MRPL ಹಸುರು ವಲಯ ಭೂಸ್ವಾಧೀನ: ಪ್ಯಾಕೇಜ್‌ ಘೋಷಿಸಲು ಸಚಿವರ ಸೂಚನೆ


Team Udayavani, Aug 31, 2024, 12:45 AM IST

MRPL ಹಸುರು ವಲಯ ಭೂಸ್ವಾಧೀನ: ಪ್ಯಾಕೇಜ್‌ ಘೋಷಿಸಲು ಸಚಿವರ ಸೂಚನೆ

ಮಂಗಳೂರು: ಎಂ.ಆರ್‌.ಪಿ.ಎಲ್‌. 3ನೇ ಹಂತದಲ್ಲಿ ಹಸುರು ವಲಯ ನಿರ್ಮಾಣಕ್ಕೆ ಜೋಕಟ್ಟೆ ಗ್ರಾಮದ 27 ಎಕ್ರೆ ಭೂಸ್ವಾ ಧೀನಗೊಳ್ಳುವ ನಿರ್ವಸಿತರಿಗೆ ಪರಿಹಾರ ಪ್ಯಾಕೇಜ್‌ ಅನ್ನು ಪ್ರಕಟಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದಾರೆ.

ಎಂ.ಆರ್‌.ಪಿ.ಎಲ್‌. ಹಸುರು ವಲಯ ಭೂಸ್ವಾ ಧೀನಕ್ಕೆ ಸಂಬಂಧಿ ಸಿ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

3ನೇ ಹಂತದಲ್ಲಿ ಹಸಿರು ವಲಯ ನಿರ್ಮಾಣ ಭೂಸ್ವಾಧೀನಕ್ಕೆ ಸಂಬಂಧಿಸಿ ಸಮೀಕ್ಷೆ ನಡೆಸಲು ಈಗಾಗಲೇ ಕೆ.ಪಿ.ಟಿ. ಪಾಲಿಟೆಕ್ನಿಕ್‌ ಸಂಸ್ಥೆಗೆ ವಹಿಸಲಾಗಿದ್ದು, ಮೂರು ತಿಂಗಳಲ್ಲಿ ಸಮೀಕ್ಷೆ ಬರಲಿದೆ. ಅದಕ್ಕೂ ಮುನ್ನ ನಿರ್ವಸಿತರಿಗೆ ಒಪ್ಪಿಗೆಯಾಗುವ ಪ್ಯಾಕೇಜ್‌ ಅನ್ನು ನಿರ್ಧರಿಸುವಂತೆ ಸಚಿವರು ಎಂ.ಆರ್‌.ಪಿ.ಎಲ್‌. ಅಧಿಕಾರಿಗಳಿಗೆ ಸಲಹೆ ಮಾಡಿದರು.

ಹಸಿರು ವಲಯ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ನಡೆಸಬೇಕು. ಅಲ್ಲಿರುವ ಮನೆ, ಜಮೀನುಗಳ ಬಗ್ಗೆ ನಿಖರವಾಗಿ ವರದಿ ತಯಾರಿಸಬೇಕು. ಶೀಘ್ರದಲ್ಲೇ ಪುನರ್ವಸತಿ ಪ್ಯಾಕೇಜ್‌ ನಿರ್ಧರಿಸುವಂತೆ ಸೂಚಿಸಿದ ಸಚಿವರು, ಭೂಸ್ವಾ ಧೀನಗೊಳ್ಳುವ ಸ್ಥಳಕ್ಕೆ ತಾನು ಶೀಘ್ರದಲ್ಲೇ ಭೇಟಿ ನೀಡುವುದಾಗಿ ತಿಳಿಸಿದರು. ಎರಡು ತಿಂಗಳ ಬಳಿಕ ಈ ವಿಷಯದಲ್ಲಿ ಮತ್ತೆ ಸಭೆ ನಡೆಸುವುದಾಗಿ ಹೇಳಿದರು.

ಎಂ.ಆರ್‌.ಪಿ.ಎಲ್‌. ಅಧಿಕಾರಿಗಳು ಮಾತನಾಡಿ, ಹಸುರು ವಲಯ ಭೂಸ್ವಾ ಧೀನಕ್ಕೆ ಸಮೀಕ್ಷಾ ವರದಿ ಹಾಗೂ ಗ್ರಾಮಸ್ಥರೆಲ್ಲರ ಒಪ್ಪಿಗೆ ಅಗತ್ಯವಿದೆ. ಪರಿಹಾರ ಪ್ಯಾಕೇಜ್‌ ಅನ್ನು ಬೋರ್ಡ್‌ ಸಭೆಯಲ್ಲಿಟ್ಟು ಶೀಘ್ರವಾಗಿ ನಿರ್ಧರಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಕೈಗಾರಿಕೆ ಜಂಟಿ ನಿರ್ದೇಶಕ ಗೋಕುಲದಾಸ್‌ ನಾಯಕ್‌, ಕೆಐಎಡಿಬಿ ವಿಶೇಷ ಭೂಸ್ವಾ ಧೀನಾ ಧಿಕಾರಿ ರಾಜು, ಎಂ.ಆರ್‌.ಪಿ.ಎಲ್‌. ಅ ಧಿಕಾರಿಗಳು, ಮುನೀರ್‌ ಕಾಟಿಪಳ್ಳ, ತಾ.ಪಂ.ಮಾಜಿ ಸದಸ್ಯ ಬಶೀರ್‌, ಜೋಕಟ್ಟೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

9

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

1-mmm

Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ

1-ddsadsa

Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Sudden rise in cooking oil prices

Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್

Mamath2

Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-bedra

ಅಶಕ್ತರಿಗೆ ಮನೆ ಕಟ್ಟುವ ಕಾಯಕದಲ್ಲಿ ಚಾರಿಟೆಬಲ್ ಟ್ರಸ್ಟ್-3ನೇ ಮನೆ ‘ಆಸರೆ’ ಪ್ರವೇಶಕ್ಕೆಸಿದ್ಧ

Mang-Murder

Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು

MP-Meeting

Surathkal-B.C.Road Highway: ಶಾಶ್ವತ ನಿರ್ವಹಣೆ, ಬೈಪಾಸ್‌ ರಸ್ತೆ ಪ್ರಸ್ತಾವನೆ ಸಲ್ಲಿಸಿ

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Father-Muller

Father Muller: ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ ಫಾರ್ಮ ಕೋರ್ಸ್‌ಗೆ ಅನುಮತಿ

MUST WATCH

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

ಹೊಸ ಸೇರ್ಪಡೆ

crime (2)

Indi; ನಾಲ್ವರು ದುಷ್ಕರ್ಮಿಗಳಿಂದ ಯುವಕನ ಬರ್ಬರ ಹ*ತ್ಯೆ

16

Kumble: ವಿದ್ಯಾರ್ಥಿಗೆ ಹಲ್ಲೆ

15

Belthangady: ನೇಣುಬಿಗಿದು ವ್ಯಕ್ತಿ ಸಾವು

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Thekkatte: ಸುಟ್ಟು ಕರಕಲಾದ ಎರಡು ದ್ವಿಚಕ್ರ ವಾಹನ

Thekkatte: ಸುಟ್ಟು ಕರಕಲಾದ ಎರಡು ದ್ವಿಚಕ್ರ ವಾಹನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.