರಾರಂಭವಾಯಿತು.
ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ, ನಾಗರಕಟ್ಟೆ ಜೋಡುಕಟ್ಟೆ ಗರಡಿ, ಮೂಡಬಿದಿರೆ ಹನುಮಂತ ದೇವಸ್ಥಾನ, ಒಂಟಿಕಟ್ಟೆ ಅಯ್ಯಪ್ಪ ಗುಡಿ ಸಹಿತ ಹಲವು ಆರಾಧನಾ ಕ್ಷೇತ್ರಗಳಿಂದ ತಂದ ಪ್ರಸಾದವನ್ನು ಜೋಡುಕರೆಗೆ ಸಮರ್ಪಿಸಲಾಯಿತು.
ಸರ್ವ ಧರ್ಮೀಯರ ಪ್ರತಿನಿಧಿಗಳಾಗಿ ಪಾಲ್ಗೊಂಡ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ| ಮೂ| ಈಶ್ವರ ಭಟ್, ಅಲಂಗಾರು ಚರ್ಚ್‌ನ ರೆ| ಫಾ| ಸುನೀಲ್ ವೇಗಸ್, ಮೂಲ್ಕಿಯ ರೆ| ಫಾ| ಎಫ್. ಎಕ್ಸ್. ಗೋಮ್ಸ್ ಕರೆಯಲ್ಲಿ ಜ್ಯೋತಿ ಬೆಳಗುವುದರ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು.
ಕಂಬಳವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಸಾಕ್ಷಿಯಾದ ಮೂಡಬಿದಿರೆ ಕಂಬಳ ಕ್ರೀಡಾಂಗಣದಲ್ಲಿ ಕಂಬಳದ ಸಂಶೋಧನ ಕೇಂದ್ರವನ್ನು ಪ್ರಾರಂಭಿಸುವ ದಿನ ಬರಲಿ ಎಂದು ರೆ| ಫಾ| ಎಫ್. ಎಕ್ಸ್ ಗೋಮ್ಸ್ ಹೇಳಿದರು. ರೆ| ಫಾ| ಸುನೀಲ್ ವೇಗಸ್ ಮಾತನಾಡಿ, ಇದು ಸಂತೋಷದ, ಸಾಮರಸ್ಯದ ಕಂಬಳವಾಗಲಿ ಎಂದು ಹಾರೈಸಿದರು.
ಚೌಟರ ಅರಮನೆ ಕುಲದೀಪ ಎಂ. ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅಬುಲಾಲ ಪುತ್ತಿಗೆ, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಉದ್ಯಮಿಗಳಾದ ಸ್ಟೀಫನ್ ಮೆಂಡಿಸ್, ಅರುಣ್ ಮೆಂಡಿಸ್, ನಂದ ಕುಮಾರ ಆರ್. ಕುಡ್ವ, ಕೆ. ವಿಶ್ವನಾಥ ಪ್ರಭು, ಅಬ್ದುಲ್ ಲತೀಫ್, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ ಕಾಮತ್, ಲಯನ್ಸ್ ಅಧ್ಯಕ್ಷ ರಾಮಚಂದ್ರ ಆಚಾರ್ಯ, ತ್ರಿಭುವನ್ ಜೇಸಿ ಅಧ್ಯಕ್ಷ ಸಂತೋಷ್ ಆರ್.ಎಲ್., ರೊಟರ್ಯಾಕ್ಟ್ ಅಧ್ಯಕ್ಷ ಸಚಿನ್ ಫೆರ್ನಾಂಡಿಸ್, ರೋಟರಿ ಮಿಡ್‌ಟೌನ್ ಅಧ್ಯಕ್ಷ ಕುಮಾರ್ ಪೂಜಾರಿ, ಟೆಂಪಲ್ ಟೌನ್ ಅಧ್ಯಕ್ಷ ಬಲರಾಮ್ ಭಟ್, ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಅಭಿಜಿತ್ ಎಂ. ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.
137 ಜತೆ ಕೋಣಗಳು ತಮ್ಮ ಯಜಮಾನರು, ಓಟಗಾರರು ಹಾಗೂ ಪರಿವಾರದವರ ಜತೆಗೂಡಿ, ಕಂಬಳ ಸಮಿತಿಯ ಹುದ್ದರಿಗಳೊಂದಿಗೆ 146 ಮೀ. ಉದ್ದದ ಜೋಡುಕರೆಯಲ್ಲಿ ಹೆಜ್ಜೆ ಹಾಕಿ ಮುಂದಿನ ಓಟಕ್ಕೆ ತಯಾರಾದವು. ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಕೆ. ಅಭಯಚಂದ್ರ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಕೆ. ಗುಣಪಾಲ ಕಡಂಬ, ಕೋಶಾಧಿಕಾರಿ, ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಉಪಾಧ್ಯಕ್ಷರಾದ ಪಂಚರತ್ನ ತಿಮ್ಮಯ ಶೆಟ್ಟಿ, ಪಿ.ಕೆ. ಥಾಮಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಲೆರಿಯನ್ ಸಿಕ್ವೇರಾ, ದಿನಕರ ಶೆಟ್ಟಿ ಬೆಳುವಾಯಿ, ಪ್ರೇಮನಾಥ ಮಾರ್ಲ, ಕಾರ್ಯದರ್ಶಿ ರತ್ನಾಕರ ಸಿ. ಮೊಲಿ, ಮುಡಾ ಅಧ್ಯಕ್ಷ ಸುರೇಶ ಪ್ರಭು, ಚಂದ್ರಹಾಸ ಸನಿಲ್ ಏರಿಮಾರುಬರ್ಕೆ, ನವೀನ್ ಚಂದ್ರ ಅಂಬೂರಿ, ಹರ್ಷವರ್ಧನ ಪಡಿವಾಳ್, ರಾಜೀವ್ ಶೆಟ್ಟಿ ಎಡೂ¤ರು, ಜತೆ ಕಾರ್ಯದರ್ಶಿಗಳಾದ ಪ್ರಭಾಕರ ಹೆಗ್ಡೆ ಬೆಳುವಾಯಿ, ನಮಿರಾಜ (ನೇಮಿ), ಕಾನ ಮಾದು ಭಂಡಾರಿ, ಗೋಪಾಲ ಬಂಗೇರ, ಗಿರೀಶ್ ಕೋಟ್ಯಾನ್ ಒಂಟಿಕಟ್ಟೆ, ವಾಸು ಪೂಜಾರಿ ಸಹಿತ ಪದಾಧಿಕಾರಿಗಳಿದ್ದರು. ನವೀನ್ ಚಂದ್ರ ಅಂಬೂರಿ, ರತ್ನಾಕರ ಸಿ. ಮೊಲಿ, ನಮಿರಾಜ ಮೊದಲಾದವರು ನಿರೂಪಿಸಿದರು.
ಕಂಬಳ ಉಳಿಯಲಿ
‘ಜಾಗದ ಭೋಗ ಮಲ್ಲೆ, ಮಣ್ಡ್ ದ ಭಾಗ್ಯ ಮಲ್ಲೆ, ದೇವೆರೆ ಸತ್ಯ ಮಲ್ಲೆ, ಹಿರಿಯೆರೆ ಧರ್ಮ ಮಲ್ಲೆ. ಇದು ಈ ಕಂಬಳದ ಭೂಮಿಗೂ ಅನ್ವಯ. ಭಕ್ತಿ ಶ್ರದ್ಧೆ, ಪರಿಶ್ರಮದ ಪ್ರತೀಕವಾದ ಕಂಬಳ ಉಳಿದು ಬೆಳೆಯಲಿ’ ಎಂದು ಅಲಂಗಾರು ವೇ| ಮೂ| ಈಶ್ವರ ಭಟ್ ಅವರ ನುಡಿದಾಗ ಕಂಬಳಾಭಿಮಾನಿಗಳೆಲ್ಲ ರೋಮಾಂಚನಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.