ಮೂಡಬಿದಿರೆ: ಉಚಿತ ಸಾಮೂಹಿಕ ವಿವಾಹ
Team Udayavani, Apr 9, 2018, 7:53 AM IST
ಮೂಡಬಿದಿರೆ: ಇಲ್ಲಿನ ಭಗತ್ಸೇನೆಯ ನೇತೃತ್ವದಲ್ಲಿ ಸುರೇಶ್ ಶೆಟ್ಟಿ , ಹರಿಮೀನಾಕ್ಷಿ, ದೋಟ ಮಿಜಾರು ಇವರ ಸಂಪೂರ್ಣ ಸಹಕಾರದೊಂದಿಗೆ ರವಿವಾರ ಬೆಳಗ್ಗೆ 11.01ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಆಲಂಗಾರಿನ ಈಶ್ವರ ಭಟ್ ಮತ್ತು ಬಳಗದವರ ಪೌರೋಹಿತ್ಯದಲ್ಲಿ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಸ್ವರಾಜ್ಯ ಮೈದಾನದ ಆದಿಶಕ್ತಿ ದೇವಸ್ಥಾನದ ಬಳಿ ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ರಂಗಗಳ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಜರಗಿತು.
ಪಾಲಡ್ಕ ಪೂಪಾಡಿಕಲ್ಲು ಉಮೇಶ ಆಚಾರ್ಯ- ಹೊಸ್ಮಾರ್ನ ಶಶಿಕಲಾ, ಮಣಿಕಂಠ ಕಾರ್ಕಳ-ಗೀತಾ ಕಾರ್ಕಳ, ಸೂರಜ್ ಮಂಗಳೂರು-ಸಮಿತಾ ಕೆಸರ್ಗದ್ದೆ, ಮನೋಜ ಅಲಂಗಾರ್ಗುಡ್ಡೆ-ಸರಿತಾ ಬಂಟಕಲ್, ಮಂಜುನಾಥ ಅಜೆಕಾರು-ಪುಷ್ಪಾ ಮಿಜಾರ್ ವಿವಾಹಿತರಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಧುವಿಗೆ ಒಂದೂವರೆ ಪವನಿನ ಚಿನ್ನದ ಕರಿಮಣಿ ತಾಳಿ, ಸೀರೆ, ವರನಿಗೆ ಧೋತಿ, ಶರ್ಟ್, ಶಾಲು, ಪೇಟಾ ನೀಡಲಾಗಿತ್ತು.
ದಿಬ್ಬಣದ ಮೆರವಣಿಗೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಚೌಟರ ಅರಮನೆ ಕುಲದೀಪ್ ಚೌಟ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಚಾಲನೆ ನೀಡಿದರು.
ಮುಂಬಯಿಯ ಉದ್ಯಮಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಸಮಾರಂಭವನ್ನು ಉದ್ಘಾಟಿಸಿದರು. ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮತ್ತು ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಸಾಧಕರಿಗೆ ಸಮ್ಮಾನ
ಎಂ. ತುಂಗಪ್ಪ ಬಂಗೇರ (ಸಮಾಜ ಸೇವೆ), ರಾಮಚಂದ್ರ ನಾಯಕ್ ( ಮಾಜಿ ಸೈನಿಕ), ಸಬಿತಾ ಮೋನಿಸ್ (ವಿಶೇಷ ಸಾಧನೆ), ಜನಾರ್ದನ ಗೌಡ ಪುತ್ತಿಗೆ ನೆಲ್ಲಿಗುಡ್ಡೆ, ಬಡಗಮಿಜಾರು ಅರೆಮಜಲುಪಲ್ಕೆ ರಾಜು ಗೌಡ (ಕೃಷಿ) ಮೂಡಬಿದಿರೆ ನಾಗರಕಟ್ಟೆ ಯ ಪ್ರಜ್ವಲ್ (ಕ್ರೀಡೆ) ಹಾಗೂ ಬೆಳ್ಳೆಚ್ಚಾರು ರಾಘವ ವೈದ್ಯ (ಶಿಕ್ಷಣ) ಅವರನ್ನು ಸಮ್ಮಾನಿಸಲಾಯಿತು.
ಶಶಿಧರ್ ಹೆಗ್ಡೆ ಮಿಜಾರುಗುತ್ತು, ಶಂಕರ ರೈ ಮಿಜಾರುಗುತ್ತು, ರವೀಂದ್ರ ಸುವರ್ಣ, ಪೂವಪ್ಪ ಸಾಲಿಯಾನ್, ಕೆ.ಪಿ. ಜಗದೀಶ ಅಧಿಕಾರಿ, ಸುದರ್ಶನ ಎಂ., ದಿವಾಕರ ಶೆಟ್ಟಿ ತೋಡಾರು, ಅಶ್ವಿನ್ ಜೆ. ಪಿರೇರಾ, ಸಾಯಿ ಪೂಂಜ, ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಮಿಜಾರು, ನ್ಯಾಯವಾದಿ ಶರತ್ ಡಿ. ಶೆಟ್ಟಿ, ಜಯಂತಿ ಎಸ್. ಬಂಗೇರ, ರತ್ನಾಕರ ದೇವಾಡಿಗ, ರೂಪಾ ಸಂತೋಷ್ ಶೆಟ್ಟಿ, ಅಬ್ದುಲ್ ಸಲಾಂ, ಚಂದ್ರಹಾಸ ಸನಿಲ್ ಭಾಗವಹಿಸಿದ್ದರು.
ಭಗತ್ ಸೇನೆ ಸ್ಥಾಪಕಾಧ್ಯಕ್ಷ ಸುಜಿತ್ ಶೆಟ್ಟಿ, ಅಧ್ಯಕ್ಷ ಪ್ರಸಾದ್ ಆಳ್ವ, ಉಪಾಧ್ಯಕ್ಷರಾದ ದಯಾನಂದ ಆಚಾರ್ಯ, ಕಾರ್ಯದರ್ಶಿ ಅಶೋಕ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಜ್ವಲ್ ಆಚಾರ್ಯ ಸಹಿತ ಸದಸ್ಯರು, ಭಗತ್ ಸೇನೆ ವಿದ್ಯಾರ್ಥಿಘಟಕ, ಚಾಮುಂಡಿ ಬೆಟ್ಟ ಘಟಕದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಯೋಗೀಶ್ ಬೆದ್ರ ಪ್ರಸ್ತಾವನೆಗೈದರು. ಲಿಖೀತಾ ಸ್ವಾಗತಿಸಿ, ಸಂತೋಷ್ ಸಿದ್ಧಕಟ್ಟೆ ನಿರೂಪಿಸಿದರು. ಪ್ರತೀಕ್ಷಾ ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.