ಕಡಲತೀರದಲ್ಲಿ ಸಮರ ಕಲೆಯ ಕೂಟ
ನವಂಬರ್‌ನಲ್ಲಿ 5 ದಿನ ವಿಶ್ವದ ಮೊದಲ "ಬೀಚ್ ಮೊಯ್‌ಥಾಯ್'
Team Udayavani, Sep 14, 2019, 5:30 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಥಾೖಲಂಡ್‌ನ ಜನಪ್ರಿಯ ಆತ್ಮರಕ್ಷಣ ಕಲೆ “ಮೊಯ್‌ಥಾಯ್’ ಈಗ ವಿಶ್ವದಲ್ಲೇ ಮೊದಲ ಬಾರಿಗೆ ಬೀಚ್ ಕ್ರೀಡಾಕೂಟವಾಗಿ ಅನಾವರಣಗೊಳ್ಳಲಿದೆ. ಪ್ರಪ್ರಥಮ “ಮೊಯ್‌ಥಾಯ್ ಚಾಂಪಿಯನ್‌ಶಿಪ್’ನ
ಆತಿಥ್ಯದ ಅವಕಾಶ ಪಣಂಬೂರು ಕಡಲ ಕಿನಾರೆಗೆ ಲಭಿಸಿದೆ.
ಕರ್ನಾಟಕ ಮೊಯ್‌ಥಾಯ್ ಅಸೋಸಿಯೇಶನ್ ಹಾಗೂ ಮಂಕಿ ಮೆಮ್ ಫೈಟ್ ಕ್ಲಬ್ ಮತ್ತು ಫಿಟ್‌ನೆಸ್ ಸೆಂಟರ್ ಈ ಕ್ರೀಡಾಕೂಟ ಆಯೋಜಿಸಿದ್ದು, ನ.20 ರಿಂದ 24ರ ವರೆಗೆ ಐದು ದಿನ ಪಣಂಬೂರು ಬೀಚ್ ನಲ್ಲಿ ನಡೆಯಲಿದೆ. ಸುಮಾರು 28 ರಾಜ್ಯಗಳ 400ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊ ಳ್ಳಲಿದ್ದಾರೆ. ಮೊದಲ ನಾಲ್ಕು ದಿನ ಸೀನಿಯರ್ ವಿಭಾಗದ ಸ್ಪರ್ಧೆ ನಡೆಯಲಿದ್ದು, ಕೊನೆಯ ದಿನ ಪ್ರೊ-ಇಂಡಿಯಾ ಸ್ಪರ್ಧೆ ಇರಲಿದೆ. ಸ್ಪರ್ಧೆಯ ರೂಪುರೇಷೆಗಳನ್ನು ಅಸೋಸಿ ಯೇಶನ್ ಸಿದ್ಧಪಡಿಸುತ್ತಿದೆ.
ಚಾಂಪಿಯನ್‌ಶಿಪ್ ಆತಿಥ್ಯ ವಹಿಸಲು ತ್ರಿಪುರ, ಛತ್ತೀಸ್‌ಗಢ ಮತ್ತು ಕರ್ನಾಟಕ ಸ್ಪರ್ಧೆಯಲ್ಲಿದ್ದವು. ಈ ಹಿಂದೆ ನಡೆದ ರಾಜ್ಯ ಮಟ್ಟದ ಕೂಟವನ್ನು ಶಿಸ್ತುಬದ್ಧವಾಗಿ ಆಯೋಜಿಸಿದ್ದ ಕಾರಣ ಕರ್ನಾಟಕಕ್ಕೆ ಅವಕಾಶ ಲಭಿಸಿದೆ. ರಾಜ್ಯ ಅಸೋಸಿಯೇಶನ್‌ನಲ್ಲಿ ಹೆಚ್ಚಿನವರು ಕರಾವಳಿಗರಾಗಿದ್ದು, ಇದೇ ಮೊದಲ ಬಾರಿಗೆ ಬೀಚ್‌ನಲ್ಲಿ ಆಯೋಜಿಸಲು ತೀರ್ಮಾನಿಸಿದ್ದಾರೆ.
ಈ ಬಾರಿಯ ರಾಜ್ಯ ಮಟ್ಟದ ಚಾಂಪಿಯನ್‌ಶಿಪ್ ಕೂಟ ಬೆಂಗಳೂರಿನ ಇಟಿಎ ಮಾಲ್‌ನಲ್ಲಿ ಇತ್ತೀಚೆಗೆ ನಡೆದಿತ್ತು. 12 ಜಿಲ್ಲೆಗಳ ಸುಮಾರು 200 ಸ್ಪರ್ಧಿಗಳು ಭಾಗವಹಿಸಿದ್ದರು. ಮಂಗಳೂರನ್ನು ಪ್ರತಿನಿಧಿಸಿದ 18 ಸ್ಪರ್ಧಿಗಳ ಪೈಕಿ 17 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಆಯ್ಕೆಯಾದ ಒಟ್ಟು 60 ಸ್ಪರ್ಧಿಗಳು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಉತ್ತಮ ಪ್ರದರ್ಶನ
ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ರಾಜ್ಯದ ಸ್ಪರ್ಧಾಳುಗಳು ಈಗಾಗಲೇ ಉತ್ತಮ ಪ್ರದರ್ಶನ ನೀಡಿದ್ದಾರೆ. 2016ರಲ್ಲಿ ಮುಂಬಯಿಯಲ್ಲಿ ಕೂಟ ನಡೆದಾಗ ರನ್ನರ್ ಅಪ್, 2017ರಲ್ಲಿ ಜೈಪುರದಲ್ಲಿ ನಡೆದಾಗ ಸಮಗ್ರ ಪ್ರಶಸ್ತಿ, 2018ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಆಯೋಜನೆ ಗೊಂಡಿದ್ದಾಗ ರನ್ನರ್‌ಅಪ್ ಪ್ರಶಸ್ತಿ ರಾಜ್ಯಕ್ಕೆ ಲಭಿಸಿದೆ. ಈ ಹಿಂದೆ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಅನ್ವಿತಾ ಆಳ್ವ ತೃತೀಯ ಸ್ಥಾನ ಪಡೆದಿದ್ದಾರೆ.
ಏನಿದು ಮೊಯ್‌ಥಾಯ್?
ಥಾç ಸಮರ ಕಲೆಗಳಲ್ಲಿ ಮೊಯ್‌ಥಾಯ್ ಒಂದು. ಕರಾಟೆ, ಕುಂಗ್ ಫು, ಕಿಕ್ ಬಾಕ್ಸಿಂಗ್‌ನಂಥದ್ದೇ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದನ್ನು ಆಡಲಾಗುತ್ತಿದೆ. ಮೈ ಕೈ ಗಟ್ಟಿಗೊಳಿಸುವುದಲ್ಲದೆ, ಸ್ವರಕ್ಷಣೆಗೂ ಸಹಕಾರಿ. ಏಷ್ಯನ್ ಗೇಮ್ಸ್‌ನಲ್ಲಿ ಡೆಮೋ ಇವೆಂಟ್ ಆಗಿ ಪರಿಚಯಿಸಲಾಗಿತ್ತು.
ಸ್ಪರ್ಧೆಯಲ್ಲಿ ಕರಾವಳಿ ಸಂಸ್ಕೃತಿ
ಪಣಂಬೂರಿನಲ್ಲಿ ನಡೆಯುವ ಕೂಟದಲ್ಲಿ ಕರಾವಳಿ ಸಂಸ್ಕೃತಿಯ ಸೊಗಡನ್ನು ಬಿಂಬಿಸಲು ಆಯೋಜಕರು ತೀರ್ಮಾನಿಸಿದ್ದಾರೆ. ಜತೆಗೆ ರಾಜ್ಯದ ಸಮಗ್ರ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತದೆ.
ರಾಜ್ಯದಲ್ಲಿ ರಾಷ್ಟ್ರೀಯ ಮಟ್ಟದ ಮೊಯ್‌ಥಾಯ್ ಚಾಂಪಿಯನ್‌ಶಿಪ್ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಅದರಲ್ಲೂ ಬೀಚ್‌ನಲ್ಲಿ ಆಯೋಜನೆ ಇದೇ ಮೊದಲು. ಸುಮಾರು 28 ರಾಜ್ಯಗಳು ಭಾಗವಹಿಸಲಿದ್ದು, ಈಗಾಗಲೇ 25 ರಾಜ್ಯಗಳು ನೋಂದಣಿ ಮಾಡಿವೆ.
– ರಾಜ್‌ಗೋಪಾಲ್ ರೈ
ಮೊಯ್‌ಥಾಯ್ ಎಸೋಸಿಯೇಶನ್ ರಾಜ್ಯಾಧ್ಯಕ್ಷ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.