ಬುಕ್ ಆಫ್ ರೆಕಾರ್ಡ್ಸ್ ಗಾಗಿ ‘ಮಣ್ಣಿನ ಸ್ನಾನ’
Team Udayavani, Nov 12, 2018, 12:11 PM IST
ಪುತ್ತೂರು: ಮಣ್ಣಿನ ಸ್ನಾನದ ಮೂಲಕ ಪ್ರಕೃತಿ ಚಿಕಿತ್ಸೆಯ ಅರಿವು ಹೊಂದುವ ಉದ್ದೇಶದಿಂದ ಸುಮಾರು 150 ಉತ್ಸಾಹಿ ಯುವಕರು ವಿಶ್ವ ಪ್ರಕೃತಿ ಚಿಕಿತ್ಸಾ ದಿನದಂಗವಾಗಿ ರವಿವಾರ ಬಪ್ಪಳಿಗೆ ಅಂಬಿಕಾ ಬಾಲ ವಿದ್ಯಾಲಯದ ಸಭಾಂಗಣದಲ್ಲಿ ಮೈ ಪೂರ್ತಿ ಮಣ್ಣು ಮೆತ್ತಿಕೊಂಡಿದ್ದರು.
ಮಿನಿಸ್ಟ್ರಿ ಆಫ್ ಆಯುಷ್ ಇಂಡಿಯಾ ಮತ್ತು ಆಯುಷ್ ಲೈಫ್ ನೇತೃತ್ವದಲ್ಲಿ ವಿಶ್ವ ಪ್ರಕೃತಿ ಚಿಕಿತ್ಸಾ ದಿನದ ಅಂಗವಾಗಿ ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ವಿಶ್ವ ಮಟ್ಟಕ್ಕೆ ತಿಳಿಸುವ ಉದ್ದೇಶದೊಂದಿಗೆ ದೇಶದಾದ್ಯಂತ ಮಡ್ ಬಾತ್ ಮೂಲಕ ಏಷಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿಸುವ ಅಭಿಯಾನವನ್ನು ರವಿವಾರ ಹಮ್ಮಿಕೊಳ್ಳಲಾಗಿದ್ದು, ಪುತ್ತೂರಿನಲ್ಲಿ ಸಾರಸ್ವತ ಯೂತ್ ಫೌಂಡೇಶನ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾರಸ್ವತ ಯೂತ್ ಫೌಂಡೇಶನ್‌ನ ಕಾರ್ಯ ದರ್ಶಿ ಬಿಪಿನ್‌ಚಂದ್ರ ವಾಗ್ಲೆ, ದೇಶದ ವಿವಿಧ ಕಡೆಗಳಲ್ಲಿ 11ರಿಂದ 12.30ರ ತನಕ ಮಡ್ ಬಾತ್ ಮೂಲಕ ವಿಶ್ವದಾಖಲೆ ಮುರಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐಎನ್‌ಒ ದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯದ ಅಧ್ಯಕ್ಷ ಹರೀಶ್ ಆರ್. ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸಾತ್ವಿಕಾ ಮಾಹಿತಿ ನೀಡಿ, ಪ್ರಕೃತಿ ಚಿಕಿತ್ಸೆಯಲ್ಲಿ 5 ತಣ್ತೀಗಳಿವೆ. ಇದರಲ್ಲಿ ಪೃಥ್ವಿಯೂ ಒಂದು. ಮಣ್ಣಿನ ಲೇಪನದ ಮೂಲಕ ಮನುಷ್ಯ ದೇಹವನ್ನು ಸುಸ್ಥಿತಿಯಲ್ಲಿ ಇಡಬಹುದು.ಇದರಿಂದ ಭೌತಿಕ ಹಾಗೂ ರಾಸಾಯನಿಕ ಲಾಭವಿದೆ ಎಂದು ಹೇಳಿದರು.
ಆರೋಗ್ಯಕ್ಕೂ ಪ್ರಯೋಜನಕಾರಿ
ಮಣ್ಣಿನ ಲೇಪವನ್ನು ದೇಹದ ಸಣ್ಣ ಭಾಗಕ್ಕೆ ಹಚ್ಚಿ ಪ್ರಾಯೋಗಿಕವಾಗಿ ನೋಡಬಹುದು. ಪೂರಕ ಮಣ್ಣಿನ ಆಯ್ಕೆಯೂ ಕಷ್ಟ.
ವಿಶೇಷತೆ
ಯುವಕರು ಮಣ್ಣಿನ ಲೇಪನದ ಅರಿವಿನೊಂದಿಗೆ ಪ್ರಾಯೋಗಿಕ ಅನುಭವ ಪಡೆದುಕೊಂಡರು.
ದೇಶದಾದ್ಯಂತ ಏಕಕಾಲದಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಿತು.
ಭಾಗವಹಿಸಿದ ಪ್ರತಿಯೊಬ್ಬರ ಫೂಟೋ ಸಹಿತ ಮಿನಿಸ್ಟ್ರಿ ಆಫ್ ಆಯುಷ್ ಇಂಡಿಯಾದ ಮೂಲಕ ಬುಕ್ ಆಫ್ ಏಷಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ವಿವರ ಕಳುಹಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.