ಮೂಡುಬಿದಿರೆ: ಮೊದಲ ಬಾರಿಗೆ ಬಿಜೆಪಿಗೆ ಗಾದಿ
Team Udayavani, Jun 1, 2019, 6:00 AM IST
ಮೂಡುಬಿದಿರೆ: ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿ 23 ವಾರ್ಡ್‌ಗಳಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ನಲ್ವತ್ತನಾಲ್ಕು ವರ್ಷಗಳ ಮೂಡುಬಿದಿರೆ ಪುರಸಭಾ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಬಹುಮತ ಗಳಿಸಿದಂತಾಗಿದೆ.
ಬಿಜೆಪಿಯ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ 11 ಸ್ಥಾನಗಳನ್ನು ಗಳಿಸಿ ಪ್ರಬಲ ವಿಪಕ್ಷವಾಗಿ ಹೊರಹೊಮ್ಮಿದೆ. ಈ ಹಿಂದೆ ಕಾಂಗ್ರೆಸ್ ಸಖ್ಯದೊಂದಿಗೆ ಒಂದು ಸ್ಥಾನ ಪಡೆದಿದ್ದ ಸಿಪಿಎಂ, ಹೊಸದಾಗಿ ಕಣಕ್ಕೆ ಧುಮುಕಿದ ಎಸ್‌ಡಿಪಿಐ, ಬಿಎಸ್‌ಪಿ ಯಾವುದೇ ಸ್ಥಾನ ಗಳಿಸಿಲ್ಲ. ನಾಲ್ಕು ವಾರ್ಡ್‌ಗಳಲ್ಲಿದ್ದ ನಾಲ್ವರು ಪಕ್ಷೇತರರೂ ಗೆಲ್ಲಲಾಗಿಲ್ಲ. ಓರ್ವರು 1 ಮತದಿಂದ ಗೆದ್ದಿದ್ದರೆ, ಕೆಲವರು ಒಂದಂಕಿ ಮತ ಗಳಿಸಿರುವುದೂ ಇತಿಹಾಸ ನಿರ್ಮಿಸಿದೆ.
1 ಮತದಿಂದ ಸೋಲು -ಗೆಲುವು
ವಾರ್ಡ್ 11 ರಲ್ಲಿ ಬಿಜೆಪಿಯ ನವೀನ್ ಶೆಟ್ಟಿ ಅವರು 189 ಮತಗಳಿಸಿ ಇದಿರಾಳಿ ಕಾಂಗ್ರೆಸ್‌ನ ದಿಲೀಪ್ ಕುಮಾರ್ ಶೆಟ್ಟಿ ಅವರನ್ನು ಕೇವಲ 1 ಮತದಿಂದ ಮಣಿಸಿದ್ದು ಒಂದು ದಾಖಲೆಯಾದರೆ, ಗೆಲುವಿನ ನಿರೀಕ್ಷೆ ಹೊತ್ತಿದ್ದ ದಿಲೀಪ್ ಶೆಟ್ಟಿ ಅವರು 1 ಮತದ ಅಂತರದಲ್ಲಿ ಸೋಲುಂಡದ್ದು ಮತ್ತೂಂದು ದಾಖಲೆ. ಉಳಿದಂತೆ ವಾರ್ಡ್ 20ರಲ್ಲಿ ನಿಕಟಪೂರ್ವ ಸದಸ್ಯ, ಮುಡಾ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಕೇವಲ 8 ಮತಗಳ ಅಂತರದಿಂದ ಬಿಜೆಪಿಯ ದಿನೇಶ್ ಜಿ. ಪೂಜಾರಿ ಅವರೆದುರು ಜಯ ಸಾಧಿಸಿದರು.
ವಾರ್ಡ್ 14ರಲ್ಲಿ ನಿಕಟಪೂರ್ವ ಸದಸ್ಯ, ಬಿಜೆಪಿಯ ಪ್ರಸಾದ್ ಕುಮಾರ್ ಅವರು ಕಾಂಗ್ರೆಸ್‌ನ ಹೊಸ ಮುಖ ಆಲ್ವಿನ್ ವಾಲ್ಟರ್ ಡಿ’ಸೋಜಾ ಅವರೆದುರು 21 ಮತಗಳ ಪ್ರಯಾಸಕರ ಗೆಲುವು ಸಾಧಿಸಿದರು. ವಾರ್ಡ್ 19ರಲ್ಲಿ ಬಿಜೆಪಿಯ ಸುಜಾತಾ ಅವರು ಕಾಂಗ್ರೆಸ್‌ನ ಹರಿಣಾಕ್ಷಿ ಸತೀಶ್ ಕೋಟ್ಯಾನ್ ಅವರೆದುರು ಜಯ ಗಳಿಸಿದ್ದೂ 10 ಮತಗಳ ಅಂತರದಿಂದ.
ಗರಿಷ್ಠ ಅಂತರ
ವಾರ್ಡ್ 3ರಲ್ಲಿ ಹಿರಿಯ ಸದಸ್ಯ ಪಿ.ಕೆ. ಥಾಮಸ್ ಅವರು ಇದಿರಾಳಿ ಬಿಜೆಪಿಯ ಭರತ್ ಡಿ. ಶೆಟ್ಟಿ ಎದುರು 355 ಮತಗಳ ಅಂತರದಿಂದ ಗೆದ್ದದ್ದು ಈ ಫಲಿತಾಂಶದಲ್ಲೇ ಗರಿಷ್ಠ. ಮುಂದಿನ ಸ್ಥಾನ, ವಾರ್ಡ್ 5ರಲ್ಲಿ ನಿ.ಪೂ. ಸದಸ್ಯ ಬಿಜೆಪಿಯ ನಾಗರಾಜ್ ಪೂಜಾರಿ ಅವರದ್ದು . ಅವರು ಕಾಂಗ್ರೆಸ್ ಅಭ್ಯರ್ಥಿಗಿಂತ 294 ಅಧಿಕ ಮತ ಗಳಿಸಿದ್ದಾರೆ.
ಹೊಸಮುಖಗಳು
ಕಾಂಗ್ರೆಸ್‌ನ ಆಶಾಲತಾ, ಪುರಂದರ ದೇವಾಡಿಗ, ಹಿಮಾಯತುಲ್ಲಾ ಶೇಖ್, ಸುರೇಶ್ ಪ್ರಭು, ಇಕ್ಬಾಲ್‌ಕರೀಂ, ಬಿಜೆಪಿಯ ಸೌಮ್ಯಾ ಸಂದೀಪ ಶೆಟ್ಟಿ, ದಿವ್ಯಾ ಜಗದೀಶ್, ನವೀನ್ ಶೆಟ್ಟಿ, ರಾಜೇಶ್ ನಾಯ್ಕ, ಶ್ವೇತಾ ಕುಮಾರಿ, ಸ್ವಾತಿ ಎಸ್. ಪ್ರಭು, ಸುಜಾತಾ ಶಶಿಧರ್ ಕೋಟ್ಯಾನ್, ಜಯಶ್ರೀ ಕೇಶವ ನೀರ್ಜಾಲು, ಕುಶಲ ಯಶೋಧರ ದೇವಾಡಿಗ, ಧನಲಕ್ಷ್ಮೀ.
ಸೋತ ಪ್ರಮುಖರು
ಜೆಡಿಎಸ್‌ನ ಕ್ರಿಯಾಶೀಲ ಪುರಸಭಾ ಸದಸ್ಯೆ ಪ್ರೇಮಾ ಸಾಲ್ಯಾನ್, ಜೆಡಿಎಸ್‌ನಲ್ಲಿದ್ದಾಗ ಸದಸ್ಯರಾಗಿದ್ದು ಮತ್ತೆ ಬಿಜೆಪಿಗೆ ಬಂದು ಸ್ಪರ್ಧೆಗಿಳಿದ ಕೆ. ಕೃಷ್ಣ ರಾಜ ಹೆಗ್ಡೆ , ಜೆಡಿಎಸ್‌ನಿಂದ ಬಿಜೆಪಿಗೆ ಬಂದು ಕ್ಷೇತ್ರ ಬದಲಿಸಿದ ಹನೀಫ್, ಈ ಹಿಂದೆ ಸದಸ್ಯರಾಗಿದ್ದು ಪಕ್ಷೇತರರಾಗಿ ಸ್ಪರ್ಧಿಸಿದ ಅನಿಲ್ ಸಿಪ್ರಿಯಾನ್ ಲೋಬೋ.
ಗೆದ್ದ ಪ್ರಮುಖರು
ನಿಕಟಪೂರ್ವ ಸದಸ್ಯರಾದ ಕಾಂಗ್ರೆಸ್‌ನ ಪಿ.ಕೆ. ಥಾಮಸ್, ಕೊರಗಪ್ಪ, ಸುರೇಶ್ ಕೋಟ್ಯಾನ್, ರೂಪಾ ಎಸ್. ಶೆಟ್ಟಿ, ಶಕುಂತಳಾ ಹರೀಶ್ ದೇವಾಡಿಗ, 10 ವರ್ಷಗಳ ಹಿಂದೆ ಸದಸ್ಯರಾಗಿದ್ದ ಜೊಸ್ಸಿ ಮಿನೇಜಸ್, ಬಿಜೆಪಿಯ ನಾಗರಾಜ್ ಪೂಜಾರಿ, ಪ್ರಸಾದ್ ಕುಮಾರ್.
ಬಲಾಬಲ
ಬಿಜೆಪಿ 12
ಕಾಂಗ್ರೆಸ್ 11
ಒಟ್ಟು 23
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.