ಜಾಂಬೂರಿಯಲ್ಲಿ ತೆರೆದುಕೊಳ್ಳುವ ಕಲಾಲೋಕ, ಸ್ವದೇಶೀ ಮೇಳ
Team Udayavani, Dec 21, 2022, 12:49 PM IST
ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ಬುಧವಾರ ಆರಂಭವಾಗುವ ಅಂತಾರಾಷ್ಟ್ರೀಯ ಸ್ಕೌಟ್ಸ್ – ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ದೇಶ ವಿದೇಶಗಳ ಕಲಾಲೋಕ ತೆರೆದುಕೊಳ್ಳುತ್ತಿದೆ. ಕಟ್ಟಡದ ಒಳಗೆ,ಹೊರಗೆ ವಿಭಿನ್ನ ಚಟುವಟಿಕೆಗಳು ನಡೆಯುತ್ತಲಿವೆ. ಬಹುಮಾಧ್ಯಮಗಳಲ್ಲಿ ಶಿಲ್ಪಕಲೆಯಲ್ಲಿ ಶಿಲ್ಪಿಗಳಿಗಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಚಿತ್ರಕಲಾವಿದರು, ವ್ಯಂಗ್ಯಚಿತ್ರಕಾರರು, ಛಾಯಾಚಿತ್ರಕಾರರು ಇಲ್ಲಿ ಬೀಡುಬಿಟ್ಟಿದ್ದಾರೆ. ಕಲಾಮೇಳದಲ್ಲಿ ಪ್ರತ್ಯಕ್ಷವಾಗಿ ಶಿಲ್ಪ, ಚಿತ್ರ ರಚನೆಯೂ, ಪ್ರದರ್ಶನವೂ ನಡೆಯವುದು. ಕಲಾ ಮೇಳದ ಜತೆ ಜತೆಗೆ ಸ್ವದೇಶೀ ಮೇಳವನ್ನೂ ವ್ಯವಸ್ಥೆಗೊಳಿಸಲಾಗಿದೆ.
ನೂರು ಚದರಡಿಯ ಸ್ಟಾಲ್ ಗಳಲ್ಲಿ ಕರಕುಶಲ ವಸ್ತುಗಳು, ಸೀರೆಗಳು, ಮುಂತಾದವುಗಳ ಪ್ರದರ್ಶನವನ್ನು ಮಹಾನಗರಗಳಲ್ಲಿ ನಡೆಯುತ್ತಿರುವ ಚಿತ್ರಸಂತೆ ವಿದ್ಯಾಗಿರಿಗೂ ಬಂದಿದೆ. ಇದರಲ್ಲಿ ಉದಯೋನ್ಮುಖ ಕಲಾವಿದರು ರಚಿಸಿರುವ ಚಿತ್ರಗಳ ಮಾರಾಟ, ಬೊಂಬೆಗಳು ಮತ್ತು ಆ್ಯಂಟಿಕ್ ಮಹತ್ವವುಳ್ಳ ವಸ್ತುಗಳ ಪ್ರದರ್ಶನ ವ್ಯವಸ್ಥೆಗೊಳಿಸಲಾಗಿದೆ.
21 ಆಟಿಕೆಗಳ ಸ್ಟಾಲ್
ಕೊಲ್ಕತಾ ನಾತುಂಗ್ ರಾಮ್ ಆಟಿಕೆ, ಕೋಲ್ಕತಾ ಡೋಕ್ರ ಕಲೆ, ಕನ್ಯಾಕುಮಾರಿ ಮರದ ಆಟಿಕೆಗಳು, ಚೆನ್ನಪಟ್ಟಣ ಆಟಿಕೆಗಳು, ಮೈಸೂರು ಮಿನಿಯೇಚರ್ ಆರ್ಟ್ಸ್, ಮರದ ಶೈಕ್ಷಣಿಕ ಆಟಿಕೆಗಳು, ಕೈಯಲ್ಲೇ ತಯಾರಿಸಿದ ಬಟ್ಟೆಗಳು ಹೀಗೆ ಹಲವಾರು ಬಗೆಯ ಕಲಾತ್ಮಕ ವಸ್ತುಗಳು ಪ್ರದರ್ಶನ ಮಾರಾಟ ಮಳಿಗೆಗಳಿವೆ.
ಭಾರೀ ಜನಸಂದಣಿ
ಮಂಗಳವಾರ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ರಾಜ್ಯ, ಹೊರರಾಜ್ಯಗಳ ವಿವಿಧ ಜಿಲ್ಲೆಗಳಿಂದ ಸರಕಾರಿ, ಖಾಸಗಿ ಬಸ್‌ಗಳಲ್ಲಿ, ಇತರ ವಾಹನಗಳು ಜಾಂಬೂರಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು, ಶಿಕ್ಷಕರನ್ನು ಇಳಿಸುವಲ್ಲಿ, ನೋಂದಣಿ ವಿಭಾಗದಲ್ಲಿ ಭಾರೀ ಜನಸಂದಣಿ ಕಂಡು ಬಂದಿತು. ಮೂಡುಬಿದಿರೆಯಲ್ಲಿ ವಾಹನಗಳ ಓಡಾಟದ ಒತ್ತಡ ವಿಪರೀತವಾಗಿ ಕಂಡುಬಂದಿದೆ. ಮಾರುಕಟ್ಟೆ ಮತ್ತಿತರ ಕಡೆ ಮಂಗಳವಾರ ಸಂಜೆ ತರಾತುರಿಯಲ್ಲಿ ಡಾಮರು ಹಾಕುವ ಪ್ರಕ್ರಿಯೆ ಕಂಡುಬಂದಿವೆ.
ವಿದ್ಯುದ್ದೀಪಗಳಿಂದ ಶೃಂಗಾರ ವಿದ್ಯಾಗಿರಿಯ ಕಟ್ಟಡಗಳೆಲ್ಲ ವಿದ್ಯುದ್ದೀಪಗಳಿಂದ ಜಗಮಗಿಸುತ್ತಿವೆ. ವಿದ್ಯಾಗಿರಿ-ಮೂಡುಬಿದಿರೆ ಪೇಟೆ ಯಲ್ಲಿ ಹೊಸದಾಗಿ ಹಾಕಲಾದ ಹೈಮಾಸ್ಟ್ ದೀಪ ಸ್ತಂಬಗಳೂ ಬೆಳಕು ಚೆಲ್ಲುತ್ತಿವೆ. ಪೇಟೆಯಲ್ಲಿ ಕಟ್ಟಡಗಳು, ಹೊಟೇಲ್, ಸೊಸೈಟಿ ಸಹಿತ ಕಟ್ಟಡಗಳೂ ವರ್ಣರಂಜಿತ ವಿದ್ಯುದ್ದೀಪಗಳಿಂದ ಸಿಂಗರಿಸಲ್ಪಟ್ಟಿವೆ.
* ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಕ್ರಾಫ್ಟ್, ಆವೆಮಣ್ಣಿನ ಕಲಾಕೃತಿ, ಪೇಂಟಿಂಗ್, ಗಾಳಿಪಟ ತಯಾರಿಕೆ, ಗೂಡುದೀಪ ತಯಾರಿಕೆಯ ಬಗ್ಗೆ ತರಬೇತಿ. ಒಟ್ಟು 38 ಕೊಠಡಿಗಳಲ್ಲಿ ಇವನ್ನೆಲ್ಲ ವ್ಯವಸ್ಥೆಗೊಳಿಸಲಾಗಿದೆ.
* ಹತ್ತು ಕೊಠಡಿಗಳಲ್ಲಿ ಆಹ್ವಾನಿತ ಕಲಾವಿದರ ಕಲಾಕೃತಿ ಚಿತ್ರ ಪ್ರದರ್ಶನ.
* 7 ದಿನಗಳಲ್ಲಿ ರಾಷ್ಟ್ರ ಮಟ್ಟದ 50 ಮಂದಿ ಕಲಾವಿದರು ತಲಾ ಎರಡು ಚಿತ್ರಗಳ ಪ್ರದರ್ಶನ ಮಾಡಲಿದ್ದಾರೆ.
* 20 ವ್ಯಂಗ್ಯ ಚಿತ್ರಕಾರರ ಎರಡು ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.
* ಬುಡಕಟ್ಟು ಕಲಾವಿದರಿಗಾಗಿ 36 ಸ್ಟಾಲ್‌ಗಳನ್ನು ಹಾಕಲಾಗಿದೆ.
* ಚಿತ್ರ, ಕೈಯಲ್ಲಿ ಮಾಡಿದ ಬಟ್ಟೆ, ಆಟಿಕೆಗಳ ಪ್ರದರ್ಶನ ವಿಶೇಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.