ಮೂಡುಬಿದಿರೆಯಲ್ಲಿ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಜಾಂಬೂರಿ: ಬೃಹತ್‌ ಕೃಷಿ ಲೋಕ ದರ್ಶನ


Team Udayavani, Dec 20, 2022, 6:25 AM IST

ಮೂಡುಬಿದಿರೆಯಲ್ಲಿ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಜಾಂಬೂರಿ: ಬೃಹತ್‌ ಕೃಷಿ ಲೋಕ ದರ್ಶನ

ಮೂಡುಬಿದಿರೆ: ಇದೇ ತಿಂಗಳ 21 ರಿಂದ 27 ರವರೆಗೆ ನಡೆಯುವ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿಯಲ್ಲಿ ಕೃಷಿ ಮೇಳವೂ ನ ಡೆಯಲಿದೆ.

ದೇಶದ ಮೂರನೇ ಎರಡರಷ್ಟು ಜನ ಕೃಷಿಯಲ್ಲಿ ತೊಡಗಿಕೊಂಡಿದ್ದು, ಜಾಂಬೂರಿಗೆ ದೇಶ ವಿದೇಶಗಳಿಂದ ಬರುವ ಸುಮಾರು 50 ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಕೃಷಿಯನ್ನು ಪರಿಚಯಿಸುವ ಕೃಷಿಕರ ಬದುಕಿನ ಬಗೆಯನ್ನು ತಿಳಿಸುವ ಉದ್ದೇಶವಿದೆ.

4 ಎಕ್ರೆ ತರಕಾರಿಗೆ ಮೀಸಲು
ಒಟ್ಟು 12 ಎಕ್ರೆ ಪ್ರದೇಶದಲ್ಲಿ 4 ಎಕ್ರೆಯನ್ನು ಕೇವಲ ತರಕಾರಿ ಬೆಳೆ ಯಲು ಮೀಸಲು. ಮೂರ್‍ನಾಲ್ಕು ತಿಂಗಳ ಹಿಂದಿನಿಂದಲೇ ತಯಾರಿ ನಡೆದಿದ್ದು, ಕುಂಬಳಕಾಯಿ, ಚೀನಿ ಕಾಯಿ, ಸೋರೆಕಾಯಿ, ಹಾಗಲ ಕಾಯಿ, ಮುಳ್ಳು ಸೌತೆ, ಅಡುಗೆ ಸೌತೆ, ಹೀರೆಕಾಯಿ, ಪಡುವಲ ಕಾಯಿ, ಕನ್ನಡ ಪೀರೆ (ಹೀರೆ), ಬದನೆ, ಬೆಂಡೆ, ಸಿಮ್ಲಾ ಮೆಣಸು, ದೊಣ್ಣೆ ಮೆಣಸು, ವಿವಿಧ ಬಗೆಯ ಸೊಪ್ಪು, ನವಿಲು ಕೋಸು, ಟೊಮೇಟೊ, ತೊಂಡೆ ಕಾಯಿ, ಜೋಳದ ತೆನೆ ಇತ್ಯಾದಿ ಈಗಾಗಲೇ ಬೆಳೆದು ಕಂಗೊಳಿಸುತ್ತಿವೆ.

ಸಾಂಪ್ರದಾಯಿಕ ಭತ್ತದ 550 ತಳಿಗಳು ಇಲ್ಲಿವೆ. ವಿದೇಶಿ ತರಕಾರಿಗಳಲ್ಲಿ ಲೆಟ್ಯುಸ್‌, ಬ್ರುಕೋಲಿ ಸೊಪ್ಪು, ಝುಚಿನಿ, ಪಂಪ್‌ ಕಿನ್‌, 6 ಬಗೆಯ ಸೋರೆ ಕಾಯಿ, 70 ವಿಧದ ಬಾಳೆ, 700 ದೇಶೀಯ ಭತ್ತದ ತಳಿಗಳು, ಸಿರಿ ಧಾನ್ಯ, ಎಣ್ಣೆ ಕಾಳುಗಳು, 40 ಬಗೆಯ ಪುರಾತನ ಸಾಂಪ್ರದಾಯಿಕ ಗೆಡ್ಡೆ – ಗೆಣಸು, 150ಕ್ಕೂ ಅಧಿ ಕ ತೆಂಗಿನ ಕಾಯಿ ಕಲಾಕೃತಿಗಳೂ ಸಿದ್ಧಗೊಂಡಿವೆ.

200 ಬಗೆಯ ಆಯುರ್ವೇದೀಯ ಔಷಧ ಭರಿತ ಹಣ್ಣು ಮತ್ತು ಕಾಯಿ, 20 ಬಗೆಯ ಅಡಿಕೆಗಳು, 110 ಬಗೆಯ ವಿದೇಶಿ ಹಣ್ಣುಗಳಲ್ಲದೇ, 100 ಬಗೆಯ ಅಕ್ಕಿ, ತರಕಾರಿ ಮತ್ತು ಹಣ್ಣುಗಳಲ್ಲಿ ಕರಾವಳಿ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು ಇರಲಿವೆ. ಗುಲಾಬಿ, ಸೂರ್ಯಕಾಂತಿ, ಜೀನ್ಯಾ, ಡೇಲಿಯಾ ಸೇರಿದಂತೆ ವಿವಿಧ ಬಗೆಯ ಹೂಗಳೂ ಇರಲಿವೆ.

600 ಮಳಿಗೆ ಗಳಲ್ಲಿ ಪ್ರದರ್ಶನ
ಸುಮಾರು 600 ಮಳಿಗೆಗಳಲ್ಲಿ ಯಂತ್ರೋಪಕರಣಗಳು, ನರ್ಸರಿ, ಕೃಷಿಗೆ ಪೂರಕವಾದ ಗುಡಿ ಕೈಗಾರಿಕೆ ಅಡಿಕೆ ಸುಲಿಯುವ ಯಂತ್ರ, ಬಹುಬಗೆಯ ಬುಟ್ಟಿ, ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಸಂಯೋಜಿಸಲಾಗಿದೆ.

ಜಾಂಬೂರಿಗಾಗಿ ಬೃಹತ್‌ ಗಾಳಿಪಟ!
ಮಂಗಳೂರು, ಡಿ. 19: ವಿಶ್ವ ಸಾಂಸ್ಕೃತಿಕ ಜಾಂಬೂರಿಯಲ್ಲಿ ಟೀಂ ಮಂಗಳೂರು ತಂಡದಿಂದ ಗಾಳಿಪಟ ಪ್ರಾತ್ಯಕ್ಷಿಕೆ ನಡೆಯಲಿದ್ದು, ಬೃಹತ್‌ ಗಾಳಿಪಟ ಸಿದ್ಧಗೊಂಡಿದೆ.
50 ಅಡಿ ಎತ್ತರ ಮತ್ತು 16 ಅಡಿ ಅಗಲದ ಭಾರತೀಯ ಸಾಂಪ್ರ ದಾಯಿಕ ಗಾಳಿಪಟ ಇದು. ಕೊಡೆ ಬಟ್ಟೆಯಿಂದ ತಯಾರಿಸಲಾಗಿದೆ. ಗಾಳಿಪಟದ ಮೇಲ್ಮೈಯಲ್ಲಿ ಆಯ್ದ ಕೆಲವು ಚಿತ್ರಗಳಿಗೆ ಬಣ್ಣ ಹಚ್ಚಲಾಗಿದೆ. ಉಳಿದವುಗಳಿಗೆ ಪ್ರಾತ್ಯಕ್ಷಿಕೆ ಸಂದರ್ಭ ಮಕ್ಕಳೇ ಬಣ್ಣ ತುಂಬಲಿದ್ದಾರೆ.

ಗೋಕುಲ ಕಲ್ಯಾಣ ಮಂಟಪದಲ್ಲಿ ಸೋಮವಾರ ಗಾಳಿಪಟಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸ ನಡೆಯಿತು. ಟೀಂ ಮಂಗಳೂರು ಗಾಳಿಪಟ ತಂಡದ ಸದಸ್ಯರು ಮತ್ತು ಕಲಾವಿದರಾದ ದಿನೇಶ್‌ ಹೊಳ್ಳ,
ನವೀನ್‌ ಅಡ್ಕರ್‌, ಸತೀಶ್‌ ರಾವ್‌, ಭುವನ್‌ ಪಿ.ಜಿ., ಸಪ್ನಾ ನೊರೋನ್ಹ, ಪ್ರಾಣೇಶ್‌ ಕುದ್ರೋಳಿ, ಪ್ರೀತಮ್‌, ಅನುರಾಧಾ, ತಂಡದ ಮುಖ್ಯಸ್ಥ ಸರ್ವೇಶ್‌ ರಾವ್‌, ಅರುಣ್‌ ಕುಮಾರ್‌, ರವಿ ಅರಸಿನಮಕ್ಕಿ, ಶೇಖರ್‌ ಶಿಶಿಲ, ಅವಿನಾಶ್‌ ಭಿಡೆ ಅರಸಿನಮಕ್ಕಿ, ಧಾರಿಣಿ ಮೊದಲಾದವರ ಶ್ರಮ ವಿದು. ನಾಗಬನ, ಆಟಿಕಳಂಜ, ಗುತ್ತಿನಮನೆ, ತುಪ್ಪೆ, ಕೋಳಿ ಅಂಕ, ಯಕ್ಷಗಾನ, ಕಂಬಳ, ರಥೋತ್ಸವ ಮೊದಲಾದ ಚಿತ್ರಗಳನ್ನು ಬಿಡಿಸಲಾಗಿದೆ. ಇದನ್ನು ಹಾರಿ ಸಲಾಗದು. ಬದಲಾಗಿ ಆಳ್ವಾಸ್‌ ಸಂಸ್ಥೆಯಲ್ಲಿ ಜಾಂಬೂರಿಯ ನೆನಪಿಗಾಗಿ ಪ್ರದರ್ಶನಕ್ಕೆ ಇರಿಸಲು ಸಂಸ್ಥೆಯ ಮುಖ್ಯಸ್ಥರಾದ ಡಾ| ಎಂ. ಮೋಹನ ಆಳ್ವ ಉದ್ದೇಶಿಸಿದ್ದಾರೆ.

ಪ್ರಾತ್ಯಕ್ಷಿಕೆ
ದಿನಕ್ಕೆ 200ರಂತೆ 1 ಸಾವಿರ ಮಕ್ಕಳಿಗೆ ಗಾಳಿಪಟದ ಪ್ರಾತ್ಯಕ್ಷಿಕೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಮಕ್ಕಳು ತಯಾರಿಸಿದ ಗಾಳಿಪಟಗಳನ್ನು ಹಾರಿಸುವರು. ಜಾಂಬೂರಿಯ ನೆನಪಿಗಾಗಿ ಬೃಹತ್‌ ಗಾಳಿಪಟವನ್ನೂ ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ಟೀಂ ಮಂಗಳೂರು ಸದಸ್ಯ ದಿನೇಶ್‌ ಹೊಳ್ಳ .

ಟಾಪ್ ನ್ಯೂಸ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.