ಶ್ರೀ ರಾಜನ್‌ದೈವ ಕೊಡಮಣಿತ್ತಾಯ ದೈವಸ್ಥಾನ ವಾರ್ಷಿಕ ಜಾತ್ರೆ ಸಂಪನ್ನ
Team Udayavani, Mar 15, 2017, 12:09 PM IST
ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾವಳಮಾಗಣೆ ಶ್ರೀ ರಾಜನ್‌ದೈವ ಕೊಡಮಣಿತ್ತಾಯ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ ಮಾ.10ರಿಂದ ಮಾ.13ರವರೆಗೆ ಜರಗಿತು.
ಮಾ.12ರಂದು ಬೆಳಗ್ಗೆ ಗಣಪತಿ ಹೋಮ.ನವಕಲಶ ಪರ್ವ, ಸಂಜೆ ಹೂವಿನ ಪೂಜೆ, ಅಂಕ ಅಂಬೋಡಿ, ಮುಂಡೇವು, ಸೂಟೆದಾರ, ಕಾವಳಕಟ್ಟೆ ಬಸದಿಯಲ್ಲಿ ಪಂಚಾಮೃತಾಭಿಷೇಕ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ನಾಟಕ ಪ್ರದರ್ಶನ ನಡೆಯಿತು. ಬಳಿಕ ಶ್ರೀ ರಾಜನ್ ದೈವ ಕೊಡಮಣಿತ್ತಾಯ ದೈವದ ನೇಮೋತ್ಸವ, ಬಲಿ ಉತ್ಸವ, ದರಿ ದೀಪೋತ್ಸವ, ಹುಲಿಬಂಡಿ, ಕುದುರೆ ಬಂಡಿ ಉತ್ಸವ ನಡೆಯಿತು. ಮಾ.13ರಂದು ಧ್ವಜಾವರೋಹಣ, ಕುರುತಂಬಿಲ ನೇಮ, ಶ್ರೀ ಕ್ಷೇತ್ರದಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಬಲ್ಲೋಡಿ ಮಾಗಣೆ ಗುತ್ತಿಗೆ ನಿರ್ಗಮನ ನಡೆಯಿತು.
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ,ಮಾಗಣೆ ತಂತ್ರಿ ಗಣಪತಿ ಮುಚ್ಚಿನ್ನಾಯ,ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ,ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಕ್ಷೇತ್ರದ ಆಡಳಿತ ಮೊಕ್ತೇಸರ ಬಿ.ಭರತ್ ಕುಮಾರ್ ಜೈನ್ ಬಲ್ಲೋಡಿ ಮಾಗಣೆಗುತ್ತು, ಬಂಟ್ವಾಳ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಬೂಡ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ತಾ.ಪಂ.ಸದಸ್ಯೆ ಧನಲಕ್ಷ್ಮೀ ಸಿ.ಬಂಗೇರ, ಮಾಜಿ ಸದಸ್ಯರಾದ ಸತೀಶ್ ಕುಮಾರ್ ಪಿಲಿಂಗಾಲು, ಸಂಪತ್ ಕುಮಾರ್ ಶೆಟ್ಟಿ, ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಪೂಂಜ, ಮಾಜಿ ಅಧ್ಯಕ್ಷ ಬಾಲಕೃಷ್ಣ ಅಂಚನ್, ಕಾವಳಮೂಡೂರು ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಪೀರ್ಯ, ಪ್ರಮುಖರಾದ ಶ್ರೀಪ್ರಕಾಶ್ ಜೈನ್, ಮಾಣಿಕ್ಯರಾಜ್ ಜೈನ್,ಕಟ್ಟೆಮನೆ ಉದಯ ಕುಮಾರ್ ಜೈನ್ ಸಹೋದರರು ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.