ಮೂಡಬಿದಿರೆ: ಮೆಸ್ಕಾಂ ಜನಸಂಪರ್ಕ ಸಭೆ
Team Udayavani, Mar 25, 2018, 9:43 AM IST
ಮೂಡಬಿದಿರೆ : ರೈತರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ತೋಡುವುದಾದರೆ ಒಂದರಿಂದ ಇನ್ನೊಂದಕ್ಕೆ 500 ಮೀಟರ್ ಅಂತರವಿದ್ದಲ್ಲಿ ಮಾತ್ರ ಗ್ರಾಮ ಪಂಚಾಯತ್‌ನಿಂದ ನಿರಾಕ್ಷೇಪಣೆ ಪತ್ರ ಸಿಗುತ್ತದೆ. ಆದರೆ ಸರಕಾರವೇ ತೋ ಡುವ ಕೊಳವೆ ಬಾವಿಗೆ ಈ ಮಿತಿ ಇರುವುದಿಲ್ಲ. ಈ ತಾರತಮ್ಯ ಯಾಕೆ? ಎಂದು ರೈತ ಸಂಘದ ಮೂಡಬಿದಿರೆ ವಲಯ ಅಧ್ಯಕ್ಷ ಧನಕೀರ್ತಿ ಬಲಿಪ ಪ್ರಶ್ನಿಸಿದರು.
ಇಲ್ಲಿನ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಮೆಸ್ಕಾಂ ಇಲಾಖೆಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕೊಳವೆ ಬಾವಿ ತೋಡಲು ಸರಕಾರಕ್ಕೊಂದು ಖಾಸಗಿಯವರಿಗೆ ಕಾನೂನೇ? ಎಂದು ಪ್ರಶ್ನಿಸಿದರು. ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜಪ್ಪ ಉತ್ತರಿಸಿ, ಇದು ಸರಕಾರದ ನಿಯಮ. ಜಿಲ್ಲಾಧಿಕಾರಿಯವರೇ ಇದನ್ನು ಸರಿಪಡಿಸಬೇಕು. ಈ ವಿಷಯವನ್ನು ಅವರ ಗಮನಕ್ಕೆ ತರುತ್ತೇನೆ ಎಂದರು.
ನಿರಾಕ್ಷೇಪಣೆ ಪತ್ರ ನೀಡಿಲ್ಲ
ಒಂದು ಕೊಳವೆ ಬಾವಿಯಿಂದ ಇನ್ನೊಂದು ಕೊಳವೆ ಬಾವಿಗೆ 500 ಮೀಟರ್‌ಗಿಂತ ಹೆಚ್ಚು ಅಂತರವಿದ್ದರೂ ಪಡುಮಾರ್ನಾಡು ಪಿಡಿಒ ಜಿಪಿಎಸ್ ಅಳತೆಯ ಕಾರಣ ನೀಡಿ ನಿರಾಕ್ಷೇಪಣೆ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಬಲಿಪರು ಆರೋಪಿಸಿದರು. ವಿದ್ಯುತ್ ತಂತಿ, ಕಂಬಗಳಲ್ಲಿರುವ ದೋಷಗಳನ್ನು ಪತ್ತೆ ಹಚ್ಚಿ ಸರಿಪಡಿಸಿದರೆ ಮಳೆಗಾಲದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಂದ ವಿದ್ಯುತ್ ಕೈಕೊಡುವುದನ್ನು ತಪ್ಪಿಸಬಹುದು ಎಂದು ಪುರಸಭಾ ಸದಸ್ಯ ಅಲ್ವಿನ್ ಮೆನೇಜಸ್ ಸಲಹೆ ನೀಡಿದರು.
ವರದಿ ಬಳಿಕ ತೀರ್ಮಾನ
ಕರಿಂಜೆ ಮಾರಿಂಜಗುಡ್ಡೆಯಲ್ಲಿ ಬೇಟೆಗೆ ಹೋದ ವ್ಯಕ್ತಿಗಳಿಬ್ಬರು ವಿದ್ಯುತ್ ತಂತಿ ತಗಲಿ ಸಾವನಪ್ಪಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆಯಲ್ಲ ಎಂಬ ಬಲಿಪ ಅವರ ಪ್ರಶ್ನೆಗೆ ಉತ್ತರಿಸಿದ ಮಂಜಪ್ಪ, ನಮ್ಮ ವಿದ್ಯುತ್ ಪರಿವೀಕ್ಷಕರು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲಿದ್ದಾರೆ. ನಮ್ಮ ವರದಿ ಮತ್ತು ಪೊಲೀಸ್ ವರದಿಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾವೂರಿನ ಕಾರ್ಯನಿರ್ವಾಹಕ ಎಂಜಿನಿಯರ್ ದೀಪಕ್, ಮೂಡಬಿದಿರೆ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ ಮತ್ತಿತರರು ಉಪಸ್ಥಿತರಿದ್ದರು
ಸಭೆಯ ಬಗ್ಗೆ ಮಾಹಿತಿ ನೀಡಿ
ಜನಸಂಪರ್ಕ ಸಭೆಗೆ ಜನರಿಗೆ ಸರಿಯಾದ ಮಾಹಿತಿ ಸಿಗದೆ ಇರುವುದರಿಂದಲೇ ಸಭೆಗೆ ಜನರು ಬರುತ್ತಿಲ್ಲ ಎಂದು ಮೆಸ್ಕಾಂ ಸಲಹಾ ಸಮಿತಿ ಸದಸ್ಯೆ, ಪುರಸಭಾ ಸದಸ್ಯೆ ಸುಪ್ರಿಯಾ ಡಿ. ಶೆಟ್ಟಿ ಆರೋಪಿಸಿದರು. ಪ್ರತಿಕ್ರಿಯಿಸಿದ ಅಧಿಧೀಕ್ಷಕ ಎಂಜಿನಿಯರ್ ಮಂಜಪ್ಪ ಅವರು, ಸಭೆಗೆ ಮೊದಲು ಸಾರ್ವಜನಿಕರಿಗೆ ಮಾಹಿತಿ ನೀಡಿ ಹಾಗೂ ಎಲ್ಲ ಮೆಸ್ಕಾಂ ಕಚೇರಿ ಎದುರು ಬ್ಯಾನರ್‌ಗಳನ್ನು ಅಳವಡಿಸಬೇಕೆಂದು ಅಧಿ ಕಾರಿಗಳಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್