ರಾಜ್ಯ ಹೆದ್ದಾರಿಯಂಚಿನಲ್ಲಿದೆ 100ಕ್ಕೂ ಹೆಚ್ಚು ಅಪಾಯಕಾರಿ ಮರಗಳು !

ಕಿನ್ನಿಗೋಳಿಯಿಂದ ಮೂಲ್ಕಿ ಕಾರ್ನಾಡ್‌ವರೆಗಿನ ರಸ್ತೆ

Team Udayavani, Apr 25, 2019, 6:08 AM IST

24KAMATH1

ರಸ್ತೆಯಂಚಿನಲ್ಲಿರುವ ಅಪಾಯಕಾರಿ ಮರ.

ಕಿನ್ನಿಗೋಳಿ: ಇಲ್ಲಿಂದ ಮೂಲ್ಕಿ ಕಾರ್ನಾಡುವರೆಗಿನ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಕಾರಣ ಹೆದ್ದಾರಿಯೇನೋ ಡಾಮರೀಕರಣಗೊಂಡಿದೆ. ಆದರೆ ಹೆದ್ದಾರಿ ಬದಿ ಇರುವ 100ಕ್ಕೂ ಹೆಚ್ಚು ಮರಗಳನ್ನು ಕಡಿ ಯದೇ ಹಾಗೇ ಬಿಟ್ಟಿರುವುದರಿಂದ ಸಂಚಾರ ಸಂಚಕಾರವಾ ಗುವ ಅಪಾಯವಿದೆ.

ಕಿನ್ನಿಗೋಳಿಯಿಂದ ಮೂಲ್ಕಿ ಕಾರ್ನಾಡ್‌ ವರೆಗಿನ ರಾಜ್ಯ ಹೆದ್ದಾ ರಿಯನ್ನು 14.8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸ ಲಾಗಿದೆ. ರಸ್ತೆ ಕಾಮಗಾರಿ ಆರಂಭಗೊಂಡು ಎರಡು ವರ್ಷ ಕಳೆದರೂ ಮಳೆಗಾಲ, ತಾಂತ್ರಿಕ ತೊಂದರೆಯಿಂದಾಗಿ ಹಿನ್ನ ಡೆಯಾಗಿತ್ತು. ಆದರೆ ಈಗ ಹೆದ್ದಾರಿ ಡಾಮರೀಕರಣ ಗೊಂಡಿದೆ. ಆದರೆ ರಸ್ತೆಯ ಅಂಚಿನಲ್ಲಿ ಹೆದ್ದಾರಿಗೆ ತಾಗಿಕೊಂಡೇ ಇರುವ ಮರಗಳು ಮಾತ್ರ ಹಾಗೇ ಇವೆ.

ಅಪಾಯಕಾರಿ ಮರಗಳು
ಹೆದ್ದಾರಿಗೆ ತಾಗಿಕೊಂಡೇ ಸುಮಾರು 100ಕ್ಕೂ ಹೆಚ್ಚು ಮರಗ ಳಿದ್ದು, ವೇಗವಾಗಿ ಬರುವ ವಾಹನ ರಸ್ತೆಯಂಚಿಗೆ ಹೋದರೆ ಅಥವಾ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ತೆರಳಿದರೆ ಮರಕ್ಕೆ ಢಿಕ್ಕಿಯಾಗುವ ಸಾಧ್ಯತೆ ಇದೆ. ಅಲ್ಲದೇ ಮಳೆಗಾಲ ಆರಂಭ ವಾ ದರೆ ಮರದ ಗೆಲ್ಲುಗಳು ರಸ್ತೆಗೆ ಬೀಳುವ ಅಪಾ ಯವೂ ಇದೆ. ಹೀಗಾಗಿ ಈ ಮರಗಳನ್ನು ಕೂಡಲೇ ತೆರವುಗೊಳಿಸಬೇಕಾಗಿದೆ.

ಕಿನ್ನಿಗೋಳಿ ಪೇಟೆಯಲ್ಲಿ ಚರ್ಚ್‌ ಸಮೀಪದ ಕೆಳಭಾಗದಿಂದ ಭಟ್ರಕೋಡಿ ಯ ತನಕ ಸುಮಾರು 500 ಮೀಟರ್‌ ರಸ್ತೆಯ ಎರಡೂ ಬದಿ ಕಾಂಕ್ರೀಟ್‌ ಚರಂಡಿ ನಿರ್ಮಿಸಲಾಗಿದೆ. ಚಪ್ಪಡಿ ಹಾಸಿ ಫ‌ುಟ್‌ಪಾತ್‌ ನಿರ್ಮಾಣ ಕಾರ್ಯವೂ ಭಾಗಶಃ ಮುಕ್ತಾಯಗೊಂಡಿದೆ.

ವಿದ್ಯುತ್‌ ಕಂಬಗಳು ತೆರವು
ಮೂರು ಕಾವೇರಿಯಿಂದ ಕಾರ್ನಡ್‌ ತನಕ ರಸ್ತೆಯ ಅಂಚಿನಲ್ಲಿ ಇದ್ದ 160 ವಿದ್ಯುತ್‌ ಕಂಬಗಳ ತೆರವು ಆಗಬೇಕಾಗಿದ್ದು ಅದರಲ್ಲಿ ಹೆಚ್ಚಿನ ವಿದ್ಯುತ್‌ ಕಂಬಗಳು ತೆರವುಗೊಂಡಿವೆ. ಆದರೆ ಅಗತ್ಯವಾಗಿ ರಸ್ತೆ ಅಗಲೀಕರಣಕ್ಕೆ ಪೂರಕವಾಗಿ 60 ಮರಗಳನ್ನು ಕಡಿಯಲೇಬೇಕಾಗಿತ್ತು. ತಾಂತ್ರಿಕ ತೊಂದರೆಯಿಂದಾಗಿ ಈ ಕೆಲಸ ಬಾಕಿ ಉಳಿದಿದೆ. ಸುಮಾರು 100ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸುವ ಬಗ್ಗೆ ಸರ್ವೆ ನಡೆಸಲಾಗಿದೆ. ಹೆಚ್ಚಿನ ಕಡೆಗಳಲ್ಲಿ ಸರಕಾರಿ ಜಾಗ ಇದೆ. ಕೆಲವೂಂದು ಕಡೆಗಳಲ್ಲಿ ಖಾಸಗಿ ಜಾಗವಿದೆ. ಅವರ ಸಹಕಾರ ವನ್ನೂ ಕೋರಲಾಗಿದೆ.

ಮಾತುಕತೆ ನಡೆದಿದೆ
ಕಿನ್ನಿಗೋಳಿಯಿಂದ ಕಾರ್ನಾಡ್‌ ಜಂಕ್ಷನ್‌ ವರೆಗಿನ ರಸ್ತೆಯ ಇಕ್ಕಲಗಳಲ್ಲಿ ರಸ್ತೆಯ ಅಂಚಿನಲ್ಲಿರುವ ಮರಗಳನ್ನು ಕಡಿಯಲೇಬೇಕಾಗಿದೆ. ಸರಕಾರಿ ಮಟ್ಟದಲ್ಲಿ ಮಾತುಕತೆ ನಡೆದಿದೆ. ಚುನಾವಣೆ ಹಾಗೂ ಕೆಲವೊಂದು ತಾಂತ್ರಿಕ ಕಾರಣದಿಂದ ಹಿನ್ನಡೆಯಾಗಿದೆ.
 - ಕೆ.ಸಿ. ಮಾಥ್ಯೂ,
ಕಿನ್ನಿಗೋಳಿ ವಲಯ ಅರಣ್ಯಾಧಿಕಾರಿ

-ರಘುನಾಥ ಕಾಮತ್‌ ಕೆಂಚನಕೆರೆ

ಟಾಪ್ ನ್ಯೂಸ್

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.