ಮೂಡಬಿದಿರೆಗೆ ಪ್ರಭಾವನಾ ರಥ
Team Udayavani, Dec 24, 2017, 11:32 AM IST
ಮೂಡಬಿದಿರೆ: ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿ ಹೊರಟಿರುವ ‘ಪ್ರಭಾವನಾ ರಥ’ ವನ್ನು ಮೂಡಬಿದಿರೆಯಲ್ಲಿ
ಶ್ರೀ ಜೈನ ಮಠಾಧೀಶ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಸಮಾಜದ ಗಣ್ಯರು, ಶ್ರಾವಕ, ಶ್ರಾವಕಿಯರೊಂದಿಗೆ ಡಿ. 21ರಂದು ಮಹಾವೀರ ಭವನದಲ್ಲಿ ಸ್ವಾಗತಿಸಿದರು.
ಧರಣೇಂದ್ರ ಶಾಸ್ತ್ರೀಜಿ ಪ್ರಸ್ತಾವನೆಗೈದರು. ಶ್ರೀ ಜೈನ ಮಠದ ವತಿಯಿಂದ ಸ್ವಾಮೀಜಿಯವರು ರೂ. 35,000 ನೀಡಿ ಮಸ್ತಕಾಭಿಷೇಕದ ಕಲಶವನ್ನು ಸ್ವೀಕರಿಸಿದರು. ಇದೇ ವೇಳೆ ಶಾಸಕ ಕೆ. ಅಭಯಚಂದ್ರ ಅವರು ರೂ. 35,000 ನೀಡಿ ಕಲಶ ಸ್ವೀಕರಿಸಿದರು. ಮುಂಬೈಯ ಸುನೀಲ್ ಜೋಶಿ, ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಧನಕೀರ್ತಿ ಬಲಿಪ, ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್ ಆನಡ್ಕ, ಶೈಲೇಂದ್ರ ಕುಮಾರ್, ಹರಿಶ್ಚಂದ್ರ ಇಂದ್ರ ಅಲ್ಲದೆ, ಮಹಾರಾಷ್ಟ್ರ, ರಾಜಸ್ತಾನ ಮೊದಲಾದ ರಾಜ್ಯಗಳ ಶ್ರಾವಕ-ಶ್ರಾವಿಕೆಯರು ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.