ಮನೆ ನಿರ್ಮಾಣದ ಬಹುತೇಕ ಕೆಲಸ ಒಬ್ಬರೇ ಮುಗಿಸಿದರು!
Team Udayavani, Nov 16, 2018, 11:09 AM IST
ಸವಣೂರು: ಸವಣೂರು ಗ್ರಾಮದ ಮಾಂತೂರು ನಿವಾಸಿ ಫಾರೂಕ್ ಅವರು ಒಬ್ಬಂಟಿಯಾಗಿ ತನ್ನ ಮನೆಯ ಶೇ. 75ರಷ್ಟು ಕೆಲಸಕಾರ್ಯಗಳನ್ನು ತಾನೊಬ್ಬನೇ ಮಾಡಿ ಮುಗಿಸಿದ್ದಾರೆ. ಮನೆಯ ತಾರಸಿ ಹೊರತುಪಡಿಸಿ ಅಡಿಪಾಯದಿಂದ ಹಿಡಿದು ಗೋಡೆ ಕಟ್ಟಿ, ಸಾರಣೆಯ ತನಕದ ಕೆಲಸವನ್ನು ಯಾರ ನೆರವು ಇಲ್ಲದೆ ಏಕಾಂಗಿಯಾಗಿ ಮಾಡಿದ್ದಾರೆ. ಮರ ಕೊಯ್ಯುವ ಯಂತ್ರದ ಆಪರೇಟರ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಫಾರೂಕ್ ಸಕಲ ಕಲಾ ವಲ್ಲಭರು ಎಂದರೆ ತಪ್ಪಾಗಲಾರದು.
ಮನೆಯ ಎಲೆಕ್ಟ್ರೀಶಿಯನ್, ಅಡುಗೆ, ಪೈಂಟಿಂಗ್, ಪ್ಲಂಬಿಂಗ್, ಸಾರಣೆ ಮೊದಲಾದ ರೀತಿಯ ಕೆಲಸಗಳಲ್ಲಿ ಪರಿಣಿತಿ ಪಡೆದಿರುವ ಅವರು ತಮ್ಮ ಕಲಾ ಚಟುವಟಿಕೆಗಳಿಂದಲೂ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದಾರೆ. ಪ್ರತೀ ವರ್ಷ ಈದ್ ಮೀಲಾದ್ ಮೆರವಣಿಗೆಗೆ ತನ್ನ ದ್ವಿಚಕ್ರ ವಾಹನವನ್ನು ವಿಭಿನ್ನ ಶೈಲಿಯಲ್ಲಿ ಸಿಂಗರಿಸುವ ಅವರ ಚಾಕಚಕ್ಯತೆ ಗ್ರಾಮದಲ್ಲಿ ಗಮನ ಸೆಳೆದಿದೆ.
ಸುಲಭದ ಮಾತೇ ಅಲ್ಲ
ಸರಕಾರದ ಯೋಜನೆಯ ಸಹಕಾರದೊಂದಿಗೆ ನಿರ್ಮಿಸುತ್ತಿರುವ ಮನೆ ಇದಾಗಿದೆ. ಏಳು ಅಡಿ ಆಳದ ತಳಪಾಯಕ್ಕೆ ಲೋಡುಗಟ್ಟಲೆ ಕಾಡು ಕಲ್ಲುಗಳನ್ನು ಒಬ್ಬನೇ ತುಂಬಿದ್ದಾರೆ. ಮಣ್ಣು ಬೆರೆಸಿ ಓರಣವಾಗಿ ಜೋಡಿಸಿ, ಅದರ ಮೇಲೆ ಕೆಂಪು ಕಲ್ಲಿನ ಪಂಚಾಂಗವನ್ನೂ ಫಾರೂಕ್ ಒಬ್ಬರೇ ನಿರ್ಮಿಸಿದ್ದಾರೆ. ಅನಂತರ ಸಂಪೂರ್ಣ ಗೋಡೆಯನ್ನು ಕಟ್ಟಿದ್ದಾರೆ. ಅವರೇ ಮೇಸ್ತ್ರಿ. ಅವರೇ ಹೆಲ್ಪರ್. ಕಿಟಕಿ ಮತ್ತು ದಾರಂದಗಳನ್ನು ಇರಿಸುವಾಗ ಮಾತ್ರ ನಾಲ್ಕು ಮಂದಿ ಕೆಲಸಗಾರರ ಸಹಾಯವನ್ನು ಪಡೆದುಕೊಂಡಿದ್ದಾರಂತೆ.
ತಾರಸಿಯ ಕೆಲಸವನ್ನು ಸೆಂಟ್ರಿಂಗ್ ಕೆಲಸದವರಿಂದ ಮಾಡಿಸಿದ್ದಾರೆ. ಈಗ ಮನೆಯ ಮುಕ್ಕಾಲು ಭಾಗದಷ್ಟು ಕೆಲಸ ಪೂರ್ಣಗೊಂಡಿದ್ದು, ಇನ್ನುಳಿದ ಕೊನೆಯ ಹಂತದ ಕೆಲಸಗಳು ಬಾಕಿ ಇವೆ. ಅವುಗಳನ್ನೂ ಕೂಡಾ ತಾನೊಬ್ಬನೇ ಮಾಡಿ ಮುಗಿಸುತ್ತೇನೆ ಎನ್ನುತ್ತಾರೆ ಫಾರೂಕ್.
ಆತ್ಮವಿಶ್ವಾಸ ಇದೆ
ನನ್ನ ಕನಸಿನ ಮನೆಯ ಗಾರೆ, ವಯರಿಂಗ್, ಪ್ಲಂಬಿಂಗ್, ಪೈಂಟಿಂಗ್ ಕೆಲಸಗಳನ್ನು ತಾನೊಬ್ಬನೇ ಮುಗಿಸಬಲ್ಲೆ ಎನ್ನುವ ಆತ್ಮವಿಶ್ವಾಸ ನನಗಿದೆ. ಇಲ್ಲಿಯ ತನಕ ಸುಮಾರು 3.60 ಲ.ರೂ. ವ್ಯಯಿಸಿದ್ದೇನೆ. ತನ್ನ ಒಂಟಿ ದುಡಿಮೆಯ ಮೂಲಕ ಕೆಲಸಗಾರರಿಗೆ ಕೊಡಬೇಕಾಗಿದ್ದ 3 ಲಕ್ಷ ರೂ.ನಷ್ಟು ಹಣ ಉಳಿತಾಯವಾಗಿದೆ.
– ಫಾರೂಕ್,
ಮನೆ ನಿರ್ಮಿಸುತ್ತಿರುವವರು
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.