MRPL ‘ಸ್ಟಾರ್ಟ್ ಅಪ್ ಇಂಡಿಯಾ’ ಅಭಿಯಾನಕ್ಕೆ ಅರ್ಜಿ ಆಹ್ವಾನ
Team Udayavani, Jul 5, 2018, 3:40 AM IST
ಮಂಗಳೂರು: MRPL (ಮಂಗಳೂರು ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ಲಿಮಿಟೆಡ್) ಕಂಪೆನಿ ನವೀನ ಉದ್ದಿಮೆ ಕೈಗೊಳ್ಳುವಂತೆ ಪ್ರೋತ್ಸಾಹಿಸಲು ‘ಸ್ಟಾರ್ಟ್ ಅಪ್ ಇಂಡಿಯಾ’ ಅಭಿಯಾನದ 2ನೇ ಹಂತವನ್ನು ಜು. 1ರಿಂದ ಪ್ರಾರಂಭಿಸಿದೆ. ಕೇಂದ್ರ ಸರಕಾರದ ಯೋಜನೆಗೆ ಪೂರಕವಾಗಿ ವಿವಿಧ ತೈಲ ಕಂಪೆನಿಗಳು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದ್ದು MRPL ಕೂಡ ಅರ್ಜಿ ಆಹ್ವಾನಿಸಿದೆ. ಅರ್ಜಿಗಳ ಪರಿಶೀಲನೆಗೆ NITKಯ ಆಯ್ದ ಅಧಿಕಾರಿಗಳ ಸಹಾಯ ಪಡೆದುಕೊಳ್ಳಲಾಗಿದೆ. ಆಯ್ದ ಅರ್ಜಿದಾರರಿಗೆ ನವೀನ ಉದ್ದಿಮೆ ಸ್ಥಾಪನೆಗೆ ಹಾಗೂ ಈಗಾಗಲೇ ಉದ್ದಿಮೆ ಶುರು ಮಾಡಿದವರಿಗೆ ಅದರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿದೆ.
ಮೊದಲ ಹಂತದಲ್ಲಿ 25 ಅರ್ಜಿ
ಮೊದಲ ಹಂತದಲ್ಲಿ ಸುಮಾರು 25 ಅರ್ಜಿಗಳು ಬಂದಿದ್ದರೂ ಕೇವಲ 5 ಅರ್ಜಿಗಳಷ್ಟೇ ಪರಿಶೀಲನೆ ಅಂತಿಮ ಹಂತಕ್ಕೆ ಬಂದಿವೆ. ಒಟ್ಟು ಮೂರು ವರ್ಷಗಳ ಅವಧಿಗೆ 10 ಕೋಟಿ ರೂ. ಹಣವನ್ನು ಈ ಯೋಜನೆಗೆ ಕಂಪೆನಿ ಮೀಸಲಿಟ್ಟಿದೆ.
ಉದ್ಯೋಗ ಸೃಷ್ಟಿಸಬಲ್ಲ ಉದ್ಯಮ
ಯೋಜನೆ ಮೂಲಕ ಹಣದ ನೆರವು ಪಡೆಯಬೇಕಾದರೆ, ಉದ್ಯಮ ಹೊಸತನದಿಂದ ಕೂಡಿರಬೇಕು, ಲಾಭದಾಯಕ ಮತ್ತು ಉದ್ಯೋಗಗಳನ್ನು ಸೃಷ್ಟಿಸುವಂತಿರಬೇಕು. ಈಗಾಗಲೇ ಪ್ರಾರಂಭಿಸಿದ ಉದ್ದಿಮೆಗೂ ಧನಸಹಾಯ ಪಡೆದುಕೊಳ್ಳಬಹುದು. ಆದರೆ, ಉದ್ದಿಮೆ ಪ್ರಾರಂಭವಾಗಿ 7 ವರ್ಷ ಕಳೆದಿರಬಾರದು. ಹೆಚ್ಚಿನ ಮಾಹಿತಿಗೆ
https//:startup.mrpl.co.in ಸಂಪರ್ಕಿಸಬಹುದೆಂದು ಕಂಪೆನಿ ತಿಳಿಸಿದೆ.
ಸ್ಥಳೀಯ ಯುವಕರಿಗೆ ಅವಕಾಶ
MRPL ಜನರಲ್ ಮ್ಯಾನೇಜರ್ ಸುಧೀರ್ ಪೈ ಉದಯವಾಣಿ ಜತೆ ಮಾತನಾಡಿ, ‘2ನೇ ಹಂತದಲ್ಲಿ ಹೆಚ್ಚಾಗಿ ಸ್ಥಳೀಯ ಯುವಕರನ್ನೇ ಕೇಂದ್ರೀಕರಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತದೆ. 2ನೇ ಹಂತಕ್ಕೆ 2 ಅರ್ಜಿಗಳು ಬಂದಿದ್ದು ಪರಿಶೀಲಿಸಲಾಗುತ್ತಿದೆ. ಯುವಕರು ಪ್ರಯೋಜನ ಪಡೆದುಕೊಳ್ಳಲು ಮುಂದೆ ಬರಬೇಕು’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.