ಮೂಡುಬಿದಿರೆ: ಕೋಟಿ ಚೆನ್ನಯ ಜೋಡುಕರೆ ಕಂಬಳ ವೀಕ್ಷಿಸಿದ ಮುಖ್ಯಮಂತ್ರಿ
Team Udayavani, Dec 26, 2022, 1:19 AM IST
ಮೂಡುಬಿದಿರೆ: ಕಂಬಳ ಗ್ರಾಮೀಣ ಜನರ ಏಕತೆ ಮತ್ತು ಕರಾವಳಿಯ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ಕಲೆ. ಸಿಂಹವನ್ನೂ ಬೆದರಿಸಬಲ್ಲ ಕೋಣಗಳನ್ನು ರೈತ ತನ್ನ ಬುದ್ಧಿವಂತಿಕೆಯಿಂದ ಪಳಗಿಸಿ ಕ್ರೀಡೆಗೆ ಬಳಸುತ್ತಿರುವುದು ವಿಶೇಷ. ಕಂಬಳ ಸೂರ್ಯ ಚಂದ್ರ ಇರುವಷ್ಟು ಕಾಲ ಉಳಿಯುವುದು ಖಂಡಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಗರಿಸಿದರು.
ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಆಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ವೀಕ್ಷಿಸಲು ರವಿವಾರ ಮೂಡುಬಿದಿರೆಗೆ ಆಗಮಿಸಿದ್ದ ಅವರು ಅ ಬಳಿಕ ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌ಅವರ ವಿಶೇಷ ಕೋರಿಕೆಯನ್ನು ಮನ್ನಿಸಿ, ಒಂಟಿಕಟ್ಟೆಯಲ್ಲಿ ನಡೆಯುತ್ತಿರುವ, ಎರಡನೇ ದಿನ ರಾತ್ರಿಯವರೆಗೂ ಮುಂದುವರಿಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಭೇಟಿ ಕಂಬಳವನ್ನು ವೀಕ್ಷಿಸಿ ಖುಷಿಪಟ್ಟರು.
ಕಾಂತಾರ ಸಿನೆಮಾದ ಬಂದ ಬಳಿಕ ಗ್ರಾಮೀಣ ಕ್ರೀಡೆ ಕಂಬಳವು ವಿಶ್ವಕ್ಕೆ ಪರಿಚಯವಾಗಿದೆ. ಭವಿಷ್ಯದಲ್ಲಿ ಕಂಬಳ ಭಾರತದ ಎಲ್ಲಾ ರಾಜ್ಯಗಳಲ್ಲೂ ವಿದೇಶಗಳಲ್ಲೂ ನಡೆಯುವಂತಾದರೆ ಅಚ್ಚರಿಯಲ್ಲ ಎಂದು ಹೇಳಿದರು.
ವಾಜಪೇಯಿಗೆ ಪುಷ್ಪನಮನ ಮುಖ್ಯಮಂತ್ರಿಯವರು ವಾಜಪೇಯಿ ಅವರ ಹುಟ್ಟುದಿನದ ಪ್ರಯುಕ್ತ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು.
ಕಂಬಳ ಸಮಿತಿ ಗೌರವ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಸಿಎಂಗೆ ಆಂಶಿಕವಾಗಿ ಬೆಳ್ಳಿ ಮಡಾಯಿಸಿದ ಕೆತ್ತನೆಯ ನೊಗ ಮತ್ತು ಕಂಬಳದ ಬೆತ್ತ ನೀಡಿ ಗೌರವಿಸಿದರು. ಬಿಜೆಪಿ ರಾ.ಪ್ರ. ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಸುನಿಲ್ ಕುಮಾರ್, ನಾಗೇಶ್,ನಾರಾಯಣ ಗೌಡ, ಕಂಬಳ ಸಮಿತಿ ಕೋಶಾಧಿ ಕಾರಿ ಭಾಸ್ಕರ ಕೋಟ್ಯಾನ್, ಪ್ರ. ಕಾರ್ಯ ದರ್ಶಿ ಗುಣಪಾಲ ಕಡಂಬ, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.