10 ವರ್ಷಗಳ ಅವಧಿಯಲ್ಲಿ 55ಕ್ಕೂ ಹೆಚ್ಚು ಕಡೆ ಕಾಂಕ್ರೀಟ್ ರಸ್ತೆ ಅಗೆತ!
Team Udayavani, Aug 25, 2021, 3:40 AM IST
ಮಹಾನಗರ: ನಗರದ ಕಂಕನಾಡಿ ಯಿಂದ ನಂದಿಗುಡ್ಡ ಜಂಕ್ಷನ್ ನಡುವಣ ಸುಮಾರು 2 ಕಿ.ಮೀ. ಉದ್ದದ ರಸ್ತೆಯನ್ನು ಈ ರಸ್ತೆ ಕಾಂಕ್ರೀಟ್ ಕಾಮಗಾರಿಗೊಂಡ ಬಳಿಕ ಕಳೆದ 10 ವರ್ಷಗಳ ಅವಧಿಯಲ್ಲಿ ಅಲ್ಲಲ್ಲಿ ವಿವಿಧ ಕಾರಣ ಗಳಿಗಾಗಿ 55ಕ್ಕೂ ಹೆಚ್ಚು ಕಡೆ ಅಗೆಯಲಾಗಿದೆ.
ವೆಲೆನ್ಸಿಯಾ ಸಮೀಪದ ರೋಶಿನಿ ನಿಲಯದ ಬಳಿ ಇತ್ತೀಚೆಗಷ್ಟೇ ಒಳಚರಂಡಿ ಮತ್ತು ನೀರಿನ ಪೈಪ್‌ಲೈನ್‌ಗಾಗಿ ಅಗೆದಿದ್ದು, ಇದೀಗ ಈ ರಸ್ತೆಯಲ್ಲಿ ಫಾದರ್ ಮುಲ್ಲರ್ಸ್ ಆಸ್ಪತ್ರೆ ಎದುರಿನ ಆಟೋ ರಿಕ್ಷಾ ಪಾರ್ಕಿಂಗ್ ಬಳಿ ಅಗೆಯಲಾಗಿದೆ. ಕಳೆದ ತಿಂಗಳಲ್ಲಿ ಇದೇ ಜಾಗದಲ್ಲಿ ಎರಡು ಕಡೆ ರಸ್ತೆಯನ್ನು ಬೇರೆ ಬೇರೆ ಕಾರಣಗಳಿಗಾಗಿ ಅಗೆಯಲಾಗಿತ್ತು.
ಕಂಕನಾಡಿಯಿಂದ ಮೋರ್ಗನ್ಸ್‌ಗೆàಟ್‌ವರೆ ಗಿನ 2.5 ಕಿ.ಮೀ. ರಸ್ತೆಯನ್ನು 10 ವರ್ಷಗಳ ಹಿಂದೆ ವಿಸ್ತರಣೆ ಮಾಡಿ ಚತುಷ್ಪಥ ರಸ್ತೆಯನ್ನಾಗಿ ಅಭಿ ವೃದ್ಧಿಪಡಿಸಿ ಕಾಂಕ್ರೀಟ್ ಮಾಡಲಾಗಿತ್ತು. ಅದ ರಲ್ಲೂ ವಿಶೇಷವಾಗಿ ಕಂಕನಾಡಿ- ನಂದಿಗುಡ್ಡ ಜಂಕ್ಷನ್ ನಡುವಣ 2 ಕಿ.ಮೀ. ರಸ್ತೆಗೆ ಆಧುನಿಕ ಬೀದಿ ದೀಪ ವ್ಯವಸ್ಥೆ ಕಲ್ಪಿಸಿ ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಈ ಮಾದರಿ ರಸ್ತೆಯ ಎರಡೂ ರಸ್ತೆಗಳಲ್ಲಿ (ಕಂಕನಾಡಿಯಿಂದ ನಂದಿಗುಡ್ಡ ಜಂಕ್ಷನ್ ವರೆಗಿನ ರಸ್ತೆ ಮತ್ತು ನಂದಿಗುಡ್ಡ ಜಂಕ್ಷನ್‌ನಿಂದ ಕಂಕನಾಡಿ ವರೆಗಿನ ರಸ್ತೆ) ವಿವಿಧ ಉದ್ದೇಶಗಳಿಗಾಗಿ ಅಲ್ಲಲ್ಲಿ ಅಗೆದು ತೇಪೆ ಹಚ್ಚಿದ ಗುರುತು ಕಂಡುಬರುತ್ತಿವೆ.
ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆ ಮತ್ತು ದುರಸ್ತಿ, ಒಳ ಚರಂಡಿ ಸೋರಿಕೆ ಮತ್ತು ದುರಸ್ತಿ, ಮ್ಯಾನ್‌ಹೋಲ್ ನಿರ್ಮಾಣ ಮತ್ತು ದುರಸ್ತಿ ಮೊದಲಾದ ವಿವಿಧ ಉದ್ದೇಶಗಳಿಗಾಗಿ ಈ ರಸ್ತೆಯ 55ಕ್ಕೂ ಅಧಿಕ ಕಡೆಗಳಲ್ಲಿ ಅಗೆಯಲಾಗಿದೆ.
ಮಾದರಿ ರಸ್ತೆಯೊಂದನ್ನು ಈ ರೀತಿ ಅಲ್ಲಲ್ಲಿ ಅಗೆಯುತ್ತಿರುವ ಬಗ್ಗೆ ಜನರ ಅಸಮಾಧಾನದ ಮಾತು ಗಳು ಕೇಳಿ ಬರುತ್ತಿವೆ. ಇದು ಜನರು ಪಾವತಿಸಿದ ತೆರಿಗೆಯ ಹಣದ ದುರುಪಯೋಗ ಅಲ್ಲವೇ? ರಸ್ತೆಗೆ ಕಾಂಕ್ರೀಟ್ ಹಾಕುವ ಸಂದರ್ಭದಲ್ಲಿಯೇ ನೀರಿನ ಪೈಪ್‌ಲೈನ್, ಒಳಚರಂಡಿ ವ್ಯವಸ್ಥೆ, ದೂರವಾಣಿ ಕೇಬಲ್ ಇತ್ಯಾದಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸ ಬೇಕಿತ್ತಲ್ಲವೇ? ಸಂಬಂಧ ಪಟ್ಟ ಎಂಜಿನಿಯರ್‌ಗಳಿಗೆ ಇದೆಲ್ಲ ಗೊತ್ತಿರಲಿಲ್ಲವೇ ಎಂಬುದಾಗಿ ಜನರು ಪ್ರಶ್ನಿಸಲು ಆರಂಭಿಸಿದ್ದಾರೆ.
ಶಿಥಿಲ ಪೈಪ್‌ಲೈನ್ ಮುಖ್ಯ ಕಾರಣ:
ಈ ರಸ್ತೆಯ ಅಲ್ಲಲ್ಲಿ ನೀರು ಸೋರಿಕೆ ಆಗಲು ಶಿಥಿಲವಾದ ನೀರಿನ ಪೈಪ್‌ಲೈನ್ ಮುಖ್ಯ ಕಾರಣ ಎಂದು ಮಹಾನಗರ ಪಾಲಿಕೆಯ ಸ್ಥಳೀಯ ಕಾರ್ಪೋರೆಟರ್ ಹಾಗೂ ಮಾಜಿ ಮೇಯರ್ ಜೆಸಿಂತಾ ವಿಜಯಾ ಆಲ್ಫೆ†ಡ್ ಹೇಳುತ್ತಾರೆ.
1990 ರಲ್ಲಿ ಉಳ್ಳಾಲ ಕ್ಷೇತ್ರದ ಶಾಸಕರಾಗಿದ್ದ ಕೆ. ಜಯರಾಮ ಶೆಟ್ಟಿ ಅವರು (ಆಗ ಮಂಗಳೂರು ಮಹಾನಗರ ಪಾಲಿಕೆಯ ಜೆಪ್ಪು ಪರಿಸರದ ಕೆಲವು ವಾರ್ಡ್‌ಗಳು ಉಳ್ಳಾಲ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು) ನೀರು ಪೂರೈಕೆಗೆ ಸಂಬಂಧಿಸಿ ಹೊಸ ಯೋಜನೆಯನ್ನು ತಂದು ಕಂಕನಾಡಿಯಿಂದ ಜೆಪ್ಪು ಮೋರ್ಗನ್ಸ್‌ಗೆàಟ್ ತನಕ (ಸುಮಾರು 2.5 ಕಿ.ಮೀ.) ಹೊಸ ಪೈಪ್‌ಲೈನ್ ಹಾಕಿಸಿದ್ದರು. ಅದು ಸಿಮೆಂಟ್‌ನ ಪೈಪ್ ಆಗಿದ್ದು, ಅದಕ್ಕೆ 30 ವರ್ಷ ಕಳೆದಿದ್ದು, ಅದರ ಬಾಳಿಕೆ ಮುಗಿದು ಶಿಥಿಲವಾಗಿವೆ. ಹಾಗಾಗಿ ಪೈಪ್‌ಲೈನ್‌ನ ಅಲ್ಲಲ್ಲಿ ನೀರು ಸೋರಿಕೆ ಆಗುತ್ತಿದೆ. ಇದೀಗ ಈ ಪೈಪ್‌ಲೈನ್‌ನ್ನು ಬದಲಾಯಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಭೂಗತ ನೀರಿನ ಪೈಪ್‌ಲೈನ್ ಇದ್ದು, ಅದು ಹಳೆಯದಾಗಿದ್ದರಿಂದ ಶಿಥಿಲಗೊಂಡು ಅಲ್ಲಲ್ಲಿ ಸೋರಿಕೆ ಆಗುತ್ತಿದೆ. ಹಾಗಾಗಿ ನೀರು ಸೋರಿಕೆ ಆಗಿರುವ ಕಡೆ ರಸ್ತೆ ಅಗೆದು ಪೈಪ್‌ಲೈನ್ ದುರಸ್ತಿ ಪಡಿಸುವುದು ಅನಿವಾರ್ಯ. ರಸ್ತೆಯಲ್ಲಿ ಅಗೆದ ಗುಂಡಿಯನ್ನು ದುರಸ್ತಿ ಬಳಿಕ ಮುಚ್ಚಲಾಗುತ್ತದೆ. -ಜೆಸಿಂತಾ ವಿಜಯಾ ಅಲ್ಫ್ರೆಡ್, ಸ್ಥಳೀಯ ಕಾರ್ಪೊರೇಟರ್
ಕಂಕನಾಡಿಯಿಂದ ಜೆಪ್ಪು :
ಮೋರ್ಗನ್ಸ್ ಗೇಟ್ ತನಕ ಈಗಿರುವ ನೀರಿನ ಪೈಪ್‌ಲೈನನ್ನು ಜಲ ಸಿರಿ ಯೋಜನೆಯಡಿ ಬದಲಾಯಿಸಿ ಹೊಸ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಿಂದ ನೀರಿನ ಪೈಪ್‌ಲೈನ್ ಸೋರಿಕೆಗೆ ಶಾಶ್ವತ ಪರಿಹಾರ ಸಿಗಲಿದೆ. -ಪ್ರೇಮಾನಂದ ಶೆಟ್ಟಿ, ಮೇಯರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.