Rain: ಕರಾವಳಿಯಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮುಂಗಾರು ಮಳೆ; ಹಿಂಗಾರಿನ ಮೇಲೆ ನಿರೀಕ್ಷೆ

ದಕ್ಷಿಣ ಕನ್ನಡದಲ್ಲಿ ಶೇ.11, ಉಡುಪಿಯಲ್ಲಿ ಶೇ.13ರಷ್ಟು ಹೆಚ್ಚಳ

Team Udayavani, Oct 3, 2024, 6:50 AM IST

Rain: ಕರಾವಳಿಯಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮುಂಗಾರು ಮಳೆ; ಹಿಂಗಾರಿನ ಮೇಲೆ ನಿರೀಕ್ಷೆ

ಮಂಗಳೂರು: ವಾಡಿಕೆಯಂತೆ ಮುಂಗಾರು ಅವಧಿ ಪೂರ್ಣಗೊಂಡಿದ್ದು, ಕಳೆದ ಐದು ವರ್ಷಗಳ ಬಳಿಕ ಕರಾವಳಿಯಲ್ಲಿ ದಾಖಲೆಯ ಮಳೆ ಸುರಿದಿದೆ. 2019ರಲ್ಲಿ ಕರಾವಳಿಯಲ್ಲಿ ವಾಡಿಕೆಗಿಂತ ಶೇ.20ರಷ್ಟು ಮಳೆ ಹೆಚ್ಚಳವಾಗಿತ್ತು. 2024ರಲ್ಲೂ ಇದೇ ಪ್ರಮಾಣದಲ್ಲಿ ಮಳೆ ಹೆಚ್ಚಾಗಿದೆ.

ಕರಾವಳಿಯಲ್ಲಿ ಜೂನ್‌ ತಿಂಗಳಿನಿಂದ ಸೆಪ್ಟಂಬರ್‌ ಅಂತ್ಯದವರೆಗೆ ಮುಂಗಾರು ಋತುವಿನಲ್ಲಿ 3101 ಮಿ.ಮೀ. ಮಳೆಯಾಗಬೇಕು. ಅದರಂತೆ ಸೆ.30ರ ವರೆಗೆ 3,736 ಮಿ.ಮೀ. ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಶೇ.11, ಉಡುಪಿ ಜಿಲ್ಲೆಯಲ್ಲಿ ಶೇ.13 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.31ರಷ್ಟು ಹೆಚ್ಚು ಮಳೆ ಸುರಿದಿದೆ. ಒಟ್ಟಾರೆ ಕರಾವಳಿ ಭಾಗದಲ್ಲಿ ಶೇ.20ರಷ್ಟು ಅಧಿಕ ಸುರಿದಿದೆ.

ಕಳೆದ ನಾಲ್ಕು ವರ್ಷ ಕರಾವಳಿ ಭಾಗದಲ್ಲಿ ಮಳೆ ಕಡಿಮೆ ಇತ್ತು. ಒಟ್ಟಾರೆ ಮಳೆಗಾಲದ ಅವಧಿಯಲ್ಲಿ 2020ರ ಬಳಿಕ ಮಳೆ ವಾಡಿಕೆಯಂತೆ ಸುರಿಯಲಿಲ್ಲ. 2021 ಶೇ.13ರಷ್ಟು ಕಡಿಮೆ, 2022 ಶೇ.0, 2023-19 ಮತ್ತು ಈ ವರ್ಷ ಶೇ.20ರಷ್ಟು ಅಧಿಕ ಮಳೆಯಾಗಿದೆ.

ಯಾವ ತಾಲೂಕಿನಲ್ಲಿ ಎಷ್ಟು ಮಳೆ?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ.12ರಷ್ಟು ಹೆಚ್ಚಳ, ಬಂಟ್ವಾಳ-ಶೇ.6, ಮಂಗಳೂರು-ಶೇ.7, ಪುತ್ತೂರು-ಶೇ.3, ಸುಳ್ಯ-ಶೇ.22, ಮೂಡುಬಿದಿರೆ-ಶೇ.19, ಕಡಬ-ಶೇ.8, ಮೂಲ್ಕಿ-ಶೇ.3, ಉಳ್ಳಾಲ-ಶೇ.5, ಉಡುಪಿ ಜಿಲ್ಲೆಯ ಕಾರ್ಕಳ-ಶೇ.6, ಕುಂದಾಪುರ-ಶೇ.45, ಉಡುಪಿ-ಶೇ.12, ಬೈಂದೂರು-ಶೇ.19, ಬ್ರಹ್ಮಾವರ-ಶೇ.17, ಕಾಪು-ಶೇ.11 ಮತ್ತು ಹೆಬ್ರಿಯಲ್ಲಿ ಶೇ.6ರಷ್ಟು ಹೆಚ್ಚು ಮಳೆಯಾಗಿದೆ.

ಕೇರಳ ಕರಾವಳಿ ತೀರಕ್ಕೆ ಮೇ 30ರಂದು ಪ್ರವೇಶ ಪಡೆದ ಮುಂಗಾರು ಜೂ.2 ರಂದು ರಾಜ್ಯ ಕರಾವಳಿ ಭಾಗಕ್ಕೆ ಅಪ್ಪಳಿಸಿತ್ತು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜೂನ್‌ ಮಧ್ಯಭಾಗದವರೆಗೆ ಮಳೆಗಾಲದ ಯಾವುದೇ ಲಕ್ಷಣ ಕಾಣಿಸಿಕೊಡಿರಲಿಲ್ಲ. ಸಾಮಾನ್ಯವಾಗಿ ಮುಂಗಾರು ಆಗಮನದ ವೇಳೆ ಕೆಲವು ದಿನ ಮೋಡದ ವಾತಾವರಣ, ಗಾಳಿ ಸಹಿತ ಬಿರುಸಿನ ಮಳೆಯಾಗುತ್ತದೆ. ಆದರೆ ಎರಡರಿಂದ ಮೂರು ವಾರಗಳ ಕಾಲ ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆ ಸುರಿದಿಲ್ಲ. ಜುಲೈ ಅಂತ್ಯದಿಂದ ಆಗಸ್ಟ್‌ ತಿಂಗಳಿಡೀ ಕರಾವಳಿಯಲ್ಲಿ ಭಾರೀ ಮಳೆಯಾಗಿದೆ.

ಹಿಂಗಾರು ಮಳೆಯತ್ತ ನಿರೀಕ್ಷೆ
ಕರಾವಳಿ ಭಾಗದಲ್ಲಿ ಮುಂಗಾರು ಅವಧಿ ಪೂರ್ಣಗೊಂಡ ಬಳಿಕ ಅ. 1ರಿಂದ ಡಿಸೆಂಬರ್‌ ಅಂತ್ಯದವರೆಗಿನ ಹಿಂಗಾರು ಅವಧಿಯ ಮೇಲೆ ನಿರೀಕ್ಷೆ ಮೂಡಿದೆ. ಈ ಹಿಂದಿನ ಕೆಲವು ವರ್ಷಗಳಲ್ಲಿ ಕರಾವಳಿಗೆ ಉತ್ತಮ ಹಿಂಗಾರು ಇತ್ತು. ಈ ಬಾರಿ ಹೇಗಿರಬಹುದು ಎಂಬ ನಿರೀಕ್ಷೆ ರೈತರಲ್ಲಿದೆ. ಹಿಂಗಾರು ಅವಧಿಯ ಮಳೆಯ ಕುರಿತಂತೆ ಹವಾಮಾನ ಇಲಾಖೆಯಿಂದ ಸದ್ಯದಲ್ಲೇ ವಿಶ್ಲೇಷಣೆಯೂ ಬಿಡುಗಡೆ ಮಾಡಲಿದೆ. ಕರಾವಳಿಯಲ್ಲಿ ಹಿಂಗಾರು ಅವಧಿಯಲ್ಲಿ 259.4 ಮಿ.ಮೀ. ವಾಡಿಕೆ ಮಳೆ ಸುರಿಯಬೇಕು. 2019ರಲ್ಲಿ ವಾಡಿಕೆಗಿಂತ ಶೇ.124 ಹೆಚ್ಚಳ, 2020ರಲ್ಲಿ ಶೇ.27, 2021ರಲ್ಲಿ ಶೇ.122, 2022ರಲ್ಲಿ ಶೇ.14ರಷ್ಟು ಕಡಿಮೆ ಮತ್ತು ಕಳೆದ ವರ್ಷ ಶೇ.6ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು.

ಟಾಪ್ ನ್ಯೂಸ್

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಎಲ್ಲೆಡೆ ಚರ್ಚೆ

World War 3…?: ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಚರ್ಚೆ

Stock Markets Slump: ಇರಾನ್‌-ಇಸ್ರೇಲ್‌ ಯುದ್ಧಕ್ಕೆ ಷೇರುಪೇಟೆ ತಲ್ಲಣ!

Stock Markets Slump: ಇರಾನ್‌-ಇಸ್ರೇಲ್‌ ಯುದ್ಧಕ್ಕೆ ಷೇರುಪೇಟೆ ತಲ್ಲಣ!

WhatsApp Image 2024-10-01 at 9.22.19 PM

Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಇಂದಿನಿಂದ ನವರಾತ್ರಿ ಸಂಭ್ರಮ

Navaratri: ಕರಾವಳಿಯಲ್ಲಿ ಇಂದಿನಿಂದ ನವರಾತ್ರಿ ಸಂಭ್ರಮ

Surathkal: ನಕಲಿ ಲೆಕ್ಕ ತೋರಿಸಿ ಕೋಟ್ಯಂತರ ರೂ. ವಂಚನೆ

Surathkal: ನಕಲಿ ಲೆಕ್ಕ ತೋರಿಸಿ ಕೋಟ್ಯಂತರ ರೂ. ವಂಚನೆ

Rain: ವಾರಾಂತ್ಯದಿಂದ ಮತ್ತೆ ಮಳೆ ಸಾಧ್ಯತೆ; ತಾಪಮಾನ ಏರಿಕೆ

Rain: ವಾರಾಂತ್ಯದಿಂದ ಮತ್ತೆ ಮಳೆ ಸಾಧ್ಯತೆ; ತಾಪಮಾನ ಏರಿಕೆ

Karnataka: ಗೇರು ಉತ್ಪಾದಕರ ಅಸೋಸಿಯೇಶನ್‌: ಅಧ್ಯಕ್ಷರಾಗಿ ಅನಂತ ಕೃಷ್ಣ ರಾವ್‌ ಆಯ್ಕೆKarnataka: ಗೇರು ಉತ್ಪಾದಕರ ಅಸೋಸಿಯೇಶನ್‌: ಅಧ್ಯಕ್ಷರಾಗಿ ಅನಂತ ಕೃಷ್ಣ ರಾವ್‌ ಆಯ್ಕೆ

Karnataka: ಗೇರು ಉತ್ಪಾದಕರ ಅಸೋಸಿಯೇಶನ್‌: ಅಧ್ಯಕ್ಷರಾಗಿ ಅನಂತ ಕೃಷ್ಣ ರಾವ್‌ ಆಯ್ಕೆ

Train: ಮಂಗಳೂರು – ಬೆಂಗಳೂರು ರೈಲು ವೇಳಾಪಟ್ಟಿ ಬದಲುTrain: ಮಂಗಳೂರು – ಬೆಂಗಳೂರು ರೈಲು ವೇಳಾಪಟ್ಟಿ ಬದಲು

Train: ಮಂಗಳೂರು – ಬೆಂಗಳೂರು ರೈಲು ವೇಳಾಪಟ್ಟಿ ಬದಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಎಲ್ಲೆಡೆ ಚರ್ಚೆ

World War 3…?: ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.