ಮಳೆಕೊಯ್ಲು, ಜಲ ಮರುಪೂರಣ ಯೋಜನೆ ಅನುಷ್ಠಾನ
Team Udayavani, Oct 12, 2017, 3:04 PM IST
ಮೂಲ್ಕಿ: ಸರಕಾರದ ಕೆರೆ ಸಂಜೀವಿನಿ ಯೋಜನೆ ಮೂಲಕ ಅಲ್ಲಲ್ಲಿ ಕೆರೆ ಅಭಿವೃದ್ಧಿ ಮಾಡುತ್ತಿದೆ. ನಗರ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಸಲು ಹೊಸ ಬಗೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಬೇಸಿಗೆಯಲ್ಲಿ ಅತಿಯಾದ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಭಗೀರಥ ಪ್ರಯತ್ನಕ್ಕಿಳಿದಿದೆ.
ತನ್ನ ವ್ಯಾಪ್ತಿಯ ಕೊಳವೆಬಾವಿ, ತೆರೆದ ಬಾವಿ ಪರಿಸರದಲ್ಲಿ ಜಲಮರುಪೂರಣಕ್ಕೆ ಕಾಮಗಾರಿ ನಡೆಸುವ ಮೂಲಕ ನೀರಿನ ಬರವನ್ನು ಈ ವರ್ಷವೇ ಬಹುಪಾಲು ಇಳಿಸುವ ಭರವಸೆಯನ್ನು ನಗರ ಪಂಚಾಯತ್ ಆಡಳಿತ ಹೊಂದಿದೆ. ಪ್ರತಿ ಬೋರ್‌ವೆಲ್‌ಗೆ ಸುಮಾರು 82 ಸಾವಿರ ರೂ. ವೆಚ್ಚದಲ್ಲಿ 7 ಕಡೆಗಳಲ್ಲಿ ಈ ಯೋಜನೆ ಅಳವಡಿಸಲು ಸ್ಥಳೀಯ ಆಡಳಿತ ಮುಂದಾಗಿದೆ.
ಮೂಲ್ಕಿ ನ.ಪಂ. ಎರಡು ವರ್ಷಗಳಿಂದ ಅತಿಯಾದ ನೀರಿನ ಅಭಾವ ಅನುಭವಿಸಿತ್ತು. ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ಮೊರೆ ಹೋಗಿದ್ದಲ್ಲದೆ, ಸ್ಥಳೀಯರ ಬಾವಿ ಹಾಗೂ ಕೊಳವೆ ಬಾವಿಗಳಿಂದಲೂ ನೀರು ಪಡೆದು, ಟ್ಯಾಂಕರ್‌ಗಳ ಮೂಲಕ ಜನರಿಗೆ ಪೂರೈಸಲು ಲಕ್ಷಗಟ್ಟಲೆ ಹಣ ವಿನಿಯೋಗಿಸಿತ್ತು. ಆದರೂ ತೃಪ್ತಿಕರ ಫಲಿತಾಂಶ ಲಭ್ಯವಾಗಿರಲಿಲ್ಲ. ಜನರ ಸಹಕಾರವೂ ಸಂಪೂರ್ಣವಾಗಿ ಸಿಗದೆ ಸಮಸ್ಯೆ ಹಾಗೆಯೇ ಉಳಿದಿತ್ತು.
ನಗರ ಪಂಚಾಯತ್ ವ್ಯಾಪ್ತಿಯ ಕೆಲವು ಮನೆಗಳಲ್ಲಿ ಮಳೆ ನೀರು ಇಂಗಿಸುವ ಕೆಲಸ ನಡೆಸಲಾಗಿದ್ದು, ಇದರಿಂದ ಬಾವಿಗಳಲ್ಲಿ ಒರತೆ ಪ್ರಮಾಣ ಜಾಸ್ತಿಯಾಗಿದೆ. ಸ್ಥಳೀಯರೂ ಇದನ್ನು ಗಮನಿಸಿ, ಜಲ ಮರುಪೂರಣ ವ್ಯವಸ್ಥೆ ಅಳವಡಿಸಲು ಉತ್ಸುಕರಾಗಿದ್ದಾರೆ.
ಮನೆ ನಿರ್ಮಾಣದ ಪರವಾನಿಗೆ ಕೊಡುವ ಸಂದರ್ಭದಲ್ಲಿ ಮಳೆಕೊಯ್ಲು ಯೋಜನೆ ಅನುಷ್ಠಾನ ಕಡ್ಡಾಯಗೊಳಿಸಲಾಗಿದೆ.
ಇದನ್ನು ಪ್ರತಿಯೊಬ್ಬರೂ ಪಾಲಿಸಿಕೊಂಡು ಬಂದರೆ ನೀರಿನ ಬರ ಕಡಮೆಯಾಗುವ ಲಕ್ಷಣಗಳಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಸಾರ್ವಜನಿಕರೂ ತಮ್ಮ ಬಾವಿ ಹಾಗೂ ಬೋರ್‌ವೆಲ್‌ಗಳಿಗೆ ನೀರಿಂಗಿಸಲು ಮುಂದಾದರೆ ನೀರಿನ ಪ್ರಮಾಣ ವೃದ್ಧಿಸುವುದಲ್ಲದೆ, ಸಮೀಪದ ಬಾವಿ-ಕೆರೆಗಳಲ್ಲೂ ನೀರಿನ ಒರತೆ ಜಾಸ್ತಿಯಾಗುವುದು ಈಗಾಗಲೇ ಅನುಷ್ಠಾನಗೊಳಿಸಿದ ಪ್ರದೇಶದಲ್ಲಿ ಸಾಬೀತಾಗಿದೆ.
ಮನೆ ನಿರ್ಮಾಣದ ಜತೆಗೆ ನೀರಿಂಗಿಸಲು ಜನ ಮುಂದಾದರೆ ಕನಿಷ್ಠ ಅವರ ಮನೆಯ ನೀರಿನ ಸಮಸ್ಯೆಯಾದರೂ ನೀಗುತ್ತದೆ. ಸಾರ್ವಜನಿಕರ ಸಹಕಾರದಿಂದ ಈ ಯೋಜನೆ ಯಶಸ್ವಿಯಾಗುತ್ತದೆ ಎಂದು ನಗರ ಪಂಚಾಯತ್‌ನ ಎಂಜಿನಿಯರ್ ಅಶ್ವಿನಿ ಹೇಳಿದ್ದಾರೆ.
ಪ್ರಾಯೋಗಿಕ ಅನುಷ್ಠಾನ
ಈ ಬಾರಿ ಪ್ರಾಯೋಗಿಕವಾಗಿ ಹಲವೆಡೆ ಜಲಪೂರಣ ವ್ಯವಸ್ಥೆಯನ್ನು ಬೋರ್‌ವೆಲ್‌ಗಳ ಸಮೀಪದಲ್ಲಿ ತಜ್ಞರ ಸಲಹೆ ಅನುಸಾರ ಕ್ರಮಬದ್ಧವಾಗಿ ನಿರ್ಮಿಸಲಾಗಿದೆ. ಇದರಲ್ಲಿ ಯಶಸ್ಸು ಸಿಗುವ ವಿಶ್ವಾಸ ನಮಗಿದ್ದು, ಮುಂದಿನ ಬಾರಿ ಇನ್ನಷ್ಟು ಪ್ರಯತ್ನ ಮಾಡಿ, ಯೋಜನೆ ಅನುಷ್ಠಾನ ಮಾಡಲಾಗುವುದು. ಮನೆಗಳಲ್ಲಿ ಹಾಗೂ ಖಾಸಗಿ ಜಾಗಗಳಲ್ಲಿ ಮಳೆ ಕೊಯ್ಲು ಯೋಜನೆ ಅನುಷ್ಠಾನಕ್ಕೆ ಪ್ರೋತ್ಸಾಹ ಕೊಡುವ ಕೆಲಸವನ್ನೂ ನಗರ ಪಂಚಾಯತ್ ಮಾಡಲಿದೆ.
ಸುನೀಲ್ ಆಳ್ವ,
ಅಧ್ಯಕ್ಷರು, ನಗರ ಪಂಚಾಯತ್, ಮೂಲ್ಕಿ
ಸಹಕಾರ ಮುಖ್ಯ
ರಾಜ್ಯದ ಹಲವೆಡೆಗಳಲ್ಲಿ ಈ ಯೋಜನೆಗೆ ಮಾರ್ಗದರ್ಶನ ನೀಡಿ ಯಶಸ್ಸು ಪಡೆದ ತಜ್ಞರ ಸಲಹೆಯಂತೆ ಜಲಪೂರಣ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮನೆ ನಿರ್ಮಾಣ ಪರವಾನಿಗೆಯಲ್ಲಿ ಮಳೆಕೊಯ್ಲು ಯೋಜನೆಗೆ ಹಾಕಿರುವ ಶರತ್ತು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು. ಸಾರ್ವಜನಿಕರ ಸಹಕಾರದಿಂದ ನೀರಿನ ಸಮಸ್ಯೆ ನಿವಾರಿಸಬಹುದು.
ಇಂದು ಎಂ.
ಮುಖ್ಯಾಧಿಕಾರಿ, ನಗರ ಪಂಚಾಯತ್, ಮೂಲ್ಕಿ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.