Moodbidri: ಪರಿಚಿತನಂತೆ ನಟಿಸಿ ಮಹಿಳೆಯ ಸರ ಎಗರಿಸಿದ!
Team Udayavani, Aug 5, 2024, 11:08 PM IST
ಮೂಡುಬಿದಿರೆ: ಪರಿಚಿತನಂತೆ ಮಹಿಳೆ ಜತೆ ಮಾತನಾಡಿ ಆಕೆಯ ಮೂರೂವರೆ ಪವನಿನ ಸರವನ್ನು ವ್ಯಕ್ತಿಯೊಬ್ಬ ಎಗರಿಸಿ ಪರಾರಿಯಾದ ಘಟನೆ ಸೋಮವಾರ ಮಧ್ಯಾಹ್ನ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅಶ್ವತ್ಥಪುರದಲ್ಲಿರುವ ತನ್ನ ಮಗಳ ಮನೆಗೆ ಹೋಗಲು ನಾರಾವಿಯಿಂದ ಬಂದಿದ್ದ ಮಧ್ಯ ವಯಸ್ಸಿನ ಮಹಿಳೆಯು ಬಸ್ಸಿನಿಂದ ಇಳಿದು ಬರುತ್ತಿದ್ದಾಗ ಚಿಕ್ಕಮ್ಮನೆಂದು ಕರೆದು ಪರಿಚಯಿಸಿಕೊಂಡಿದ್ದ ಆಗಂತುಕ, ಮಹಿಳೆಯ ಮನೆಯವರ ಪರಿಚಯವನ್ನೆಲ್ಲ ಹೇಳಿ ವಿಶ್ವಾಸ ಗಳಿಸಿಕೊಂಡ ಬಳಿಕ ಆಕೆಯನ್ನು ಹೊಟೇಲ್ಗೆ ಕರೆದುಕೊಂಡು ಹೋಗಿ ಚಹಾ ಕುಡಿಸಿದ್ದ.
ಅನಂತರ ಹೊರಗಡೆ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ವೀಕ್ಷಿಸಿ, ಅದೇ ಡಿಸೈನ್ ಮಾದರಿಯ ಸರ ತನ್ನ ಮಗಳಿಗೂ ಖರೀದಿಸಲಿದೆ ಇದನ್ನು ತೋರಿಸಿ ಬರುವುದಾಗಿ ಹೇಳಿದಾಗ, ಮಹಿಳೆಯು ಕುತ್ತಿಗೆಯಿಂದ ಸರ ತೆಗೆದುಕೊಟ್ಟಿದ್ದಾರೆ. ಅಲ್ಲದೆ ಹಣ್ಣು ಹಂಪಲು ತರುವುದಾಗಿ ಮಹಿಳೆಯಿಂದಲೇ 1,000 ರೂ. ತೆಗೆದುಕೊಂಡು ಹೋಗಿದ್ದಾನೆ. ತುಂಬಾ ಹೊತ್ತು ಆತ ಬಾರದೆ ಇದ್ದಾಗ ಮೋಸ ಹೋದುದು ಗೊತ್ತಾಯಿತು. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.