ಎಚ್ಚೆತ್ತ ಪುರಸಭೆ; ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸೂಚನೆ
ಮೂಡುಬಿದಿರೆ ದಿನವಹಿ ಮಾರುಕಟ್ಟೆ: ಅವ್ಯವಸ್ಥೆ, ಮೂಲ ಸೌಲಭ್ಯಗಳ ಕೊರತೆ
Team Udayavani, Jan 9, 2023, 5:50 AM IST
ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ 5 ವರ್ಷಗಳಿಂದಲೂ ಬೀಡು ಬಿಟ್ಟಿರುವ ಪುರಸಭೆ ದಿನವಹಿ ಮಾರುಕಟ್ಟೆಯ ಅವ್ಯವಸ್ಥೆಗಳು, ಮೂಲ ಸೌಲ ಭ್ಯಗಳ ಕೊರತೆ ಮೊದಲಾದ ವಿಷಯಗಳ ಬಗ್ಗೆ ಪುರಸಭೆ ಕೊನೆಗೂ ಎಚ್ಚೆತ್ತಂತಿದೆ.
ಶುಕ್ರವಾರದ ಸಂತೆಯ ದಿನ ಹೊರ ಜಿಲ್ಲೆಗ ಳಿಂದಲೂ ವ್ಯಾಪಾರಿಗಳು ಬಂದು ಸ್ಪರ್ಧಾತ್ಮಕವಾಗಿ ವ್ಯಾಪಾರ ಮಾಡುತ್ತ ರಾತ್ರಿ ತಮ್ಮ ತಾತ್ಕಾಲಿಕ ಶಿಬಿರಗಳನ್ನು ಬಿಚ್ಚಿ ಹೊರಡುವಾಗ ಇಡೀ ದಿನ ಹೊರಚೆಲ್ಲಿದ ತ್ಯಾಜ್ಯ ವಸ್ತುಗಳನ್ನು ಹಾಗೆಯೇ ಬಿಟ್ಟು ಹೋಗುವುದನ್ನು, ತರಕಾರಿ ತ್ಯಾಜ್ಯವನ್ನು ಜಾನುವಾರುಗಳು ಮೆದ್ದು (ತಿನ್ನಲಾಗದ್ದನ್ನು ಹಾಗೆಯೇ ಬಿಟ್ಟು) ಸೆಗಣಿ ಹಾಕಿ, ಗಂಜಳ ಸುರಿಸಿ ಧನ್ಯವಾದ ಸೂಚಿಸುವುದನ್ನು, ಮರು ದಿನ ಪುರಸಭೆಯ ಕಾರ್ಮಿಕರು ಬರುವವರೆಗೆ ಇಡೀ ಮಾರುಕಟ್ಟೆ ಅಂಗಣದಲ್ಲಿ ಪ್ಲಾಸ್ಟಿಕ್ ಚೀಲಗಳು ರಾಶಿ ರಾಶಿಯಾಗಿ ಬಿದ್ದು ಕೊಂಡು ಗಾಳಿಗೆ ಹಾರಾಡುತ್ತಿರುವುದರ ಬಗ್ಗೆ ಉದಯವಾಣಿ ಸುದಿ ನ ದಲ್ಲಿ ಜ. 2ರಂದು ವರದಿ ಪ್ರಕಟವಾಗಿತ್ತು. ಈ ವರದಿಗೆ ಈಗ ಸ್ಪಂದನೆ ವ್ಯಕ್ತ ವಾ ಗಿದೆ. ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು ಎಂ., ಪರಿಸರ ಎಂಜಿ ನಿ ಯರ್ ಶಿಲ್ಪಾ ಎಸ್., ಕಂದಾಯ ನಿರೀಕ್ಷಕ ಅಶೋಕ ಸಹಿತ ಸಿಬಂದಿ ಜ. 6ರಂದು ಸಂತೆ ವ್ಯಾಪಾರಿಗಳಿಗೆ ತ್ಯಾಜ್ಯ ವಿಲೇವಾರಿಯ ಬಗ್ಗೆ ಸೂಚನೆ, ಎಚ್ಚರಿಕೆ ನೀಡುವ ಕ್ರಮ ಕೈಗೊಂಡರು.
ಇದರ ಪರಿಣಾಮವಾಗಿ ಮರುದಿನ ಶನಿವಾರ ಮುಂಜಾನೆ ಮಾರುಕಟ್ಟೆ ಪ್ರಾಂಗಣನ್ನು ಪರಿವೀಕ್ಷಿಸಿದಾಗ ತ್ಯಾಜ್ಯ ವಸ್ತುಗಳ ಪ್ರಮಾಣ ಕೊಂಚ ಕಡಿಮೆಯಾಗಿ ರುವುದು ಕಂಡು ಬಂದಿದೆ. ಆದರೆ ವರದಿ ಯಲ್ಲಿ ಸೂಚಿಸಲಾಗಿರುವಂತೆ, ಹಸಿ, ಒಣ ಕಸ ಮತ್ತು ನಿರುಪಯುಕ್ತ ತ್ಯಾಜ್ಯ ವಸ್ತುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ ವ್ಯವಸ್ಥೆ ಮಾಡಿಲ್ಲದೇ ಇರುವುದರಿಂದಾಗಿ ನಿರೀಕ್ಷಿತ ಫಲಿತಾಂಶ ಕಂಡುಬಂದ ಹಾಗಿಲ್ಲ. ಹಾಗೆ ಮಾಡಲು ಏನು ಸಮಸ್ಯೆ ಎಂಬುದು ತಿಳಿದಿಲ್ಲ.
ಇದರಲ್ಲಿ ಪುರಸಭೆಯದ್ದೂ ಸಂತೆ ವಹಿಸಿಕೊಂಡ ಗುತ್ತಿಗೆದಾರರದ್ದೂ ಹೊಣೆಗಾರಿಕೆ ಇರುವುದನ್ನು ತಳ್ಳಿಹಾಕು ವಂತಿಲ್ಲ. ಇದಕ್ಕೊಂದು ಮುಕ್ತಿ ಕಾಣಿಸಿದರೆ ಪೌರ ಕಾರ್ಮಿಕರ ಕೆಲಸ ಹಗುರವಾಗುವುದ ರಲ್ಲಿ ಸಂಶಯವಿಲ್ಲ. ಸ್ವತ್ಛ ಮೂಡುಬಿದಿರೆ ಕುರಿತಾಗಿ ಜಾಥಾ, ಸ್ಲೋಗನ್‌ಗಳ ದನಿ ಮುಗಿಲೆತ್ತರಕ್ಕೆ ಚಿಮ್ಮಲಿ; ಅದಕ್ಕೂ ಮುನ್ನ ಮೊದಲು ಸಂತೆ ಪ್ರಾಂಗಣ ಸ್ವತ್ಛವಾಗಿರಲಿ. ಮುಂದಿನ ಸಂತೆ ದಿನಗಳಲ್ಲಿ ದನಗಳಿಗೆ ಕೆಲಸವಿಲ್ಲದಿರಲಿ, ಶೂನ್ಯ ತ್ಯಾಜ್ಯ ಸಂತೆಯ ಕನಸು ನನಸಾಗಲಿ.
ಎಚ್ಚರಿಕೆ ನೀಡಿದ್ದೇವೆ
“ಜ. 6ರ ಶುಕ್ರವಾರ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಪರಿಣಾಮವಾಗಿ ತ್ಯಾಜ್ಯ ಕಡಿಮೆಯಾಗಿದೆ. ಕೆಲವರು ಗೋಣಿ ಚೀಲದಲ್ಲಿ ಹಾಕಿಟ್ಟಿದ್ದಾರೆ. ತ್ಯಾಜ್ಯ ವಿಂಗಡಣೆಗೆ ಕ್ರಮವಹಿಸಲು ಸದ್ಯ ಆಗಿಲ್ಲ. ಮುಂದಿನ ವಾರ ಗುತ್ತಿಗೆದಾರರ ಮೂಲಕ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು’
-ಪ್ರಸಾದ್ ಕುಮಾರ್, ಪುರಸಭೆ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.