ಮಂಗಳೂರಿನ ಮಹಿಳೆಗೆ ಮಿಸಸ್ ಗ್ಲೋಬಲ್-2017 ಕಿರೀಟ
Team Udayavani, Aug 8, 2017, 7:20 AM IST
ಮಹಾನಗರ:ಮಂಗಳೂರು ಮೂಲದ ವಿಜಯಲಕ್ಷ್ಮೀ ರತೀಶನ್ ಅವರು ಮಿಸಸ್ ಗ್ಲೋಬಲ್ 2017 ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
2005ರಲ್ಲಿ ದುಬೈಯಲ್ಲಿ ನಡೆದ ಮೇ ಕೀÌನ್ ಸ್ಪರ್ಧೆಯಲ್ಲಿ ವಿಜಯಲಕ್ಷ್ಮಿ ವಿಜೇತ ರಾಗಿದ್ದರು. ಬಳಿಕ ಕೆಲವು ವರ್ಷಗಳಲ್ಲಿ ತನ್ನ 10 ವರ್ಷದ ಮಗಳು ಸಮ್ರಿನ್ ಜತೆ ಸೂಪರ್ ಮಾಮ್ ಸ್ಪರ್ಧೆಯಲ್ಲೂ ಭಾಗವ ಹಿಸಿ ಪ್ರಥಮ ಸ್ಥಾನ ಪಡೆದರು. ಹೀಗೆ ಕೆಲವು ಸ್ಫರ್ಧೆಗಳಲ್ಲಿ ಭಾಗವಹಿಸಿದ ಬಳಿಕ 2017ರಲ್ಲಿ ಮಿಸಸ್ ಗ್ಲೋಬಲ್ ಸ್ಪರ್ಧೆಗೆ ಆಯ್ಕೆಗೊಂಡರು.
ಜಗತ್ತಿನ 25 ದೇಶಗಳ ನೂರಾರು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದುಬೈನಿಂದ ವಿಜಯಲಕ್ಷ್ಮೀ ಆಯ್ಕೆಗೊಂಡರು. ಕೊನೆಯ ಸುತ್ತಿನಲ್ಲಿ ಭಾಗವಹಿಸುವ 17 ಮಂದಿಗೆ ಕೊಚ್ಚಿಯಲ್ಲಿ ತರಬೇತಿ ನೀಡಲಾಯಿತು. ಅಂತಿಮವಾಗಿ ಉತ್ತಮ ಪ್ರದರ್ಶನ ನೀಡಿದ ವಿಜಯಲಕ್ಷ್ಮೀ ಮಿಸಸ್ ಗ್ಲೋಬಲ್ ಆಗಿ ಹೊರಹೊಮ್ಮಿದರು. ಈ ಪ್ರಶಸ್ತಿ ಬಳಿಕ ದೇಶದ ಅತೀ ದೊಡ್ಡ ಸ್ಪರ್ಧೆಗಳಲ್ಲಿ ಒಂದಾದ ಇಂಡಿಯನ್ ಫ್ಯಾಶನ್ ಲೀಗ್ ನಲ್ಲಿ ಹೈದಾರಾಬಾದ್ ನ ಶ್ರವಣ್ ರಾಮಸ್ವಾಮಿ ಅವರ ಡಿಸೈನ್‌ಗೆ ವಿಜಯಲಕೀÒ$¾ ಶೋ ಸ್ಟಾಪರ್ ಆಗಿ ಕಾಣಿಸಿಕೊಂಡಿದ್ದರು.
ಸೌಂದರ್ಯ ಸ್ಪರ್ಧೆಯಿಂದ ಸಿನಿಮಾಕ್ಕೆ
ವಿಜಯಲಕ್ಷ್ಮೀಯವರು ಅಭಿನಯಿಸಿ ರುವ ಚಿತ್ರ ನಿರ್ದೇಶಕ ಹರಿದಾಸ್ ಅವರ ಮಲಯಾಳಂ ಭಾಷೆಯ ಚಿತ್ರ ಶೀಘ್ರವೇ ತೆರೆ ಕಾಣಲಿದೆ. ಇನ್ನು ಮೂರು ಚಿತ್ರಗಳಲ್ಲಿ ಅವಕಾಶ ಬಂದಿದ್ದು, ಕಥೆ ಕೇಳಿದ ಬಳಿಕ ಒಪ್ಪಿಗೆ ನೀಡಲಿದ್ದೇನೆ. ನಾನು ಹುಟ್ಟಿ ಬೆಳೆದ ಊರು ಮಂಗಳೂರು. ಹಾಗಾಗಿ ಕನ್ನಡ ಅಥವಾ ತುಳು ಚಿತ್ರದಲ್ಲಿ ಉತ್ತಮ ಅವಕಾಶ ಬಂದರೆ ಖಂಡಿತ ನಟಿಸುತ್ತೇನೆ ಎನ್ನುತ್ತಾರೆ ಅವರು.
ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ
ನಿಟ್ಟೆ ಮಾಸ್ ಕಮ್ಯೂನಿಕೇಶನ್ ನಲ್ಲಿ ಪದವಿ ಮಾಡುತ್ತಿರುವ ವಿಜಯಲಕ್ಷ್ಮೀ ಅವರ ಮಗ ಆದಿತ್ಯ, ಪದವಿ ಪೂರ್ವ ಶಿಕ್ಷಣವನ್ನು ದುಬೈನಲ್ಲಿ ಮುಗಿಸಿದ್ದರು. ಆದಿತ್ಯ ಅವರು ನಿರ್ಮಿಸಿದ ಕಿರುಚಿತ್ರ ದುಬೈ ಚಿಲ್ಡನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೆಚ್ಚುಗೆ ಪಡೆದಿತ್ತು. ಮಗಳು ಸಮ್ರಿನ್ ಈಗಾಗಲೇ ತಾಯಿಯೊಂದಿಗೆ ರ್‍ಯಾಂಪ್ ವಾಕ್ ಮಾಡಲು ಆರಂಭಿಸಿದ್ದಾರೆ. ಟೆನ್ನಿಸ್, ನೃತ್ಯಗಳನ್ನು ಕಲಿತಿರುವ ಸಮ್ರಿನ್ ಗೆ ಕೆಲವು ಚಿತ್ರದಲ್ಲೂ ಅವಕಾಶಗಳು ಬಂದಿವೆ. ಆದರೆ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿ ರುವುದರಿಂದ ಇದರತ್ತ ಚಿಂತಿಸಿಲ್ಲ ಎನ್ನುತ್ತಾರೆ ಸಮ್ರಿನ್ ಅವರ ತಂದೆ ರತೀಶನ್.ಇಬ್ಬರು ಮಕ್ಕಳೂ ಟ್ಯೂಷನ್ ಪಡೆ ಯದೇ ತರಗತಿಯಲ್ಲಿ ಮುಂದೆ ಬಂದಿ ರುವವರು. ನಮ್ಮ ವೃತ್ತಿ, ಫ್ಯಾಷನ್- ಏನೇ ಆದರೂ ಮಕ್ಕಳ ವಿದ್ಯಾ ಭ್ಯಾಸದ ಮೇಲೆ ಪರಿಣಾಮ ಬೀರ ದಂತೆ ಎಚ್ಚರ ವಹಿಸಿದ್ದೇವೆ ಎಂಬುದು ವಿಜಯಲಕ್ಷ್ಮೀಯವರ ಅಭಿಪ್ರಾಯ.
ಮಂಗಳೂರಿನ ನಂಟು
ಸುಮಾರು 50 ವರ್ಷಗಳ ಹಿಂದೆ ಕೇರಳದಿಂದ ಉದ್ಯೋಗ ನಿಮಿತ್ತ ಮಂಗಳೂರಿಗೆ ಬಂದ ಸಿ.ಎಸ್. ನಂಬಿಯಾರ್ ಹಾಗೂ ವಸಂತಿ ನಂಬಿಯಾರ್ ಅವರ ಪುತ್ರಿ ವಿಜಯಲಕ್ಷ್ಮೀ ರತೀಶನ್. ನಗರದ ಕೆನರಾ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪದವಿ ಪೂರ್ವ ಶಿಕ್ಷಣ. ದೇರಳಕಟ್ಟೆಯ ನಿಟ್ಟೆ ಸಂಸ್ಥೆಯಲ್ಲಿ ಬಿ ಫಾರ್ಮ ಮುಗಿಸಿ ಕಾಞಿಂಗಾಡ್ ಮೂಲದ ರತೀಶನ್ ಅವರನ್ನು ವರಿಸಿ ದುಬೈ ಗೆ ಹಾರಿದರು. ಪತಿ ಮಂಗಳೂರು ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಅವರ ಕಂಪೆನಿಯಲ್ಲಿ ಬಿಸಿನೆಸ್ ಡೆವಲಪ್‌ಮೆಂಟ್ ಆಫೀಸರ್ ಆಗಿದ್ದಾರೆ. 14 ವರ್ಷಗಳ ಕಾಲ ದುಬೈಯ ಶಿಪ್ಪಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯಲಕ್ಷ್ಮೀ ಅವರು ಬಳಿಕ ಕೆಲಸ ಬಿಟ್ಟು ಮಕ್ಕಳ ಪೋಷಣೆಯಲ್ಲಿ ತೊಡಗಿದರು.
ಎಲ್ಲರ ಸಹಕಾರ
ಕಾಲೇಜು ಜೀವನದಲ್ಲಿ ನೃತ್ಯಗಳಲ್ಲಿ ತೊಡಗಿಸಿಕೊಂಡಿದ್ದೆ. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಆಕಸ್ಮಿಕ. ನನ್ನ ಪತಿ ಹಾಗೂ ಹೆತ್ತವರ ಸಹಕಾರದಿಂದಲೇ ಇಷ್ಟು ದೊಡ್ಡ ಸಾಧನೆ ಸಾಧ್ಯವಾಯಿತು. ಪ್ರಸ್ತುತ ನಾನು ಯಾವುದೇ ಡಯಟ್ ಮಾಡುತ್ತಿಲ್ಲ; ಜಿಮ್ ಗೆ ಹೋಗುತ್ತಿಲ್ಲ. ಎಲ್ಲಾ ಆಹಾರವನ್ನು ಸಮ ಪ್ರಮಾಣದಲ್ಲಿ ಸೇವಿಸುತ್ತೇನೆ.
ವಿಜಯಲಕ್ಷ್ಮೀ
ಸೌಂದರ್ಯ ಸ್ಪರ್ಧೆ ವಿಜೇತೆ
ಸಹಕಾರ ನೀಡಬೇಕು
ನನ್ನ ಪತ್ನಿಯ ಪ್ರತಿಭೆಯ ಬಗ್ಗೆ ನನಗೆ ತಿಳಿದಿತ್ತು. ಆ ಕಾರಣದಿಂದಲೇ ಸಹಕಾರ ನೀಡಿದೆ. ಅದುವೇ ಇಂದು ಈ ಕೀರ್ತಿಗೆ ಭಾಜನರನ್ನಾಗಿಸಿದೆ. ಮುಂದೆಯೂ ಉತ್ತಮ ಅವಕಾಶಗಳಿದ್ದರೆ ಬಳಸಿಕೊಳ್ಳುವಲ್ಲಿ ಸಹಕರಿಸುತ್ತೇನೆ.
- ರತೀಶನ್
ವಿಜಯಲಕ್ಷ್ಮೀ ಪತಿ
– ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.